ಶಿವಣ್ಣ ಉದ್ಘಾಟಿಸಿದ ಸಕತ್ ಸ್ಟುಡಿಯೋ!

Published : Jan 21, 2019, 10:40 AM IST
ಶಿವಣ್ಣ ಉದ್ಘಾಟಿಸಿದ ಸಕತ್ ಸ್ಟುಡಿಯೋ!

ಸಾರಾಂಶ

ಭಿನ್ನ ಆಲೋಚನೆಗಳೊಂದಿಗೆ, ಹೊಸ ರೀತಿಯ ಕತೆಗಳ ಮೂಲಕ ‘ಲೂಸ್ ಕನೆಕ್ಷನ್’ ಎಂಬ ವೆಬ್ ಸರಣಿ ನಿರ್ಮಿಸಿ ಹೆಸರು ಮಾಡಿದ ಸಕತ್ ಸ್ಟುಡಿಯೋ , ಈಗ ಅಧಿಕೃತವಾಗಿ ತನ್ನ ಕಚೇರಿ ಆರಂಭಿಸಿದೆ.  

ನಟ ಶಿವರಾಜ್ ಕುಮಾರ್ ಸಕತ್ ಸ್ಟುಡಿಯೋದ ನೂತನ ಕಚೇರಿಯನ್ನು ಇತ್ತೀಚೆಗಷ್ಟೆ ಉದ್ಘಾಟಿಸಿದರು. ಬೆಂಗಳೂರಿನ ಜಯನಗರದಲ್ಲಿ ಆರಂಭಗೊಂಡಿದ್ದು, ಮುಂದೆ ಮತ್ತಷ್ಟು ವೆಬ್ ಸರಣಿ ಹಾಗೂ ಸಿನಿಮಾ ನಿರ್ಮಿಸುವ ಉದ್ದೇಶ ಈ ಸ್ಟುಡಿಯೋದ್ದು.

ನಟ ಸುನೀಲ್ ರಾವ್ ಅವರನ್ನು ಮತ್ತೆ ಪ್ರೇಕ್ಷಕರಿಗೆ ಪರಿಚಯಿಸಿದ ‘ಲೂಸ್ ಕನೆಕ್ಷನ್’ ಸಾಕಷ್ಟು ವೀಕ್ಷಕರನ್ನು ತನ್ನತ್ತ ಸೆಳೆದಿದ್ದು. ಇದರ ಜತೆಗೆ ‘ಡಾ ಪಾ ಜೋಶ್ಲೆ’ ಕೂಡ ಮೆಚ್ಚುಗೆಗೆ ಒಳಗಾಗಿತ್ತು. ಇದೇ ರೀತಿಯ ವೆಬ್ ಸರಣಿಗಳನ್ನು ಕನ್ನಡದಲ್ಲಿ ಮಾಡಬೇಕು ಎಂಬುದು ಸಕತ್ ಸ್ಟುಡಿಯೋದ ಮುಂದಿನ ಯೋಜನೆಗಳು. ಆರ್‌ಜೆ ಪ್ರದೀಪ್, ರವಿಶಂಕರ್, ಅಭಿನವ್ ವಿವೇಕ್ ಸಾರಥ್ಯದಲ್ಲಿ ಈ ಸ್ಟುಡಿಯೋ ಆರಂಭಗೊಂಡಿದೆ.

ದಾನೀಶ್ ಸೇಠ್‌ಗೆ ದಿಶಾ ಮದನ್ ಜೋಡಿ

ಅಂದಹಾಗೆ ಶ್ರೀಮುತ್ತು ಸಿನಿ ಸರ್ವೀಸ್ ಸಹಯೋಗದಲ್ಲಿ ಸಕತ್ ಸ್ಟುಡಿಯೋ ನಿರ್ಮಿಸುತ್ತಿರುವ ಮತ್ತೊಂದು ವೆಬ್ ಸರಣಿ ‘ಹೇಟ್ ಯೂ ರೋಮಿಯೋ’.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಒಂದೂ ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್ಸ್‌ ನೋಡಿಲ್ಲ: ಏಕಾಏಕಿ ವಿಡಿಯೋ ಹರಿಬಿಟ್ಟ BBK 12 Winner Gilli Nata
ಗಿಲ್ಲಿಗೆ ಯಾವಾಗಲೂ ಕಾಡುವ ಎಮೋಷನಲ್ ಮೂಮೆಂಟ್ ಯಾವುದು? ಜೀವನ ಸಾರ್ಥಕವಾಯ್ತು ಅಂದಿದ್ದೇಕೆ ಬಿಗ್ ಬಾಸ್ ಚಾಂಪಿಯನ್