
ಹುಬ್ಬಳ್ಳಿ (ಅ.12): ಲೈಂಗಿಕ ಕಿರುಕುಳದ ವಿರುದ್ಧ Me Too ಅಭಿಯಾನ ಶುರುವಾಗಿದೆ. ಈ ಅಭಿಯಾನದ ಬಗ್ಗೆ ನಟಿ ಶೃತಿ ಹರಿಹರನ್ ಮಾತನಾಡಿದ್ದಾರೆ.
#MeToo ಅಭಿಯಾನದಿಂದ ಖುಷಿಯಾಗಿದೆ. ಈಗಲಾದ್ರು ಮಹಿಳೆಯರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ. ಈ ಅಭಿಯಾನ ಮುಂದುವರೆಯುತ್ತಿದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಬಹಿರಂಗೊಳುತ್ತಿದೆ. ಈ ಅಭಿಯಾನ ಗೆಮ್ ಚೆಂಜರ್ ಆಗಲಿದೆ ಎಂದು ಶೃತಿ ಹರಿಹರನ್ ಹೇಳಿದ್ದಾರೆ.
ಯಾವಾಗ ಹೇಳಿದರೂ ಸತ್ಯ ಸತ್ಯವೇ. ಒಬ್ಬ ಮಹಿಳೆಗೆ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವದು ಕಷ್ಟಕರ. ಇದು ಮಿಡಿಯಾ ಸೆನ್ಸೆಸನಲ್ ಆಗುತ್ತಿದೆ. ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಆಗದಿದ್ರು ಕೆಲವರಿಗೆ ಶಿಕ್ಷೆಯಾಗಲಿ. ಮುಂದಿನ ದಿನಗಳಲ್ಲಿ ದೌರ್ಜನ್ಯ ಮಾಡುವರು ವಿಚಾರ ಮಾಡುವಂತಾಗಬೇಕು. ಇದು ಗಂಡು ಮತ್ತು ಹೆಣ್ಣಿನ ಪ್ರಶ್ನೆಯಲ್ಲ. ಅಧಿಕಾರ ಬಲ ಹಾಗೂ ಹಣಬಲದಿಂದ ಇಂತ ಕೃತ್ಯ ನಡೆಯುತ್ತಿವೆ ಎಂದಿದ್ದಾರೆ.
ಇದು ಚಿತ್ರ ರಂಗದಲ್ಲಿ ಮಾತ್ರ ಇಲ್ಲ. ಎಲ್ಲ ಫೀಲ್ಡ್ ಗಳಲ್ಲೂ ಕಾಸ್ಟಿಂಗ್ ಕೌಚ್ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಫೈರ್ ಅಂತ ಸಮಿತಿ ಮಾಡುತ್ತಿದೆ. ಈ ಸಮಿತಿಯಲ್ಲಿ ಕವಿತಾ ಲಂಕೇಶ್, ನಾನು ಹಾಗೂ ಪ್ರಿಯಾಂಕಾ ಉಪೇಂದ್ರ ಇದ್ದೇವೆ. ತಾರ್ಕಿಕ ಅಂತ್ಯ ದೊರೆಯುವವರೆಗೂ #MeToo ಅಭಿಯಾನ ಮುಂದುವರೆಯಲಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.