
ಬಾಲಿವುಡ್ ನಟ ಸಲ್ಮಾನ್ ಖಾನ್ ಮಾಡಿರೋ ಪೋಸ್ಟ್ ನೋಡಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಸ್ಕ್ರೀನ್ ಮೇಲೆ ನಟಿಸಿ ಜನರ ಮನ ಗೆದ್ದ ಸಲ್ಮಾನ್ ಅದರ ಹೊರತಾಗಿಯೂ ಜನರ ಮನಸಲ್ಲಿ ವಿಶೇಷ ಸ್ಥಾನ ಹೊಂದಿದ್ದಾರೆ.
ಪಾನ್‌ವೆಲ್ ಫಾರ್ಮ್ ಹೌಸ್‌ನಲ್ಲಿ ಉಳಿದುಕೊಂಡಿರುವ ಸಲ್ಮಾನ್ ಅಲ್ಲಿಯೇ ಮ್ಯೂಸಿಕ್ ವಿಡಿಯೋವನ್ನು ಮಾಡಿದ್ದರು. ಇದೀಗ ಫೋಟೋ ಶೇರ್ ಮಾಡಿದ್ದಾರೆ. ಜಸ್ಟ್ ಫಿನಿಷ್ಡ್ ವರ್ಕಿಂಗ್ ಔಟ್ ಎಂದು ಕ್ಯಾಪ್ಶನ್ ಹಾಕಿ ಫೋಟೋ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳಿಗೆ ಸಲ್ಮಾನ್ ಫಿಸಿಕ್ ಬಗ್ಗೆ ಹೆಚ್ಚು ಕ್ರೇಜ್ ಇದ್ದು, ಫೋಟೋಗೆ ರಿಯಾಕ್ಟ್ ಮಾಡಿ, ಕಮೆಂಟ್ ಮಾಡಿ ಪ್ರೀತಿ ತೋರಿಸಿದ್ದಾರೆ.
'ಸುಶಾಂತ್ ಸಾವಿಗೆ ಕರಣ್ ಜೋಹರ್, ಸಲ್ಮಾನ್ ಖಾನ್ ಸೇರಿ 8 ಜನ ಕಾರಣ'
ಕಳೆದ ಕೆಲವು ತಿಂಗಳಿಂದ ಲಾಕ್‌ಡೌನ್‌ನಿಂದ ಕಷ್ಟದಲ್ಲಿರುವ ಜನರಿಗೆ ಸಲ್ಮಾನ್ ನೆರವಾಗುತ್ತಿದ್ದಾರೆ. ದಿನಗೂಲಿಗೆ ದುಡಿಯುವ ಕಾರ್ಮಿಕರಿಗೂ ಅವರು ನೆರವಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬೆನ್ನಲ್ಲೇ ಬಾಲಿವುಡ್ ನೆಪೊಟಿಸಂನಲ್ಲಿ ಸಲ್ಮಾನ್ ಖಾನ್ ಹೆಸರೂ ಕೇಳಿ ಬಂದಿತ್ತು.
ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿಗೆ ಕರಣ್ ಜೋಹಾರ್, ಅಲಿಯಾ ಹಾಗೂ ಸಲ್ಮಾನ್ ಖಾನ್ ಕಾರಣರು ಎಂದು ನೆಟ್ಟಿಗರು ಗಂಭೀರ ಆರೋಪ ಮಾಡಿದ್ದರು. 'ನಾನು ನನ್ನ ಅಭಿಮಾನಿಗಳನ್ನು ಬೇಡಿಕೊಳ್ಳುವೆ ಎಲ್ಲರೂ ಸುಶಾಂತ್ ಅಭಿಮಾನಿಗಳ ಪರ ನಿಲ್ಲಬೇಕು. ಅವರ ಭಾವನೆಗಳ ಭಾವನೆಗೆ ಬೆಲೆ ನೀಡಬೇಕು. ಸುಶಾಂತ್ ಕಳೆದುಕೊಂಡ ನೋವಿನಲ್ಲಿರುವ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಪರ ನಾವು ನೀವು ನಿಲ್ಲಬೇಕಿದೆ' ಎಂದು ಸಲ್ಮಾನ್ ಟ್ವೀಟ್ ಮಾಡಿದ್ದರು.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.