
ಅಜಯ್ ದೇವಗನ್ ಮತ್ತು ಕಾಜೋಲ್ ದೇವಗನ್ ದಾಂಪತ್ಯಕ್ಕೆ ಸರಿಯಾಗಿ ಹನ್ನೆರಡು ವರ್ಷ ತುಂಬಿದೆ. ಬಾಲಿವುಡ್‌ನ ಮಟ್ಟಿಗೆ ಹನ್ನೆರಡು ಎನ್ನುವುದು ದೊಡ್ಡ ಅವಧಿಯೇ ಸರಿ. ಇಬ್ಬರು ನಟ-ನಟಿಯರಾಗಿ ತಮ್ಮ ತಮ್ಮ ಅಸ್ಮಿತೆಗಳನ್ನು ಕಾಪಾಡಿಕೊಂಡು ಒಟ್ಟಾಗಿ ಸಾಗುವಾಗ ಸಣ್ಣ ಪುಟ್ಟವಿರಸ ಸಹಜ. ಇದರ ನಡುವಲ್ಲೂ ಅವರದ್ದು ಅನ್ಯೋನ್ಯ ಜೋಡಿ. ಇದು ಸಾಧ್ಯವಾಗಿದ್ದು ಹೇಗೆ ಎಂದು ದೇವಗನ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
‘ನಾನು ಮತ್ತು ಕಾಜೋಲ್ ಮದುವೆಯಾದಾಗ ಹೇಗಿದ್ದೆವೋ ಈಗಲೂ ಹಾಗೆಯೇ ಇದ್ದೇವೆ. ನನಗಾಗಿ ಅವಳು, ಅವಳಿಗಾಗಿ ನಾನು ಏನೂ ಬದಲಾವಣೆ ಮಾಡಿಕೊಂಡಿಲ್ಲ. ನಾನು ನಾನಾಗಿಯೇ ಇದ್ದೇನೆ, ಅವಳು ಅವಳಾಗಿಯೇ ಇದ್ದಾಳೆ. ಇದೇ ನಮ್ಮ ಸಂಸಾರದ ಆನಂದದ ಗುಟ್ಟು’ ಎಂದು ಹೇಳುವ ಮೂಲಕ ಸಂಸಾರದಲ್ಲಿ ಸಂತೋಷ ಇರಬೇಕಾದಾರೆ ವೈಯಕ್ತಿಕವಾಗಿ ಇಬ್ಬರಿಗೂ ಪರಸ್ಪರ ಗೌರವ, ಮನ್ನಣೆ ಇರಬೇಕು ಎಂದು ಸಾರಿದ್ದಾರೆ.
ಬೇರೆ ಹುಡುಗಿ ಮೇಲೆ ಕಣ್ಣಾಕುವ ಅಜಯ್ ಗೆ ಪೊಸೆಸಿವ್ ಕಾಜೋಲ್ ರಿಯಾಕ್ಷನ್ ಇದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.