ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್ ಹೈಕಮಾಂಡ್ ಗೆ ಬಿ ಸಿ ಪಾಟೀಲ್‌ ಡೆಡ್ ಲೈನ್..!

By Web DeskFirst Published Oct 14, 2018, 9:41 AM IST
Highlights

ಮೂಗಿಗೆ ತುಪ್ಪ ಸವರಿದ ಕಾಂಗ್ರೆಸ್ ಹೈಕಮಾಂಡ್ ಗೆ  ಹಿರೇಕೇರೂರ್  ಶಾಸಕ ಬಿ ಸಿ ಪಾಟೀಲ್‌ ಡೆಡ್ ಲೈನ್ ನೀಡಿದ್ದಾರೆ.

ಬೆಂಗಳೂರು, [ಅ.14]: ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ದೊಡ್ಡ ಕಗ್ಗಂಟಾಗತೊಡಗಿದೆ. ಅದರಲ್ಲೂ ಹಿರೇಕೇರೂರ್ ಕಾಂಗ್ರೆಸ್ ಶಾಸಕ ಬಿಸಿ ಪಾಟಿಲ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಸಚಿವ ಸ್ಥಾನ ಬೇಕೇ ಬೇಕು ಎಂದು ಪಟ್ಟುಹಿಡಿದಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಇದೀಗ ಸಂಪುಟ ವಿಸ್ತರಣೆಯನ್ನು ನವೆಂಬರ್‌ 15ರ ನಂತರ ಮಾಡುತ್ತೇವೆ ಎಂದು ಹೇಳಿದ್ದಾರೆ. 

ಸಂಪುಟ ವಿಸ್ತರಣೆ ವಿಳಂಬ: ಸ್ವಪಕ್ಷದ ವಿರುದ್ಧವೇ ಸಿಡಿದೆದ್ದ ಕಾಂಗ್ರೆಸ್ ಶಾಸಕ

ಸಚಿವ ಸಂಪುಟ ವಿಸ್ತರಣೆಯನ್ನು ಉಪ ಚುನಾವಣೆ ಬಳಿಕ ಮಾಡಲು ವರಿಷ್ಠರು ನಿರ್ಧಾರ ಮಾಡಿದ್ದಾರೆ. ನವೆಂಬರ್‌ 15ರ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.  ಹೀಗಾಗಿ ನಮ್ಮ ನಾಯಕರ ಮೇಲಿನ ನಂಬಿಕೆಯಿಂದ ನಾನು ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಉಪ ಚುನಾವಣೆ ಅಡ್ಡಿ ಇರುವುದರಿಂದ ಮುಂದೂಡಲಾಗಿದೆ. ನಮ್ಮ ನಾಯಕರ ಮೇಲೆ ನನಗೆ ವಿಶ್ವಾಸವಿದ್ದು, ನನಗೆ ಸಚಿವ ಸ್ಥಾನ ಸಿಗುವ ನಂಬಿಕೆ ಇದೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆವರೆಗೂ ಕಾಯುತ್ತೇವೆ ಎಂದು ಹೇಳಿದರು.

click me!