ಶಿವಣ್ಣಗೆ ವೈರಲ್ ಫಿವರ್ ; ಆಸ್ಪತ್ರೆಗೆ ದಾಖಲು

Published : Oct 15, 2018, 11:27 AM ISTUpdated : Oct 15, 2018, 11:29 AM IST
ಶಿವಣ್ಣಗೆ ವೈರಲ್ ಫಿವರ್ ; ಆಸ್ಪತ್ರೆಗೆ ದಾಖಲು

ಸಾರಾಂಶ

ತೀವ್ರ ಜ್ವರದಿಂದ ಬಳಲುತ್ತಿರುವ ಶಿವಣ್ಣ | ಮಲ್ಯ ಆಸ್ಪತ್ರೆಗೆ ದಾಖಲು | ಇಂದು ಸಂಜೆವರೆಗೆ ಚಿಕಿತ್ಸೆ ಪಡೆಯುವ ಸಾಧ್ಯತೆ 

ಬೆಂಗಳೂರು (ಅ. 15): ನಟ ಶಿವರಾಜ್ ಕುಮಾರ್ ವೈರಲ್ ಜ್ವರದಿಂದ ಬಳಲುತ್ತಿದ್ದು ನಿನ್ನೆ ಮಧ್ಯೆ ರಾತ್ರಿ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.  ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು  ಇಂದು ಸಂಜೆವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ. 

ಸಾಲಿಗ್ರಾಮವನ್ನು ನೆನೆದು ಶಿವಣ್ಣ ಭಾವುಕರಾಗಿದ್ಯಾಕೆ?

ಪತ್ನಿ ಗೀತಾ ಶಿವರಾಜ್ ಕುಮಾರ್ ಆಸ್ಪತ್ರೆಯಲ್ಲಿದ್ದು ಶಿವಣ್ಣನನ್ನು ನೋಡಿಕೊಳ್ಳುತ್ತಿದ್ದಾರೆ.  ಬೆಳಿಗ್ಗೆ ವಿನಯ್ ರಾಜ್ ಕುಮಾರ್ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿ ಹೊರಟಿದ್ದಾರೆ. ಶಿವಣ್ಣನ ಆರೋಗ್ಯ ವಿಚಾರಿಸಲು ಸಿಎಂ ಕುಮಾರಸ್ವಾಮಿ ಹಾಗೂ ಇನ್ನಿತರ  ಗಣ್ಯರು ಬರುವ ಸಾಧ್ಯತೆ ಇದೆ.  ಗಣ್ಯ ವ್ಯಕ್ತಿಗಳ ಆಗಮನದ ಹಿನ್ನಲೆಯಲ್ಲಿ ಆಸ್ಪತ್ರೆ ಸುತ್ತಮುತ್ತ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯಶ್ ಅಮ್ಮ ಪುಷ್ಪಾ ಮಾತಿಗೆ ಉಗ್ರಾವತಾರ ತಾಳಿದ ಆರ್‌ಜಿವಿ; ಅಲ್ಲು ಅರವಿಂದ್ ಸಪೋರ್ಟ್‌ ಮಾಡಿ ಹೇಳಿದ್ದೇನು?
ನಿಗೂಢ ಪಕ್ಷಿಯ ಶಬ್ದ, ಬಳಿಕ ಒಂದೊಂದೇ ಸಾವು: 1994ರ ಕನ್ನಡದ ಥ್ರಿಲ್ಲಿಂಗ್‌ ಮಿಸ್ಟರಿ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಿ