ನಟಿ ರಮ್ಯಾ ನೇತೃತ್ವದಲ್ಲಿ ಮಹಿಳಾ ಕ್ರೀಡೆಗೆ ನೂತನ ಅಧ್ಯಾಯ; QPL 2.0 ಲೋಗೋ ಲಾಂಚ್‌!

Published : Jul 11, 2025, 03:46 PM ISTUpdated : Jul 11, 2025, 03:47 PM IST
Ramya Pramod Shetty

ಸಾರಾಂಶ

ಕಾರ್ಯಕ್ರಮದಲ್ಲಿ QPL ಸ್ಥಾಪಕ ಮಹೇಶ್ ಗೌಡ, ಜನಪ್ರಿಯ ನಟಿ ಹಾಗೂ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ, ಹಾಗೂ ಪ್ರಸಿದ್ಧ ನಟ ಮತ್ತು QPL ಸಹ ಸಂಸ್ಥಾಪಕ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು. ಜೊತೆಗೆ ಬಾಲಿವುಡ್ ನಟಿ ಎಲಿ ಎವ್ರಾಮ್ ಕೂಡ ತಮ್ಮ ಬೆಂಬಲವನ್ನು ಸೂಚಿಸಲು ಆಗಮಿಸಿದ್ದರು.

ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಇದರ ಬಹುನಿರೀಕ್ಷಿತ ದ್ವಿತೀಯ ಆವೃತ್ತಿಯ ‘ಕ್ರೀಡೋತ್ಸವ’ ಲೋಗೋವನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿಲಾಯಿತು. ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೊದಲ ಆವೃತ್ತಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆ ನಂತರ, ಈ ಸಲದ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದ್ದು, ಇದು ಕೇವಲ ಕ್ರೀಡೆ ಮಾತ್ರವಲ್ಲ, ಒಂದು ಮನರಂಜನೆಯ ಹಬ್ಬವಾಗುತ್ತಿದೆ.

25 ಮಿಲಿಯನ್ ಡಿಜಿಟಲ್ ವೀಕ್ಷಣೆಗಳು ಮತ್ತು 5000+ ಪ್ರೇಕ್ಷಕರು ಎಂಬ ಮೊದಲ ಆವೃತ್ತಿಯ ಭರ್ಜರಿ ಯಶಸ್ಸಿನ ಬಳಿಕ, QPL 2.0 ಭಾರತವ್ಯಾಪಿ ಚಳುವಳಿಯಾಗಿ ರೂಪುಗೊಳ್ಳಲು ಸಜ್ಜಾಗಿದೆ.

ಕಾರ್ಯಕ್ರಮದಲ್ಲಿ QPL ಸ್ಥಾಪಕ ಮಹೇಶ್ ಗೌಡ, ಜನಪ್ರಿಯ ನಟಿ ಹಾಗೂ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ, ಹಾಗೂ ಪ್ರಸಿದ್ಧ ನಟ ಮತ್ತು QPL ಸಹ ಸಂಸ್ಥಾಪಕ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು. ಜೊತೆಗೆ ಬಾಲಿವುಡ್ ನಟಿ ಎಲಿ ಎವ್ರಾಮ್ ಕೂಡ ತಮ್ಮ ಬೆಂಬಲವನ್ನು ಸೂಚಿಸಲು ಆಗಮಿಸಿದ್ದರು. ಬೆಂಗಳೂರಿನ ಕ್ರೀಡೆ, ಫ್ಯಾಷನ್ ಮತ್ತು ಚಲನಚಿತ್ರ ಲೋಕದ ಗಣ್ಯರು ಈ ವೇಳೆ ಹಾಜರಿದ್ದರು.

“QPL 2.0 ಮೂಲಕ ನಾವು ಕೇವಲ ಮುಂದಿನ ಹಂತಕ್ಕೆ ಹೋಗುತ್ತಿಲ್ಲ — ನಾವು ಮಹಿಳೆಯರಿಗಾಗಿ ಕ್ರೀಡೆ ಮತ್ತು ಮನರಂಜನೆ ಕ್ಷೇತ್ರವನ್ನು ಪೂರ್ತಿಯಾಗಿ ಬದಲಾಯಿಸುತ್ತಿದ್ದೇವೆ,” ಎಂದು ಮಹೇಶ್ ಗೌಡ ಹೇಳಿದರು. “ಈ ಸೀಸನ್ನಲ್ಲಿ ನಾವು 50 ಮಿಲಿಯನ್ ಡಿಜಿಟಲ್ ವೀಕ್ಷಣೆಗಳ ಗುರಿ ಹೊಂದಿದ್ದೇವೆ, ಭಾರತದೆಲ್ಲೆಡೆ ವಿಸ್ತರಿಸಲು ತಯಾರಾಗಿದ್ದೇವೆ. ಇಂದು ಯುವಕರು ಮೊಬೈಲ್ ಗೇಮಿಂಗ್ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚು ನಿಲುಕುತ್ತಿರುವುದನ್ನು ನೋಡಿ ಚಿಂತೆಗೊಳಗಾಗಬೇಕಾಗಿದೆ. ಸಿನಿ ತಾರೆಗಳು ತಾವು ಫಿಟ್ ಆಗಿ ಉಳಿಯಲು ಸಮಯ ಒದಗಿಸುತ್ತಿರುವುದೇ ಯುವ ಜನತೆಗೆ ಪ್ರೇರಣೆಯಾಗಿದೆ. ನಿಜವಾದ ಸಬಲೀಕರಣ ನಿಜವಾದ ಭಾಗವಹಿಸುವಿಕೆಯಿಂದ ಶುರುವಾಗುತ್ತದೆ.”

ಮಾಧ್ಯಮದೊಂದಿಗೆ ಮಾತನಾಡಿದಾಗ ನಟಿ ರಮ್ಯಾ ಅವರು ಹೇಳಿದ್ದು:

"ಕ್ಯೂಪಿಎಲ್ ಮಹಿಳಾ ಕಲಾವಿದರ ಬೆಂಬಲಿಸಿ, ಅವರನ್ನು ಉತ್ತೇಜಿಸುತ್ತಿರುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ಈ ವೇದಿಕೆಯ ಮೂಲಕ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಜೊತೆಗೆ ಮಹಿಳೆಯರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿತರಾಗಬೇಕು. ಇದು ನಮಗೆ ದೈಹಿಕವಾಗಿ ಆರೋಗ್ಯಕರವಾಗಿರುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಆನ್‌ಲೈನ್ ಗೇಮಿಂಗ್ ಹಾಗೂ ಸೋಷಲ್ ಮೀಡಿಯಾದಿಂದ ದೂರವಿರಲು ನೆರವಾಗುತ್ತದೆ. ಕ್ಯೂಪಿಎಲ್‌ನೊಂದಿಗೆ ನನ್ನ ಸಹಯೋಗ ಇರುವುದಕ್ಕೆ ನನಗೆ ಸಂತೋಷವಾಗಿದೆ."

QPL 2.0 ಕಾರ್ಯಕ್ರಮವು ಯುವಜನತೆಗೆ ಡಿಜಿಟಲ್ ಮಾಧ್ಯಮದ ಹದ ಮೀರುವ ಬಳಕೆಯ ಬದಲು ಶಾರೀರಿಕ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಸಂದೇಶ ನೀಡುತ್ತದೆ.

“QPL ಎಂದರೆ ಕ್ರೀಡೆಯೊಂದೇ ಅಲ್ಲ, ಇದು ಗುರಿಯನ್ನು ಹೊಂದಿರೋ ಮನರಂಜನೆ,” ಎಂದರು ಪ್ರಮೋದ್ ಶೆಟ್ಟಿ. “ಇದು ಚಲನಚಿತ್ರ ಕ್ಷೇತ್ರ ಮತ್ತು ಕಾರ್ಪೊರೇಟ್ ಜಗತ್ತನ್ನು ಒಂದು ವೇದಿಕೆಯಲ್ಲಿ ತಂದುಕೊಂಡು, ಫಿಟ್ನೆಸ್, ಮಹಿಳಾ ಸಬಲೀಕರಣ ಮತ್ತು ಚೈತನ್ಯಮಯ ಒಗ್ಗಟ್ಟು ಒದಗಿಸುತ್ತದೆ. ಇದು ಯುವಜನತೆಯಲ್ಲಿನ ಅಜಾಗರೂಕ ತಂತ್ರಜ್ಞಾನ ಬಳಕೆಗೆ ಸಮರ್ಪಕವಾಗಿ ಪೂರಕವಾಗಿದೆ.”

ಈ ಸಲದ ಆವೃತ್ತಿಯು ಮಹಿಳಾ ತಾಂತ್ರಿಕರು ಮತ್ತು ಪರದೆಯ ಹಿಂದೆ ಕೆಲಸಮಾಡುವವರಿಗೂ ವೇದಿಕೆ ಒದಗಿಸುತ್ತಿದೆ. ಇದು ಸಮಗ್ರ ಸಬಲೀಕರಣದತ್ತ ಹೆಜ್ಜೆ ಹಾಕಿದ ನಿಜವಾದ ಮುಂದಳಿಕೆಯ ಸಂಕೇತವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದಳಪತಿ ವಿಜಯ್ 'ಜನ ನಾಯಗನ್' ಚಿತ್ರದ ಕಥೆ ಇದೇನಾ? ಲೀಕ್ ಆದ ಸ್ಟೋರಿ.. ಶಾಕ್ ಆಯ್ತು ಚಿತ್ರತಂಡ!
ನಾನು ಅವಳಲ್ಲ.. ಕಾಳ್ಗಿಚ್ಚಿನಂತೆ ಹರಡಿದ ಎಐ ಫೋಟೋ: ರಶ್ಮಿಕಾ, ಶ್ರೀಲೀಲಾ ಬಳಿಕ ಸಿಟ್ಟಾದ ನಿವೇತಾ ಥಾಮಸ್