Spanish TV Star: ಸತ್ತ ಮಗನಿಂದ 58ನೇ ವಯಸ್ಸಿನಲ್ಲಿ ತಾಯಿಯಾದ ಖ್ಯಾತ ನಟಿ! ಇದು ಹೇಗಾಯ್ತು ನೋಡಿ

Published : Jun 12, 2025, 05:00 PM IST
Ana Obregon

ಸಾರಾಂಶ

58ನೇ ವಯಸ್ಸಿನಲ್ಲಿ ಖ್ಯಾತಿ ನಟಿಯೊಬ್ಬರು ತಮ್ಮ ಮೃತ ಪುತ್ರನಿಂದ ಮಗುವನ್ನು ಪಡೆದುಕೊಂಡಿದ್ದಾರೆ. ಏನಿದು ವಿಷ್ಯ? ಯಾರಿದು ನಟಿ? ಇದು ಹೇಗೆ ಸಾಧ್ಯ ನೋಡಿ.. 

ಅನಾ ವಿಕ್ಟೋರಿಯಾ ಗಾರ್ಸಿಯಾ ಒಬ್ರೆಗಾನ್ ಓರ್ವ ಖ್ಯಾತ ಕಿರುತೆರೆ ನಟಿ. ಸ್ಪ್ಯಾನಿಷ್ ನಟಿ, ದೂರದರ್ಶನ ನಿರೂಪಕಿಯೂ ಆಗಿರುವ ಅನಾ, ಈಗ ಸಕತ್​ ಸೌಂಡ್​ ಮಾಡುತ್ತಿದ್ದಾರೆ. 58 ವರ್ಷದ ಈ ನಟಿ, ಯುರೋಪಿಯನ್ ಮತ್ತು ಅಮೆರಿಕನ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ ಸ್ಪ್ಯಾನಿಷ್ ದೂರದರ್ಶನ ಸರಣಿ ಎ ಲಾಸ್ ಒನ್ಸ್ ಎನ್ ಕಾಸಾ ಮತ್ತು ಅನಾ ವೈ ಲಾಸ್ 7 ನಲ್ಲಿನ ಅಭಿನಯದಿಂದ ಇವರು ಮನೆಮಾತಾಗಿದ್ದಾರೆ. ಆದರೆ ಇದೀಗ ಈ ನಟಿ ಜಗತ್ತಿನಾದ್ಯಂತ ಭಾರಿ ಸೌಂಡ್​ ಮಾಡುತ್ತಿರುವುದು ಈ ಅಭಿನಯದಿಂದಲ್ಲ, ಬದಲಿಗೆ ಈ ವಯಸ್ಸಿನಲ್ಲಿ ಅಮ್ಮನಾಗಿದ್ದರಿಂದ! ಅಷ್ಟಕ್ಕೂ 58ನೇ ವಯಸ್ಸಿನಲ್ಲಿ ಅನಾ ಮಗುವಿನ ತಾಯಿಯಾದುದು ಸುದ್ದಿಯಲ್ಲ. ಬದಲಿಗೆ ಈಕೆ ತನ್ನ ಮಗನಿಂದಲೇ ಮಗುವನ್ನು ಪಡೆದಿದ್ದಾರೆ ಎನ್ನುವುದೇ ಈ ಸುದ್ದಿಯ ವಿಶೇಷ. ಹೌದು ಅನಾ, ತನ್ನ ಮಗನ ಮಗನಿಗೇ ತಾಯಿಯಾಗಿದ್ದಾರೆ. ಅರ್ಥಾತ್​ ಈಕೆಯ ಮಗ, ಇವರಿಗೆ ಮಗನೂ ಹೌದು, ಒಂದರ್ಥದಲ್ಲಿ ಪತಿಯೂ ಹೌದು! ಅಷ್ಟಕ್ಕೂ ಇಲ್ಲಿ ನಡೆಯಬಾರದ್ದೇನೂ ನಡೆದಿಲ್ಲ. ಅಮ್ಮ-ಮಗನ ಪವಿತ್ರ ಸಂಬಂಧವೇನೂ ಅನಾಚಾರದಿಂದ ಹಾಳಾಗಿದ್ದಲ್ಲ. ಇನ್ನೂ ಒಂದು ವಿಶೇಷ ಎಂದರೆ ಈಕೆ ಮಗುವನ್ನು ಪಡೆದಿರುವುದು ತನ್ನ ಸತ್ತ ಮಗನಿಂದ. ಹಾಗಿದ್ದರೆ ಮಗುವನ್ನು ಹೇಗೆ ಪಡೆದರು ಎನ್ನುವ ಪ್ರಶ್ನೆ ಕಾಡುತ್ತಿರಬೇಕಲ್ಲವೆ?

ನಟಿ ಆನಾ ಬಾಡಿಗೆ ತಾಯ್ತನದ (Surrogacy) ಮೂಲಕ ಮಗುವನ್ನು ಪಡೆದಿದ್ದಾರೆ. ಅಂದರೆ ತಮ್ಮ ಅಂಡಾಣು ಹಾಗೂ ಮಗನ ವೀರ್ಯಾಣುವನ್ನು ಶೇಖರಿಸಿ ಬೇರೊಬ್ಬ ಮಹಿಳೆಯ ಗರ್ಭದಲ್ಲಿ ಇರಿಸಿ ಮಗುವನ್ನು ಪಡೆಯಲಾಗಿದೆ. ಸರೋಗಸಿ ಮೂಲಕ ಈಕೆ ಮಗುವನ್ನು ಪಡೆದಿರುವುದು ಕೂಡ ಕುತೂಹಲವೇ ಆಗಿದೆ. ಈಗೆಲ್ಲಾ ಸರೋಗಸಿ ಅಥವಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹಲವರು ಪಡೆಯುತ್ತಿದ್ದಾರೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಇದೇ ರೀತಿ ಬಾಡಿಗೆ ತಾಯ್ತನದ ಮೂಲಕವೇ ಮಾಲ್ತಿಮೇರಿ ಎಂಬ ಮುದ್ದಾದ ಹೆಣ್ಣುಮಗುವಿನ ತಾಯಿಯಾಗಿದ್ದಾರೆ. ಆದರೆ ಆನಾ ಮಗುವನ್ನು ಪಡೆದಿರುವುದು ಆಕೆಯ ಮಗನಿಂದಲೇ ಎಂಬ ಕಾರಣಕ್ಕೆ ಸುದ್ದಿಯೂ ಆಗುತ್ತಿದ್ದಾರೆ, ಜೊತೆಗೆ ವಿವಾದಕ್ಕೂ ಕಾರಣರಾಗಿದ್ದಾರೆ.

68 ವರ್ಷದ ನಟಿ ಆನಾ ಅವರು ಈ ವಿಷಯವನ್ನು ಹೋಲಾ ಎಂಬ ಮ್ಯಾಗಜಿನ್​ನಲ್ಲಿ ತಿಳಿಸಿದ್ದಾರೆ. 2020ರಲ್ಲಿ ನನ್ನ ಮಗ 27ನೇ ವರ್ಷದಲ್ಲಿಯೇ ಕ್ಯಾನ್ಸರ್​ನಿಂದ (Cancer) ಮೃತಪಟ್ಟ. ಆತನಿಗೆ ಬಹಳ ವರ್ಷಗಳಿಂದಲೂ ತನ್ನದೇ ಒಂದು ಮಗು ಬೇಕು ಎನ್ನುವ ಆಸೆ ಇತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಕ್ಯಾನ್ಸರ್​ನಿಂದ ಈತ ಬಹಳ ವರ್ಷ ಉಳಿಯುವುದಿಲ್ಲ ಎಂದು ತಿಳಿದಿತ್ತು. ಆದ್ದರಿಂದ ಆತ ಮಗುವನ್ನು ತಾನು ಜೀವಂತ ಇರುವಾಗಲೇ ನೋಡುವ ಆಸೆ ಹೊಂದಿದ್ದ. ಕೊನೆಗೆ ಆತ ಬದುಕಿರುವಾಗ ಇದು ಸಾಧ್ಯವಾಗಿರಲಿಲ್ಲ. ಅವನ ಕೊನೆ ಆಸೆಯೂ ಇದೇ ಆಗಿತ್ತು ಎಂದಿದ್ದಾರೆ ಆನಾ.

ಆತನ ಆಸೆಯನ್ನು ಅರಿತಿದ್ದ ವೈದ್ಯರು ಆತನ ವೀರ್ಯಾಣು ಸಂಗ್ರಹಿಸಿ ಇಟ್ಟಿದ್ದರು. ಆತ ಮೃತಪಟ್ಟ ಬಳಿಕ ನನ್ನ ವೀರ್ಯಾಣು ಸೇರಿಸಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲಾಗಿದೆ ಎಂದು ನಟಿ ಆನಾ ಹೇಳಿದ್ದಾರೆ. 2020ರಲ್ಲಿ ನಟಿಯ ಮಗನ ಸಾವಿನ ಮೊದಲು ವೈದ್ಯರು ಆತನಿಗೆ ವೀರ್ಯ ತೆಗೆದಿಡಲು ಪ್ರೋತ್ಸಾಹಿಸಿದ್ದರು. ಕ್ಯಾನ್ಸರ್ ಚಿಕಿತ್ಸೆ ಆರಂಭಿಸುವ ಮೊದಲೇ ವೀರ್ಯ ತೆಗೆದಿಡುವಂತೆ ವೈದ್ಯರು ನನ್ನ ಮಗನಿಗೆ ಸಲಹೆ ಕೊಟ್ಟಿದ್ದರು. ಅದರಂತೆಯೇ ಎಲ್ಲವೂ ನಡೆದಿದೆ ಎಂದಿದ್ದಾರೆ.

ಈ ಮೂಲಕ ತನ್ನದೇ ಮಗು ಹಾಗೂ ಮೊಮ್ಮಗಳ ಮುಖವನ್ನು ಆನಾ ರಿವೀಲ್​ ಮಾಡಿದ್ದಾರೆ. ಆಕೆಗೆ ಸಾಂಡ್ರಾ ಎಂದು ಹೆಸರಿಟ್ಟಿದ್ದಾರೆ. ನಟಿ ಮ್ಯಾಗಜಿನ್ ಮುಖಪುಟದಲ್ಲಿ ಮೊಮ್ಮಗಳ ಜೊತೆ ಪೋಸ್ ಕೊಟ್ಟಿದ್ದಾರೆ. ಮೃತಪಟ್ಟ ಮಗನಿಗಾಗಿ ಸ್ಪೆಷಲ್ ಪೋಸ್ಟ್ ಬರೆದ ನಟಿ, ಅಲೆಸ್ ನಿನ್ನನ್ನು ಕ್ಯಾನ್ಸರ್​ನಿಂದ ಬದುಕಿಸಲು ಪ್ರಯತ್ನಿಸಿದ್ದೆ. ಆದರೆ ನಾನು ಸೋತೆ. ನಿನ್ನ ಮಗುವನ್ನು ಈ ಭೂಮಿಗೆ ತರುವುದಾಗಿ ಮಾತುಕೊಟ್ಟಿದ್ದೆ. ನಿನ್ನ ಮಗಳು ನನ್ನ ಮಡಿಲಿನಲ್ಲಿದ್ದಾಳೆ ಎಂದು ಬರೆದಿದ್ದಾರೆ. ಆದರೆ ಸ್ಪೇನ್​ನಲ್ಲಿ ಪೂರ್ವಾನುಮತಿ ಇಲ್ಲದೇ ಈ ರೀತಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವುದು ಕಾನೂನುಬಾಹಿರ ಆಗಿರುವ ಕಾರಣ, ಸದ್ಯ ನಟಿ ವಿವಾದದಲ್ಲಿ ಸಿಲುಕಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!
ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌