ಭಾರೀ ಶಾಕ್.. 50 ಕೋಟಿ ಕಡಿಮೆ ಸಂಬಾವನೆಗೆ ಸಿನಿಮಾ ಒಪ್ಪಿಕೊಂಡ ಸಲ್ಮಾನ್ ಖಾನ್; ಈ ನಿರ್ಧಾರದ ಹಿಂದೆ 'ದೊಡ್ಡ ರಹಸ್ಯ' ಇದೆ!

Published : Aug 02, 2026, 01:36 PM IST
Salman Khan

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ. ಇಂತಹ ಸಂದರ್ಭದಲ್ಲಿ ನಟರು ನೂರಾರು ಕೋಟಿ ಸಂಭಾವನೆ ಕೇಳುವುದು ನಿರ್ಮಾಪಕರಿಗೆ ಹೊರೆಯಾಗುತ್ತಿದೆ. ಸಲ್ಮಾನ್ ಖಾನ್ ಕಡಿಮೆ ಮಾಡಿದ್ದು ಇದಕ್ಕೇನಾ? ಅಥವಾ.. ಇನ್ನೇನು ಕಾರಣ?

Salman Khan: ಬಾಲಿವುಡ್ 'ಬೈಜಾನ್' ಸಂಭಾವನೆಯಲ್ಲಿ ಭಾರೀ ಕುಸಿತ: 50 ಕೋಟಿ ಡಿಸ್ಕೌಂಟ್ ಕೊಟ್ಟರಾ ಸಲ್ಮಾನ್ ಖಾನ್? ಸಲ್ಮಾನ್ ಕ್ರೇಜ್ ಕಮ್ಮಿ ಆಯ್ತಾ?

Salman Khan Remuneration becomes very Low: Why and What is the reason behind this?- ಬಾಲಿವುಡ್‌ನ ‘ದಬಾಂಗ್’ ಸ್ಟಾರ್, ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ (Salman Khan) ಖಾನ್ ಅಂದ್ರೆ ಅಲ್ಲಿ ಬರೀ ಹಣದ ಮಳೆ ಸುರಿಯುತ್ತೆ ಎಂದೇ ಅರ್ಥ. ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಸಿನಿಮಾ ಅನೌನ್ಸ್ ಆಯ್ತು ಅಂದ್ರೆ ಸಾಕು, ನೂರಾರು ಕೋಟಿಗಳ ವ್ಯವಹಾರ ಕಣ್ಣು ಮುಚ್ಚಿ ತೆರೆಯುವುದರೊಳಗೆ ನಡೆದು ಹೋಗುತ್ತಿತ್ತು. ಆದರೆ, ಈಗ ಬಿಟೌನ್ ಅಂಗಳದಿಂದ ಕೇಳಿ ಬರುತ್ತಿರುವ ಒಂದು ಸುದ್ದಿ ಸಲ್ಮಾನ್ ಅಭಿಮಾನಿಗಳಿಗೆ ಮಾತ್ರವಲ್ಲದೆ ಇಡೀ ಸಿನಿಮಾ ಇಂಡಸ್ಟ್ರಿಗೆ ಅಚ್ಚರಿ ಮೂಡಿಸಿದೆ. ಅದೇನೆಂದರೆ, ಸಲ್ಮಾನ್ ಖಾನ್ ತಮ್ಮ ಸಂಭಾವನೆಯಲ್ಲಿ ಭರ್ಜರಿ ಕತ್ತರಿ ಹಾಕಿಕೊಂಡಿದ್ದಾರೆ!

ಏನಿದು 50 ಕೋಟಿ ರೂಪಾಯಿ ರಿಯಾಯಿತಿ ಕಥೆ?

ಸಾಮಾನ್ಯವಾಗಿ ಸಲ್ಮಾನ್ ಖಾನ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 120 ರಿಂದ 150 ಕೋಟಿ ರೂಪಾಯಿ! ಇದರ ಜೊತೆಗೆ ಸಿನಿಮಾದ ಲಾಭದಲ್ಲಿ ಪಾಲು (Profit Sharing) ಬೇರೆ ಇರುತ್ತದೆ. ಆದರೆ, ಈಗ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘SVC63’ ಸಿನಿಮಾಗಾಗಿ ಸಲ್ಮಾನ್ ಕೇವಲ 70 ಕೋಟಿ ರೂಪಾಯಿಗೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂದರೆ, ಸರಿಸುಮಾರು 50 ಕೋಟಿ ರೂಪಾಯಿಗಳಷ್ಟು ಸಂಭಾವನೆಯನ್ನು ಸಲ್ಮಾನ್ ಕಡಿಮೆ ಮಾಡಿಕೊಂಡಿದ್ದಾರೆ. ಇದು ಈಗ ಬಾಲಿವುಡ್‌ನಲ್ಲಿ "ಸಲ್ಮಾನ್ ಖಾನ್ ಡಿಮ್ಯಾಂಡ್ ಕುಸಿತ ಕಂಡಿದೆಯೇ?" ಎಂಬ ಚರ್ಚೆಗೆ ನಾಂದಿ ಹಾಡಿದೆ.

ಹಣಕ್ಕಿಂತ ಸ್ನೇಹವೇ ಮಿಗಿಲು ಅಂದ್ರಾ ಸುಲ್ತಾನ್?

ಸಲ್ಮಾನ್ ಖಾನ್ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ, ಈ ಸಂಭಾವನೆ ಕಡಿತಕ್ಕೆ ಕಾರಣ ಡಿಮ್ಯಾಂಡ್ ಕಮ್ಮಿ ಆಗಿರುವುದಲ್ಲ, ಬದಲಾಗಿ ಅವರ ‘ದೋಸ್ತಿ’! ಹೌದು, ಈ ಸಿನಿಮಾದ ನಿರ್ಮಾಪಕ ರಫಿ ಕಾಜಿ ಅವರು ಸಲ್ಮಾನ್ ಖಾನ್ ಅವರ ಆತ್ಮೀಯ ಗೆಳೆಯ. ಗೆಳೆಯನಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಿರುವ ಸಲ್ಮಾನ್, ಈ ಬಾರಿ ತಮ್ಮ ಸಂಭಾವನೆಯಲ್ಲೇ ರಿಯಾಯಿತಿ ನೀಡಿ ದೊಡ್ಡ ಗುಣ ಪ್ರದರ್ಶಿಸಿದ್ದಾರೆ ಎನ್ನಲಾಗುತ್ತಿದೆ. "ಸಲ್ಮಾನ್ ಅಂದ್ರೆ ಬರೀ ಮಾಸ್ ಅಷ್ಟೇ ಅಲ್ಲ, ದೋಸ್ತಿ ಕೂಡ" ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೊಂಡಾಡುತ್ತಿದ್ದಾರೆ.

ಬಾಲಿವುಡ್ ಮಾರುಕಟ್ಟೆಯ ಬದಲಾದ ಚಿತ್ರಣ:

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ. ಇಂತಹ ಸಂದರ್ಭದಲ್ಲಿ ನಟರು ನೂರಾರು ಕೋಟಿ ಸಂಭಾವನೆ ಕೇಳುವುದು ನಿರ್ಮಾಪಕರಿಗೆ ಹೊರೆಯಾಗುತ್ತಿದೆ. ಸಲ್ಮಾನ್ ಅವರ ಈ ನಿರ್ಧಾರ ಇತರ ನಟರಿಗೂ ಒಂದು ಸಂದೇಶ ನೀಡಿದಂತಿದೆ. ತನ್ನ ಕುಟುಂಬದ ಸಂಸ್ಥೆಯಾದ 'ಸಲ್ಮಾನ್ ಖಾನ್ ಫಿಲ್ಮ್ಸ್' ಹೊರತಾಗಿ ಬೇರೆ ಬ್ಯಾನರ್‌ನಲ್ಲಿ ಸಿನಿಮಾ ಮಾಡುವಾಗ ಮಾರುಕಟ್ಟೆಯ ಸ್ಥಿತಿಗತಿಯನ್ನು ನೋಡಿ ಸಲ್ಮಾನ್ ಈ ಪ್ಲ್ಯಾನ್ ಮಾಡಿರಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ.

ಸಿಕಂದರ್ ಮೇಲೆ ಎಲ್ಲರ ಕಣ್ಣು:

ಒಂದೆಡೆ ಸಂಭಾವನೆ ಕಡಿಮೆ ಮಾಡಿಕೊಂಡ ಸುದ್ದಿಯಿದ್ದರೆ, ಇನ್ನೊಂದೆಡೆ ಎ.ಆರ್. ಮುರುಗದಾಸ್ ನಿರ್ದೇಶನದ 'ಸಿಕಂದರ್' ಸಿನಿಮಾ ಮೇಲೆ ಸಲ್ಮಾನ್ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಲ್ಮಾನ್ ಕ್ರೇಜ್ ಈಗಲೂ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ಸಿನಿಮಾದ ಹೈಪ್ ಸಾಕ್ಷಿಯಾಗಿದೆ. ಒಟ್ಟಿನಲ್ಲಿ, 50 ಕೋಟಿ ಕಡಿಮೆ ಪಡೆದರೂ ಸಲ್ಮಾನ್ ಖಾನ್ ಬಾಲಿವುಡ್‌ನ ‘ಬಾಸ್’ ಎಂಬುದರಲ್ಲಿ ಎರಡು ಮಾತಿಲ್ಲ. ಸಂಭಾವನೆ ಮುಖ್ಯವೋ ಅಥವಾ ಸಿನಿಮಾದ ಯಶಸ್ಸು ಮುಖ್ಯವೋ ಎಂಬ ಪ್ರಶ್ನೆಗೆ ಸಲ್ಮಾನ್ ತಮ್ಮ ಈ ನಿರ್ಧಾರದ ಮೂಲಕ ಉತ್ತರ ನೀಡಿದ್ದಾರೆ.

ಈ 'ಸಂಭಾವನೆ ಕಡಿತ'ದ ಸುದ್ದಿ ಸಲ್ಮಾನ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡುತ್ತಾ ಅಥವಾ ಇದು ಕೇವಲ ಸ್ನೇಹಕ್ಕಾಗಿ ಮಾಡಿದ ತ್ಯಾಗವೇ ಎಂಬುದನ್ನು ಕಾದು ನೋಡಬೇಕಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇಂಗ್ಲಿಷ್ ಮಾಧ್ಯಮಕ್ಕೆ ಸಂದರ್ಶನ ಕೊಡುತ್ತ, ಟಾಕ್ಸಿಕ್ ಸಿನಿಮಾ ಸ್ಟೋರಿ ಲೀಕ್ ಮಾಡಿದ ನಟ‌ ಯಶ್
ಕನ್ನಡದ ಖ್ಯಾತ ನಟಿಗೆ ಸಾಯಿ ಪಲ್ಲವಿಗಿಂತ ಮೊದಲು 'ಸೀತೆ' ಪಾತ್ರದ ಅವಕಾಶ ಬಂದಿತ್ತು! ಆದ್ರೆ ಏಕೆ ಆಯ್ಕೆಯಾಗಿಲ್ಲ?