
ದೂದ್ ಪೇಡಾ ದಿಗಂತ್ ಹಾಗೂ ಅ್ಯಂಡಿ ಮದುವೆಯ ವಿಚಾರ ಹಾಗು ದಿನಾಂಕ ಬಿಚ್ಚಿಟ್ಟಿದ್ದಾರೆ. ಈಗ ಅದೇ ದಿನ ಮತ್ತೊಬ್ಬ ನಟ ಮದುವೆಯಾಗುತ್ತಿದ್ದಾರೆ. ಯಾರಪ್ಪಾ ಅಂತಾನಾ?
ಆ ಮದು ಮಗ ಬೇರೆಯಾರಲ್ಲಾ ನಿರ್ಮಾಪಕ ಶೈಲೇಂದ್ರ ಬಾಬು ಮಗ ಸುಮಂತ್ ಶೈಲೇಂದ್ರ. ಕೆಲ ತಿಂಗಳ ಹಿಂದೆ ಅನಿತಾ ಎಂಬ ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಡಿಸೆಂಬರ್ 11-12 ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. 11 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಆರತಕ್ಷತೆ ಹಾಗು 12 ಮುಹೂರ್ತ ನಡೆಯುತ್ತಿದೆ.
ಡಿಸಂಬರ್ ಸ್ಯಾಂಡಲ್ ವುಡ್ ಗೆ ಲಕ್ಕಿ ತಿಂಗಳು ಅನಿಸುತ್ತೆ ಯಾಕೆಂದರೆ ಒಂದು ಕಡೆ ಬಹು ನಿರಿಕ್ಷಿತ ಸಿನಿಮಾ ಕೆಜಿಫ್ ಬಿಡುಗಡೆಯಾದರೆ ಮತ್ತೊಂದು ಕಡೆ ಮಿನಿ ಯಶ್ ಬರುವ ಸಮಯ. ಇನ್ನೂ ಮದುವೆ ವಿಚಾರದಲ್ಲಿ ದಿಗ್ಗಿ- ಆ್ಯಂಡಿ ಮದುವೆ ಅದಾದ ಮೇಲೆ ಸುಮಂತ್ - ಅನಿತಾ ಮದುವೆ.
‘ಮನಸಾರೆ’ ಜೋಡಿಯ ಮನಸೋಲುವ ಲವ್ ಸ್ಟೋರಿ ಝಲಕ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.