ಮತ್ತೆ ರಾಕಿ ಭಾಯ್ ಹವಾ.. 'KGF 3' ಕಥೆ ರೆಡಿ: ಪ್ರಶಾಂತ್ ನೀಲ್ ಕೊಟ್ರು ಬಿಗ್ ಅಪ್‌ಡೇಟ್

Published : Sep 08, 2026, 03:13 PM IST
KGF Chapter 3

ಸಾರಾಂಶ

KGF 3 ಸಿನಿಮಾ ಖಚಿತವಾಗಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ. ಯಶ್ ನಟನೆಯ ಮೂರನೇ ಭಾಗದ ಕಥೆ ಮತ್ತು ಚಿತ್ರಕಥೆ ಈಗಾಗಲೇ ಸಿದ್ಧವಾಗಿದ್ದು, ಕೆಲವು ವಿಚಾರಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದ ಜೋಡಿ ಯಶ್ ಹಾಗೂ ಪ್ರಶಾಂತ್ ನೀಲ್. ಈ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುವುದರ ಜೊತೆಗೆ ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆಸಿದವು.

‘ಕೆಜಿಎಫ್ 3’ ಸಿನಿಮಾ ಬರುತ್ತಾ? ಈ ಪ್ರಶ್ನೆಗೆ ಕೊನೆಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಉತ್ತರ ನೀಡಿದ್ದಾರೆ. ‘ಕೆಜಿಎಫ್ 3’ ಖಂಡಿತವಾಗಿಯೂ ಆಗಲಿದೆ ಎಂದು ಸ್ಪಷ್ಟಪಡಿಸಿರುವ ನೀಲ್, ಸಿನಿಮಾದ ಕಥೆ ಮತ್ತು ಚಿತ್ರಕಥೆ ಈಗಾಗಲೇ ಸಿದ್ಧವಾಗಿದೆ ಎಂಬ ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಯಶ್ ಅಭಿಮಾನಿಗಳ ಬಹುದಿನಗಳ ಕುತೂಹಲಕ್ಕೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ.

2022ರ ಏಪ್ರಿಲ್‌ನಲ್ಲಿ ‘ಕೆಜಿಎಫ್ 2’ ತೆರೆಗೆ ಬಂದಿತ್ತು. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿಯೇ ‘ಕೆಜಿಎಫ್ 3’ ಬರುವ ಸುಳಿವು ನೀಡಲಾಗಿತ್ತು. ಅಂದಿನಿಂದಲೇ ಅಭಿಮಾನಿಗಳು ಮೂರನೇ ಭಾಗದ ಬಗ್ಗೆ ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಆದರೆ ಪ್ರಶಾಂತ್ ನೀಲ್ ಸದ್ಯ ಪರಭಾಷೆಯ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ‘ಕೆಜಿಎಫ್ 3’ ಯಾವಾಗ ಆರಂಭವಾಗಲಿದೆ ಎಂಬುದು ಸ್ಪಷ್ಟವಾಗಿರಲಿಲ್ಲ.

ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ನೀಲ್, ‘ಕೆಜಿಎಫ್ 3’ ಕುರಿತು ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. ಸಿನಿಮಾ ಖಂಡಿತವಾಗಿಯೂ ಬರಲಿದೆ, ಅದರ ಕಥೆ ಈಗಾಗಲೇ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ‘ಕೆಜಿಎಫ್ 2’ ಅಂತ್ಯದಲ್ಲಿ ಮೂರನೇ ಭಾಗದ ಸುಳಿವು ನೀಡಿದ್ದಕ್ಕೂ ಇದೇ ಕಾರಣ ಎಂದು ಅವರು ತಿಳಿಸಿದ್ದಾರೆ. ಸಿನಿಮಾ ಆರಂಭಿಸುವ ಮೊದಲು ಕೆಲವು ವಿಚಾರಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಮುಖ್ಯವಾಗಿ ಯಶ್ ಕೂಡ ತಮ್ಮ ಡೇಟ್ಸ್ ಹೊಂದಿಸಿಕೊಳ್ಳಬೇಕಿದೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. ಈ ಹೇಳಿಕೆ ‘ಕೆಜಿಎಫ್ 3’ ಸಿನಿಮಾ ಸದ್ಯಕ್ಕೆ ನಿಂತಿಲ್ಲ ಎಂಬ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದೆ.

ನೀಲ್‌ಗೆ ಸಾಲು ಸಾಲು ಸಿನಿಮಾಗಳು

‘ಕೆಜಿಎಫ್ 3’ಗೆ ಇನ್ನೂ ಸಮಯ ಬೇಕಾಗಲು ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾಗಳೇ ಪ್ರಮುಖ ಕಾರಣ. ಸದ್ಯ ಅವರು ಜೂ ಎನ್‌ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ‘ಸಲಾರ್ 2’ ನಿರ್ದೇಶಿಸಲಿದ್ದಾರೆ.ಅದಾದ ನಂತರ ತಮಿಳಿನಲ್ಲಿ ಅಜಿತ್ ನಟನೆಯ ಹೊಸ ಸಿನಿಮಾವೊಂದನ್ನು ನಿರ್ದೇಶಿಸುವ ಯೋಜನೆಯಿದೆ. ನಂತರ ಅಲ್ಲು ಅರ್ಜುನ್ ಅಭಿನಯದ ಹೊಸ ಸಿನಿಮಾವನ್ನೂ ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. ಈ ಸಿನಿಮಾಗಳ ಕೆಲಸಗಳು ಪೂರ್ಣಗೊಂಡ ಬಳಿಕವಷ್ಟೇ ‘ಕೆಜಿಎಫ್ 3’ ಕಡೆಗೆ ಮರಳುವ ಸಾಧ್ಯತೆಯಿದೆ.

ಸದ್ಯ ಯಶ್ ಕೂಡ ಬ್ಯುಸಿ

ಇತ್ತ ಯಶ್ ಅವರ ಸಿನಿಮಾಗಳ ಪಟ್ಟಿಯೂ ದೊಡ್ಡದಿದೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಿದ್ದು, ನಿರೀಕ್ಷಿತ ಮಟ್ಟದ ಯಶಸ್ಸು ಪಡೆಯಲಿಲ್ಲ. ಸದ್ಯ ಯಶ್ ‘ರಾಮಾಯಣ’ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ. ‘ರಾಮಾಯಣ’ ಸಿನಿಮಾದ ಪ್ರಚಾರ ಕಾರ್ಯದಲ್ಲೂ ಯಶ್ ಭಾಗಿಯಾಗಬೇಕಿದೆ. ಈ ಸಿನಿಮಾ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಯಶ್ ಈ ವರ್ಷದ ಅಂತ್ಯದ ವೇಳೆಗೆ ತಮ್ಮ ಮುಂದಿನ ಸಿನಿಮಾಗಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಬಹುದು.

ಆದರೆ ಪ್ರಶಾಂತ್ ನೀಲ್ ಅವರ ಮುಂದಿನ ಸಾಲಿನ ಸಿನಿಮಾಗಳನ್ನು ಗಮನಿಸಿದರೆ, ಯಶ್ ಮತ್ತು ನೀಲ್ ಮತ್ತೆ ಒಂದಾಗಲು ಇನ್ನೂ ಕೆಲವು ವರ್ಷಗಳ ಸಮಯ ಬೇಕಾಗಬಹುದು. ಆದರೂ ‘ಕೆಜಿಎಫ್ 3’ ಕಥೆ ಈಗಾಗಲೇ ಸಿದ್ಧವಾಗಿದೆ ಎಂಬ ಪ್ರಶಾಂತ್ ನೀಲ್ ಅವರ ಮಾತು, ಅಭಿಮಾನಿಗಳಲ್ಲಿ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

New OTT Cinema 'DC': ನಿರ್ದೇಶಕನೇ ಹೀರೋ, OOTಗೆ ಬಂತು 'ಡಿಸಿ'; 100 ಕೋಟಿ ಕ್ಲಬ್ ಸೇರಿದ ಸಿನಿಮಾ ಎಲ್ಲಿ ನೋಡಬಹುದು?
ನಿಧಿಗೆ ಕರ್ಣ ಮಾಡಿಕೊಟ್ಟ ಟೇಸ್ಟಿ ತರಕಾರಿ ದೋಸೆಯನ್ನ ಎರಡು ವಿಧಾನದಲ್ಲಿ ಮಾಡ್ಕೊಳ್ಳಿ