
ಸುಮಲತಾ ಅಂಬರೀಶ್ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡ ಸಂಭ್ರಮದಲ್ಲಿದ್ದರು. ‘ನಿರ್ದೇಶಕರು ಬಂದು ಕತೆ ಹೇಳಿದಾಗ ತುಂಬಾ ಸಿಂಪಲ್ಲಾಗಿದೆ ಅನಿಸಿತು. ಆ ಮೇಲೆ ಚಿತ್ರೀಕರಣ ಮಾಡುತ್ತ ಹೋದಂತೆ ಅದ್ಭುತವಾದ ಕತೆ, ಹೊಸ ರೀತಿಯ ಪಾತ್ರ ಎಂಬುದು ಗೊತ್ತಾಯಿತು. ಈಗ ಟೀಸರ್ ನೋಡಿದಾಗ ಚಿತ್ರದ ಬಗ್ಗೆ ನಮಗೆ ಮತ್ತಷ್ಟು ನಂಬಿಕೆ ಬಂದಿದೆ. ಪಾರ್ವತಮ್ಮ ಎನ್ನುವ ಹೆಸರಿಗೆ ಒಂದು ಶಕ್ತಿ, ಪ್ರೀತಿ ಮತ್ತು ಆಕರ್ಷಣೆ ಇದೆ’ ಎಂಬುದು ಸುಮಲತಾ ಅಂಬರೀಶ್ ಅವರ ಮಾತು.
ನಟ ವಿನಯ್ ರಾಜ್‌ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಶಶಿಧರ ಕೆ.ಎಂ, ವಿಜಯಲಕ್ಷ್ಮೀ ಕೃಷ್ಣೆಗೌಡ, ಸಂದೀಪ್ ಶಿವಮೊಗ್ಗ ಹಾಗೂ ಶ್ವೇತ ಮಧುಸೂದನ್ ಜಂಟಿಯಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಜೆ ಶಂಕರ್ ಈ ಚಿತ್ರದ ನಿರ್ದೇಶಕರು. ಅವರಿಗಿದು ಮೊದಲ ಸಿನಿಮಾ. ‘ಮಹಿಳಾ ಪ್ರಧಾನ ಕತೆಯನ್ನು ಹೇಳುವುದಕ್ಕೆ ಹೊರಟಿರುವ ಸಿನಿಮಾ ಇದು. ಅಮ್ಮ- ಮಗಳು ಈ ಚಿತ್ರದ ಮುಖ್ಯ ಕೇಂದ್ರಗಳು. ಅವರ ಸುತ್ತ ಸಿನಿಮಾ ಸಾಗುತ್ತದೆ’ ಎಂದರು ನಿರ್ದೇಶಕರು.
ನಟ ಸೂರಜ್ ಗೌಡ ಚಿತ್ರದ ಮತ್ತೊಂದು ಮುಖ್ಯ ಪಾತ್ರಧಾರಿ. ಪೂಜಾರಿ ಮಗನ ಪಾತ್ರದಲ್ಲಿ ಬಂದು ಚಿತ್ರಕ್ಕೆ ಹೊಸ ತಿರುವು ಕೊಡುತ್ತಾರೆ ಸೂರಜ್ ಗೌಡ. ಪ್ರಭು, ತರಂಗವಿಶ್ವ ಅವರು ಸಹ ನಟಿದ್ದಾರೆ. ಇನ್ನೂ ನಟಿ ಹರಿಪ್ರಿಯಾ ಅವರಿಗೆ ಸುಮಲತಾ ಅಂಬರೀಶ್ ಅವರೊಂದಿಗೆ ನಟಿಸಿರುವ ಸಂಭ್ರಮ ಇದೆ. ‘ನಾನು ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನದು ಪವರ್‌ಫುಲ್ ಪಾತ್ರ’ ಎಂದರು ಹರಿಪ್ರಿಯಾ. ಮಿದುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.