ಕಂಟ್ರೋಲ್ ಮಾಡ್ಕೋ ಭಾಯ್.. ಕಾಫಿ ವಿತ್ ಕರಣ್ ಶೋನಲ್ಲಿ ತಂದೆಯಾಗುವ ಆಸೆ ಬಿಚ್ಚಿಟ್ಟ ಸಲ್ಮಾನ್ ಖಾನ್!

Published : Oct 14, 2026, 05:50 PM IST
Salman Khan Karan Johar

ಸಾರಾಂಶ

ಕಾಫಿ ವಿತ್ ಕರಣ್ ಶೋನಲ್ಲಿ ಕರಣ್ ಜೋಹರ್ ಜೊತೆಗಿನ ಮಾತುಕತೆ ವೇಳೆ ಸಲ್ಮಾನ್ ಖಾನ್ ತಂದೆಯಾಗುವ ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ತಮಗೆ ಸ್ವಂತ ಮಕ್ಕಳಿಲ್ಲವಲ್ಲ ಎಂಬ ಕೊರಗಿದೆ ಎಂದು 60 ವರ್ಷದ ನಟ ಹೇಳಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಅವರ ಸಿನಿಮಾಗಳಷ್ಟೇ ಅವರ ವೈಯಕ್ತಿಕ ಬದುಕು, ಮದುವೆ ಹಾಗೂ ಮಕ್ಕಳ ವಿಚಾರವೂ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇದೀಗ 'ಕಾಫಿ ವಿತ್ ಕರಣ್ ಸೀಸನ್ 9' ಶೋನಲ್ಲಿ ಬಾಲಿವುಡ್ ಭಾಯಿಜಾನ್ ತಂದೆಯಾಗುವ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ವೆರೈಟಿ ಇಂಡಿಯಾ ವರದಿ ಪ್ರಕಾರ, ನಿರೂಪಕ ಕರಣ್ ಜೋಹರ್ ಅವರು ಸಲ್ಮಾನ್ ಬಳಿ 'ಮಕ್ಕಳಿಲ್ಲ ಎಂಬ ಕೊರಗು ಕಾಡುತ್ತಿದೆಯೇ?' ಎಂದು ಕೇಳಿದ್ದಾರೆ. ಇದಕ್ಕೆ ಸಲ್ಮಾನ್ ಹೌದು ಎಂದಿದ್ದು, ತಂದೆಯಾಗುವ ಆಸೆ ನನಗೂ ಇದೆ ಎಂದಿದ್ದಾರೆ. ಡಿಸೆಂಬರ್ 2025ರಲ್ಲಿ 60 ವರ್ಷ ಪೂರೈಸಿದ ಸಲ್ಮಾನ್, ತಮ್ಮ ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ಹೆಚ್ಚಾಗಿ ಹಂಚಿಕೊಳ್ಳುವುದಿಲ್ಲ. ಹೀಗಾಗಿ ಅವರ ಈ ಮಾತುಗಳು ಈಗ ತೀವ್ರ ಕುತೂಹಲ ಕೆರಳಿಸಿವೆ.

ಈ ಶೋನಲ್ಲಿ ಎಂದಿನಂತೆ ತಮಾಷೆಯ ಮಾತುಗಳಿಗೂ ಬರವಿಲ್ಲ. ಮಾತುಕತೆ ವೇಳೆ ಸಲ್ಮಾನ್, ತಾವೇ 'ಕಾಫಿ ವಿತ್ ಸಲ್ಮಾನ್' ಎಂಬ ಹೊಸ ಶೋ ಶುರು ಮಾಡುವುದಾಗಿ ತಮಾಷೆ ಮಾಡಿದ್ದಾರೆ. ಇದೇ ವೇಳೆ ಕರಣ್, ಸಲ್ಮಾನ್ ಅವರ ವರ್ಜಿನಿಟಿ ಬಗ್ಗೆ ತಮ್ಮ ಹಳೆಯ ಪ್ರಶ್ನೆಯನ್ನು ಮತ್ತೆ ಕೇಳಿದ್ದಾರೆ. ಇದಕ್ಕೆ ಸಲ್ಮಾನ್, "ಕಂಟ್ರೋಲ್ ಮಾಡ್ಕೋ ಭಾಯ್, ಕಂಟ್ರೋಲ್ ಮಾಡ್ಕೋ" ಎಂದು ನಗುತ್ತಲೇ ಉತ್ತರಿಸಿದ್ದಾರೆ.

ಈ ಹಿಂದೆಯೂ ಮಕ್ಕಳ ಬಗ್ಗೆ ಮಾತನಾಡಿದ್ದ ಸಲ್ಮಾನ್ ಖಾನ್

ಸಲ್ಮಾನ್ ತಂದೆಯಾಗುವ ಆಸೆ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನಲ್ಲ. 2023ರಲ್ಲಿ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲೂ ಅವರು ಮಕ್ಕಳನ್ನು ಪಡೆಯುವ ಬಗ್ಗೆ ಮಾತನಾಡಿದ್ದರು. ಆದರೆ ತಾವು ಯೋಚಿಸಿದ್ದ ದಾರಿಯಲ್ಲಿ ಸಾಕಷ್ಟು ಕಾನೂನು ತೊಡಕುಗಳಿವೆ ಎಂದು ಅವರು ಹೇಳಿಕೊಂಡಿದ್ದರು. ಬಾಡಿಗೆ ತಾಯ್ತನದ ಮೂಲಕ ಕರಣ್ ಜೋಹರ್ ತಂದೆಯಾದ ವಿಚಾರವನ್ನು ಪ್ರಸ್ತಾಪಿಸಿದ್ದ ಸಲ್ಮಾನ್, ತಾವೂ ಅದೇ ರೀತಿ ತಂದೆಯಾಗುವ ಬಗ್ಗೆ ಯೋಚಿಸಿದ್ದಾಗಿ ಸುಳಿವು ನೀಡಿದ್ದರು. ಆದರೆ ಕಾನೂನು ನಿಯಮಗಳು ಇದಕ್ಕೆ ಅಡ್ಡಿಯಾಗಿವೆ, ಹೀಗಾಗಿ ತಂದೆಯಾಗುವ ಪ್ರಶ್ನೆ ಹಾಗೇ ಉಳಿದಿದೆ ಎಂದಿದ್ದರು.

ಸಲ್ಮಾನ್ ಅವರ ಈ ಹಿಂದಿನ ಮಾತುಗಳು ಈಗ ಕರಣ್ ಜೊತೆಗಿನ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿವೆ. ಮದುವೆ ಬಗ್ಗೆ ಸಲ್ಮಾನ್ ಅವರನ್ನು ಪದೇ ಪದೇ ಕೇಳಲಾಗುತ್ತಲೇ ಇರುತ್ತದೆ. ಆದರೆ ಮಕ್ಕಳನ್ನು ಪಡೆಯುವ ವಿಚಾರವನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗುತ್ತದೆ. ಅವರು ಮಕ್ಕಳ ಬಗ್ಗೆ ಹಾಗೂ ತಮ್ಮ ಕುಟುಂಬದ ಬಗ್ಗೆ ಯಾವಾಗಲೂ ಪ್ರೀತಿಯಿಂದ ಮಾತನಾಡುತ್ತಾರೆ. ಆದರೂ, ಸಲ್ಮಾನ್ ತಂದೆಯಾಗುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಶೋನಲ್ಲಿ ಅವರು ಹೇಳಿದ ಮಾತುಗಳನ್ನು ಇಟ್ಟುಕೊಂಡು ಅವರು ತಂದೆಯಾಗುತ್ತಿದ್ದಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಸಲ್ಮಾನ್ ಖಾನ್ ಕುಟುಂಬ ಹಾಗೂ ರಿಲೇಶನ್‌ಶಿಪ್ ವದಂತಿಗಳು

ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಿದ್ದರೂ ಸಲ್ಮಾನ್ ತಮ್ಮ ಕುಟುಂಬ, ಸಹೋದರ-ಸಹೋದರಿಯರು ಹಾಗೂ ಅವರ ಮಕ್ಕಳ ಜೊತೆ ತುಂಬಾನೇ ಆಪ್ತವಾಗಿದ್ದಾರೆ. ಬಿಡುವಿದ್ದಾಗಲೆಲ್ಲಾ ಅವರ ಜೊತೆ ಕಾಲ ಕಳೆಯುವ ಸಲ್ಮಾನ್, ಮನೆಯ ಕಿರಿಯ ಸದಸ್ಯರ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ನಟನ ವೈಯಕ್ತಿಕ ಬದುಕಿನ ಬಗ್ಗೆ, ಅದರಲ್ಲೂ ರೊಮೇನಿಯಾದ ಯೂಲಿಯಾ ವಂಟೂರ್ ಜೊತೆಗಿನ ಸಂಬಂಧದ ಬಗ್ಗೆ ಸಾಕಷ್ಟು ವದಂತಿಗಳಿವೆ.

ಇನ್ನು ಇವರಿಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಮದುವೆ ಅಥವಾ ಮಕ್ಕಳ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ವರ್ಷಗಳು ಕಳೆದಂತೆ ಸಲ್ಮಾನ್ ತುಂಬಾನೇ ಸೈಲೆಂಟ್ ಆಗಿದ್ದಾರೆ ಎಂದು ಕರಣ್ ಶೋನಲ್ಲಿ ಹೇಳಿದ್ದಾರೆ. ಇದಕ್ಕೆ ತಮ್ಮದೇ ಶೈಲಿಯಲ್ಲಿ ತಮಾಷೆಯಾಗಿ ಉತ್ತರಿಸಿದ ಸಲ್ಮಾನ್, "ಹಿಂದೆ ನಾನು ಬೇರೆಯವರಿಗೆ ಕೊಡುತ್ತಿದ್ದ ಸಲಹೆಗಳನ್ನು ಈಗ ನಾನೇ ಪಾಲಿಸುತ್ತಿದ್ದೇನೆ" ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನಟ ಸಾರ್ವಭೌಮ' ನಟಿಗೆ ಆ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟ: 50ಕ್ಕೂ ಹೆಚ್ಚು ಬಾರಿ ನೋಡಿದ್ದಾರಂತೆ!
ಸೀರಿಯಲ್‌ನಲ್ಲಿ ಖಡಕ್ ವಿಲನ್, ರಿಯಲ್ ಲೈಫ್‌ನಲ್ಲಿ ಮಾಡರ್ನ್ ಬ್ಯೂಟಿ: ಈ ನಟಿ ಯಾರು ಗೊತ್ತಾ?