ನಾನು ಆರೋಗ್ಯವಾಗಿದ್ದೇನೆ; ಸಾವಿನ ವದಂತಿಗೆ ಸ್ವತಃ ದ್ವಾರಕೀಶ್ ಸ್ಪಷ್ಟನೆ

Published : Jul 16, 2019, 12:19 PM ISTUpdated : Jul 20, 2019, 01:21 PM IST
ನಾನು ಆರೋಗ್ಯವಾಗಿದ್ದೇನೆ; ಸಾವಿನ ವದಂತಿಗೆ ಸ್ವತಃ ದ್ವಾರಕೀಶ್ ಸ್ಪಷ್ಟನೆ

ಸಾರಾಂಶ

ಹಿರಿಯ ನಟ ದ್ವಾರಕೀಶ್ ಆರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವದಂತಿ |  ದ್ವಾರಕೀಶ್ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳಿಂದ ಸ್ಪಷ್ಟನೆ 

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ದ್ವಾರಕೀಶ್ ಆಪ್ತ ಚೈತನ್ಯ ಸ್ಪಷ್ಟನೆ ಕೊಟ್ಟಿದ್ದಾರೆ. 

 

ದ್ವಾರಕೀಶ್ ಅವರಿಗೆ ಏನೂ ಆಗಿಲ್ಲ. ದೇವರ ದಯೆಯಿಂದ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಯಾರೂ ಇಂತಹ ಸುದ್ದಿಗಳನ್ನು ನಂಬಬಾರದು ಎಂದಿದ್ದಾರೆ. ಸ್ವತಃ ದ್ವಾರಕೀಶ್ ಅವರೇ, ನಾನಿನ್ನೂ ಬದುಕಿದ್ದೇನೆ. ಆರೋಗ್ಯವಾಗಿದ್ದೇನೆ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. 

"

ನೀ ಬರೆದ ಕಾದಂಬರಿ ಇವರ ನಿರ್ದೇಶನದ ಮೊದಲ ಚಿತ್ರ. ಸಿಂಗಾಪುರದಲ್ಲಿ ರಾಜಾ ಕುಳ್ಳ ಸಿನಿಮಾದಲ್ಲಿ ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಫೇಮಸ್. ಗುರು ಶಿಷ್ಯರು, ಪ್ರಚಂಡ ಕುಳ್ಳ, ಮಾತು ತಪ್ಪದ ಮಗ, ಆಟೋ ರಾಜಾ. ಸಿಂಹದ ಮರಿ ಸೈನ್ಯ ಸೇರಿದಂತೆ  300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.  50 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಜನಿಕಾಂತ್‌ ಬಳಿಕ ಗಿಲ್ಲಿ ನಟನ ಬಗ್ಗೆ Kiccha Sudeep ಹೇಳಿದ್ದು ನಿಜಾನಾ? ಸತ್ಯಾ ಸತ್ಯತೆ ಏನು?
Netflix ನಲ್ಲಿ ಟ್ರೆಂಡಿಂಗಲ್ಲಿರೋ ಸಿನಿಮಾಗಳು… ನೋಡಿಲ್ಲ ಅಂದ್ರೆ ಇವತ್ತೆ ನೋಡಿ