Salman Khan Childhood: ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಸಲ್ಮಾನ್​ ಖಾನ್​ಗೆ ಥಳಿತ! ನಟನಿಗೆ ಇದೆಂಥ ಚಾಳಿ ಇತ್ತು ನೋಡಿ....

Published : Jun 12, 2025, 06:13 PM IST
Salman Khan

ಸಾರಾಂಶ

ನಟ ಸಲ್ಮಾನ್​ ಖಾನ್​ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆಯೊಂದು ನಡೆದಿದ್ದು, ಅದರ ಬಗ್ಗೆ ಮತ್ತೀಗ ವೈರಲ್​ ಆಗುತ್ತಿದೆ. ಏನಿದು ವಿಷಯ? 

ಸಲ್ಮಾನ್​ ಖಾನ್​ ಸೇರಿದಂತೆ ಬಾಲಿವುಡ್​ನ ಖಾನ್​ ನಟರು ಸದ್ಯ ಟ್ರೋಲ್​ಗೆ ಒಳಗಾಗುತ್ತಲಿದ್ದಾರೆ. ಇದಕ್ಕೆ ಕಾರಣ, ಪಾಕಿಸ್ತಾನದ ತಮ್ಮ ಅಭಿಮಾನಿಗಳಿಗೆ ಬೇಸರ ಆಗಬಾರದು ಎನ್ನುವ ಕಾರಣಕ್ಕೆ ಆಪರೇಷನ್​ ಸಿಂದೂರದ ಬಗ್ಗೆ ಒಂದೇ ಒಂದು ಮಾತನಾಡಿರಲಿಲ್ಲ ಈ ನಟರು. ಎಷ್ಟೇ ಟ್ರೋಲ್​ ಆದರೂ ಖಾನ್​ ನಟರು ಮಾತ್ರ ಗಪ್​ಚುಪ್​ ಆಗಿದ್ದ ಸಂದರ್ಭದಲ್ಲಿ ಯಾಕೆ ಬೇಕು ಎಂದು ಸಲ್ಮಾನ್​ ಖಾನ್​ ಒಂದು ಟ್ವೀಟ್​ ಮಾಡಿ ಇನ್ನಿಲ್ಲದಂತೆ ಟೀಕೆಗೆ ಗುರಿಯಾದರು. ಉಗ್ರರ ದಾಳಿಯ ಬಗ್ಗೆಯಾಗಲೀ, ಆಪರೇಷನ್​ ಸಿಂದೂರದ ಬಳಿಕ ಪಾಕಿಸ್ತಾನದ ನೀಚ ಕೃತ್ಯದ ಬಗ್ಗೆಯಾಗಲೀ, ಹೋಗಲಿ ಕೊನೆಯ ಪಕ್ಷ ಭಾರತವನ್ನು ಸಪೋರ್ಟ್​ ಮಾಡುವುದನ್ನು ಬಿಟ್ಟು 'ಕದನವಿರಾಮ ಘೋಷಣೆಯಾಗಿದ್ದಕ್ಕೆ ಥ್ಯಾಂಕ್​ ಗಾಡ್​' ಎಂದು ಟ್ವೀಟ್​ ಮಾಡಿದರು. ಇದು ಭಾರತದ ಪರವಾಗೋ, ಪಾಕಿಸ್ತಾನದ ಪರವಾಗೋ ಎಂದು ಇನ್ನಿಲ್ಲದಂತೆ ನಟನನ್ನು ಝಾಡಿಸಿದರು ನೆಟ್ಟಿಗರು. ಸದ್ಯ ಭಾರತ-ಪಾಕ್​ ನಡುವಿನ ಬಿಕ್ಕಟ್ಟು ಬೂದಿಮುಚ್ಚಿದ ಕೆಂಡದಂತಿದ್ದು, ಈ ನಟರ ಬಗೆಗಿನ ವಿವಾದ ಕೂಡ ತಣ್ಣಗಾಗಿದೆ.

ಆದರೆ, ಇದರ ನಡುವೆಯೇ, ಸಲ್ಮಾನ್​ ಖಾನ್​ ಅವರ ಕಳ್ಳತನದ ಬಗ್ಗೆ ಇದೀಗ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ, ಇದನ್ನು ಖುದ್ದು ಸಲ್ಮಾನ್​ ಖಾನ್​ ಅವರೇ ಹಿಂದೊಮ್ಮೆ ಹೇಳಿಕೊಂಡಿದ್ದು, ಅದೀಗ ಮತ್ತ ವೈರಲ್​ ಆಗಿದೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರದ ಸಮಯದಲ್ಲಿ ಈ ವಿಷಯವನ್ನು ಅವರು ಪ್ರಸ್ತಾಪಿಸಿದ್ದರು. ಅಲ್ಲಿ ಅವರು ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡಿದ್ದರು. ಕೆಲವೊಂದು ನೋವಿನ ದಿನಗಳನ್ನು ಅವರು ಮೆಲುಕು ಹಾಕಿದ್ದರು. ಮನೆಯಲ್ಲಿ ಹೇಗೆ ಕಿತ್ತು ತಿನ್ನುವ ಬಡತನವಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಲೇ ಹಸಿವು ಹೇಗೆ ಕಳ್ಳತನವನ್ನೂ ಮಾಡಿಸಿಬಿಡುತ್ತದೆ ಎಂದು ಹೇಳಿದ್ದರು.

ಅಂದಹಾಗೆ, ಸಲ್ಮಾನ್ ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಮತ್ತು ಸುಶೀಲಾ ಚರಕ್ ಅಲಿಯಾಸ್​ ಸಲ್ಮಾ ಖಾನ್ (Salmna Khan) ಅವರ ಪುತ್ರ. ಅವರಿಗೆ ನಾಲ್ಕು ಒಡಹುಟ್ಟಿದವರಿದ್ದಾರೆ. ಅರ್ಬಾಜ್ ಖಾನ್, ಸೊಹೈಲ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ ಮತ್ತು ಅರ್ಪಿತಾ ಖಾನ್. ಖಾನ್​ ಅವರ ತಂದೆ ಸಲೀಂ ಖಾನ್​ ಅವರಿಗೆ ಇಬ್ಬರು ಪತ್ನಿಯರು. ಮೊದಲನೆಯವರ ಹೆಸರು ಸುಶೀಲಾ ಚರಕ್​ ಆದರೆ, ಎರಡನೆಯವರು ಆ ದಿನಗಳ ಖ್ಯಾತ ನಟಿ ಹೆಲೆನ್​. ಒಂದು ಕಡೆ ಮನೆಯಲ್ಲಿ ಬಡತನವಿದ್ದರೂ ನಾಲ್ಕು ಮಕ್ಕಳು, ಹಾಗೂ ಇನ್ನೊಂದು ಕಡೆ ಮತ್ತೊಬ್ಬರ ಜೊತೆ ಮದುವೆ...ಇವೆಲ್ಲವುಗಳಿಂದ ಮನೆಯ ವಾತಾವರಣ ಕಂಗೆಟ್ಟು ಹೋಗಿಟ್ಟು. ಇದರಿಂದಾಗಿ ಮನೆಯಲ್ಲಿ ಆಹಾರ ಕೂಡ ಸರಿಯಾಗಿ ಸಿಗುತ್ತಿರಲಿಲ್ಲ ಎನ್ನಲಾಗಿದೆ.

ಈ ಕುರಿತು ಸಲ್ಮಾನ್​ ಖಾನ್​ ಈಗ ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಮನೆಯಲ್ಲಿ ಸಾಕಷ್ಟು ಆಹಾರ ಅಡುಗೆ ಇರುತ್ತಿರಲಿಲ್ಲ. ಅಷ್ಟು ಮಂದಿಗೆ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗಿತ್ತು. ಆದ್ದರಿಂದ ಮರಗಳಲ್ಲಿ ಬೆಳೆದ ಹಣ್ಣುಗಳನ್ನು ಕಿತ್ತುಕೊಳ್ಳಲು ಬೇರೆಯವರ ಮನೆಯ ತೋಟಕ್ಕೆ ನುಗ್ಗುತ್ತಿದ್ದೆ. ಅಲ್ಲಿಯ ಮರಗಳಿಂದ ಹಣ್ಣು ಕದಿಯುತ್ತಿದ್ದೆ ಎಂದಿರುವ ಸಲ್ಮಾನ್​ ಖಾನ್​, ತಾವು ಹೊಡೆಸಿಕೊಳ್ಳದೇ ಇರುವ ತೋಟದ ಮಾಲೀಕರೇ ಇಲ್ಲ. ಎಲ್ಲರೂ ನನ್ನನ್ನು ಚೆನ್ನಾಗಿ ಥಳಿಸಿದವರೇ ಎಂದಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?