'ನಿಮ್ ಲೈಫ್ ಒಮ್ಮೆ ನೋಡಿ... ಏನ್ ಕೊರತೆ ಆಗಿದೆ? 'ದೇವರು ಆರೋಗ್ಯವಾಗಿ ಇಟ್ಟಿದಾನೆ. ಹಣಕಾಸಿಗೆ ಯಾರ ಹತ್ರನೂ ಕೈ ಚಾಚ್ತಿಲ್ಲ.. ಸಾಲಪೋಲ ಮಾಡಿಲ್ಲ, ಮನೆಯಿಂದ ಯಾರೂ ಹೊರಗಡೆ ಹಾಕೋ ಚಾನ್ಸ್ ಇಲ್ಲ..
ಕನ್ನಡದ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರ ಸಂದರ್ಶನವೊಂದು ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರೋ ಸುದೀಪ್ ಅವರ ಈ ಮಾತುಗಳು ಎಮೋಶನ್ ಕೆರಳಿಸುವಂತಿದೆ. ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇದು ಖಂಡಿತವಾಗಿಯೂ ಪಕ್ಕಾ ಮೋಟಿವೇಶನಲ್ ಟಾಕ್. ಹಾಗಿದ್ದರೆ ನಟ ಸುದೀಪ್ ಅದೇನು ಹೇಳಿದ್ದಾರೆ ಅನ್ನೋದಕ್ಕೆ ಮುಂದೆ ನೋಡಿ..
ನಾನು ಯಾರಿಗಾದ್ರೂ ಒಂದು ಸ್ಥಾನ ಕೊಟ್ರೆ, ನನ್ನ ಬಾಂಧವ್ಯ ಏನಿದೆ ಅದನ್ನ ಕಿತ್ತಾಕ್ಬಿಟ್ರೆ ನನ್ ಎಮೋಶನ್ ರಾಂಗ್ ಅಂತ ಆಗ್ಬಿಡುತ್ತೆ, ಸುಳ್ಳು ಅಂತ ಆಗ್ಬಿಡುತ್ತೆ.. ಹೀಗಾಗಿ ನಾನು ಯಾವುದೇ ಒಬ್ಬ ವ್ತಕ್ತಿಗೆ ನನ್ನ ಲೈಫಲ್ಲಿ ಒಂದು ಸ್ಥಾನ ಕೊಡ್ಬೇಕು ಅಂದ್ರೆ ಈಗ ಹತ್ತಾರು ಸಲ ಯೋಚ್ನೆ ಮಾಡ್ತೀನಿ.. ಆದ್ರೆ, ಒಮ್ಮೆ ಒಬ್ರಿಗೆ ನನ್ನ ಲೈಫಲ್ಲಿ ಸ್ಥಾನ ಕೊಟ್ಟೆ ಅಂದ್ರೆ ಮತ್ತೆಮ್ತತೆ ಅಳೆಯೋದು, ತೂಗೋದು ಮಾಡ್ತಾ ಇರಲ್ಲ..' ಎಂದಿದ್ದಾರೆ ಕಿಚ್ಚ ಸುದೀಪ್. ಇಂಥ ಹಲವಾರು ಮಾತುಗಳನ್ನು ನಟ ಕಿಚ್ಚ ಸುದೀಪ್ ಹಲವು ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ.
Kichcha Sudeep: ಮಾಡೋದೆಲ್ಲಾ ಸರಿನೇ ಮಾಡ್ಬೇಕು ಅನ್ನೋ ಪ್ರೆಶರ್ ನಮ್ ಮೇಲೆ ಹಾಕ್ಬೇಡಿ..
ಇನ್ನೊಂದು ಕಡೆ ನಟ ಸುದೀಪ್ ಅವರು ಮತ್ತೊಂದಿಷ್ಟು ಮಾತುಗಳನ್ನು ಹೇಳಿದ್ದು ಕೂಡ ವೈರಲ್ ಆಗ್ತಿದೆ. ಅಲ್ಲಿ 'ನಿಮ್ ಲೈಫ್ ಒಮ್ಮೆ ನೋಡಿ... ಏನ್ ಕೊರತೆ ಆಗಿದೆ? 'ದೇವರು ಆರೋಗ್ಯವಾಗಿ ಇಟ್ಟಿದಾನೆ. ಹಣಕಾಸಿಗೆ ಯಾರ ಹತ್ರನೂ ಕೈ ಚಾಚ್ತಿಲ್ಲ.. ಸಾಲಪೋಲ ಮಾಡಿಲ್ಲ, ಮನೆಯಿಂದ ಯಾರೂ ಹೊರಗಡೆ ಹಾಕೋ ಚಾನ್ಸ್ ಇಲ್ಲ.. ಬ್ಯಾಂಕ್ ಲೋನ್‌ನವ್ರು ಬಂದು ತಲೆಮೇಲೆ ಕೂತಿಲ್ಲ. ಅಡುಗೆ ಮಾಡೋದಕ್ಕೆ ಪದಾರ್ಥಗಳಿವೆ, ಸ್ನೇಹಿತರು ಮನೆಗೆ ಬರ್ತಾ ಇದಾರೆ.. ಅಂದ್ಮೆಲೆ ಎಲ್ಲಿ ಸರ್ ಸೋತಿದ್ದೇನೆ ನಾನು..? ಸ್ವಲ್ಪ ಸ್ಲೋ ಆಗಿದೆ ಲೈಫು.. ಯಾಕೆ ಅಂದ್ರೆ, ಬೇರೆಯವ್ರ ಸ್ಪೀಡಿಂದ ನಿಮ್ಗೆ ಹಾಗೆ ಅನ್ನಿಸ್ತಾ ಇರುತ್ತೆ ಲೈಫು..
ಯಾವ್ದೋ ಹಾರುತ್ತಾ ಇರೋ ವಿಮಾನದ ಬಗ್ಗೆ ತಲೆ ಕೆಡಿಸ್ಕೋಬಾರ್ದು.. ಅದೂ ಕೂಡ ಯಾವುದೋ ಒಂದು ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗುತ್ತೆ..' ಎಂದಿದ್ದಾರೆ ಕಿಚ್ಚ ಸುದೀಪ್. ಅವರಾಡಿರುವ ಮಾತುಗಳ ಬಗ್ಗೆ ಹಲವರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಸುದೀಪ್ ಆಡಿರೋ ಮಾತುಗಳಲ್ಲಿ ಹಲವರಿಗೆ ಲೈಫ್ ಲೆಸನ್ ಗೋಚರಿಸಿದೆ ಎನ್ನಬಹುದು. ಕೆಲವರು ಬಗ್ಗೆ ಕಾಮೆಂಟ್ ಮಾಡಿ, 'ನೀವು ಎಲ್ಲವನ್ನೂ ಅಚೀವ್ ಮಾಡಿ ಆಗಿದೆ. ಹೀಗಾಗಿ ನಿಮಗೆ ಯಾವುದೂ ಗ್ರೇಟ್ ಅನ್ನಿಸಲ್ಲ' ಅಂತಲೂ ಕಾಮೆಂಟ್ ಮಾಡಿದ್ದಾರೆ.
ಭಾರತದಲ್ಲೇ ಇಲ್ಲ ಚಂದನ್ ಶೆಟ್ಟಿ, ಎಲ್ಲಿಗೆ ಹೋಗಿದಾರೆ, ಹೋಗಿ ಅಲ್ಲೇನ್ ಮಾಡ್ತಿದಾರೆ?
ಸದ್ಯ ನಟ ಸುದೀಪ್ ಅವರು ಸಿನಿಮಾ ಶೂಟಿಂಗ್ ಹಾಗೂ ಕ್ರಿಕೆಟ್‌ನಲ್ಲಿ ಬ್ಯುಸಿ ಆಗಿದ್ದಾರೆ. ಮ್ಯಾಕ್ಸ್ ಸಿನಿಮಾದ ಸಕ್ಸಸ್ ಸದ್ಯ ಸುದೀಪ್ ನಟನೆಯ ಮುಂದಿನ ಚಿತ್ರಗಳ ಮೇಲೆ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ಸುದೀಪ್ ನಟನೆಯಲ್ಲಿ ಮುಂಬರುವ ಸಿನಿಮಾಗಳನ್ನು ನೋಡಲು ಅವರ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ, ಸದ್ಯಕ್ಕೆ ಸುದೀಪ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬರಲು ಅನೌನ್ಸ್ ಆಗಿಲ್ಲ. ಆದ್ರೂ ಬರುತ್ತೆ ಬಿಡಿ ಈ ವರ್ಷ, ಸ್ವಲ್ಪ ಕಾಯಬೇಕಷ್ಟೇ.