
ಬೆಂಗಳೂರು (ಜ. 16): ವೇದಿಕೆ ಮೇಲೆ ಹಾಡುವ ಆಸೆ ನಿಮಗಿದೆಯಾ? ಹಾಗಾದ್ರೆ ನಿಮಗಿದೋ ಸದವಕಾಶ. ಜನಪ್ರಿಯ ಮನರಂಜನಾ ವಾಹಿನಿ ಜೀ ಕನ್ನಡ ನಿಮಗೆ ಇಂತದ್ದೊಂದು ಅವಕಾಶವನ್ನು ನೀಡುತ್ತಿದೆ.
ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋ ಬಗ್ಗೆ ಗೊತ್ತೇ ಇದೆ. ಅನೇಕ ಅದ್ಭುತ ಗಾಯನಾ ಪ್ರತಿಭೆಗಳನ್ನು ಕೊಟ್ಟ ಜನಪ್ರಿಯ ರಿಯಾಲಿಟಿ ಶೋ. ಈ ಶೋನಲ್ಲಿ ಒಮ್ಮೆಯಾದರೂ ನಾನು ಹಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಸಂಗೀತ ಪ್ರೇಮಿಗೂ ಇರುತ್ತದೆ. ಅಂತವರಿಗಾಗಿ ಒಂದು ಅವಕಾಶ ಒದಗಿ ಬಂದಿದೆ.
ಸರಿಗಮಪ ರಿಯಾಲಿಟಿ ಶೋಗೆ ಮಹಾ ಅಡಿಷನ್ ಶುರುವಾಗಿದೆ. ಮರಿ ಕೋಗಿಲೆಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಒಂದು ವೇದಿಕೆ ಕಲ್ಪಿಸಿಕೊಡಲಿದೆ ಸರಿಗಮಪ ವೇದಿಕೆ. 30 ಜಿಲ್ಲೆಗಳ ಮಹಾ ಆಡಿಶನ್ ಶುರುವಾಗಿದೆ.
ಇದೇ ಶನಿವಾರದಿಂದ ಸರಿಗಮಪ ಆಡಿಷನ್ ನಿಮ್ಮೂರಿನ ಕಡೆ ಪಯಣ ಬೆಳಸಲಿದೆ. ಇದೇ ಶನಿವಾರ ಅಂದರೆ ಶನಿವಾರ ಜ. 19 ರಂದು ಚಿಕ್ಕಮಗಳೂರಿನಲ್ಲಿ ಮಹಾ ಆಡಿಷನ್ ನಡೆಯಲಿದೆ. ಬನ್ನಿ ಭಾಗವಹಿಸಿ ನಿಮ್ಮ ಪ್ರತಿಭೆ ತೋರಿಸಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.