ನಾಟಿ ನೇಚರ್‌ನ ಕ್ಯೂಟ್ ಫೇಸ್‌ನ ಕಿರಿಕ್ ಹುಡುಗಿ ಸಂಯುಕ್ತಾ ಹೆಗಡೆ ಮತ್ತೊಮ್ಮೆ ಬಿಕಿನಿ ತೊಟ್ಟು ಸೆನ್ಸೇಷನ್‌ ಸೃಷ್ಟಿಸಿದ್ದಾರೆ.

ಅಬ್ಬಾ ಈ ಹುಡುಗಿ ಎಷ್ಟು ಮಾತನಾಡುತ್ತಾಳೆ? ಬರಿ ಜಗಳನಾ? ಯಾವುದಾದರೂ ಒಂದು ಸುದ್ದಿ ಮಾಡುತ್ತಲೇ ಹ್ಯಾಪನಿಂಗ್‌ನಲ್ಲಿರೋ ಸಂಯುಕ್ತಾ ಹೆಗಡೆ ಅಲ್ಲಿ ಇಲ್ಲಿ ಸುತ್ತುವುದೂ ಹೆಚ್ಚು. ಕೆಲವು ದಿನಗಳ ಹಿಂದೆ ಬ್ಯಾಂಕಾಂಕ್‌ನಲ್ಲಿ ಬಿಕಿನಿ ತೊಟ್ಟ ಫೋಟೋವೊಂದನ್ನು ಅಪ್‌ಲೋಡ್ ಮಾಡಿ, ಸುದ್ದಿಯಾಗಿದ್ದರು. ಇದೀಗ ಮತ್ತೊಂದು ಅಂಥದ್ದೇ ಪೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಕನ್ನಡದ ನೀಲಿ ತಾರೆ ಸಂಯುಕ್ತಾ ಹೆಗಡೆ... ಪೋಸ್ಟ್ ಡಿಲೀಟ್ ಮಾಡಿದ ನಿರ್ದೇಶಕ

 

'ಟೂ ಡರ್ಕ್, ಟೂ ಪೇರ್, ಟೂ ತಿನ್, ಟೂ ಫ್ಯಾಟ್, ಟೂ ಶಾರ್ಟ್, ಟೂ ಟಾಲ್?... ಯಾವುದರಲ್ಲೂ ತೃಪ್ತಿ ಇರೋಲ್ಲ. ಏನಾದರೂ ಕೊರತೆ ಇದ್ದೇ ಇರುತ್ತದೆ. ನಿಮಗೆ ಕೇರ್ ಮಾಡದ ಪ್ರಪಂಚದ ಬಗ್ಗೆ ಕೇರ್ ಮಾಡಬೇಡಿ,' ಎಂದು ಬಿಂದಾಸ್ ಆಗಿಯೇ ಬೋಲ್ಡ್ ಆಗಿ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.

ಮತ್ತೊಂದು ಫೋಟೋಗೆ 'ಏನೇ ಮಾಡಿದರೂ ಜನ ನಿಮ್ಮನ್ನು ದ್ವೇಷಿಸುತ್ತಾರೆ, ಬಯ್ಯುತ್ತಾರೆ, ನಿಮ್ಮ ಮನಸ್ಸು ಮುರಿಯುತ್ತಾರೆ... ಎಂದು ಬರೆದು ಕೊಂಡು ಮತ್ತೊಂದು ಬಿಕಿನಿ ಫೋಟೋ ಪೋಸ್ಟ್ ಮಾಡಿದ್ದಾರೆ.

ಬ್ಯಾಂಕಾಕ್‌ನಲ್ಲೂ ಬಿಕಿನಿ ತೊಟ್ಟ ಫೋಟೋ ಶೇರ್ ಮಾಡಿದಾಗ ಸಂಯುಕ್ತಾರೊಂದಿಗೆ ಒಬ್ಬ ಹುಡುಗನೂ ಜತೆಗಿದ್ದು, ಹಲವು ಗಾಳಿ ಸುದ್ದಿಗಳಿಗೆ ಎಡೆ ಮಾಡಿಕೊಟ್ಟಿದ್ದರು.

ಬ್ಯಾಂಕಾಕ್‌ನಲ್ಲಿ ಬಿಕಿನಿ ತೊಟ್ಟ ಕಿರಿಕ್ ಹುಡುಗಿ!

"