ಚಿತ್ರದ ಹೆಸರು ಮತ್ತು ಅದರ ಲುಕ್‌ಗಳಿಂದಲೇ ಗಮನ ಸೆಳೆದಿರುವ ‘ಮಹಿರ’ ಚಿತ್ರಕ್ಕೆ ಲಂಡನ್‌ನಲ್ಲಿ ಅದ್ದೂರಿಯಾಗಿ ಸ್ವಾಗತ ಸಿಕ್ಕಿದೆ.
ಮೊಟ್ಟಮೊದಲ ಬಾರಿಗೆ ರೆಡ್ ಕಾರ್ಪೆಟ್ ಈವೆಂಟ್ ಮೂಲಕ ಕನ್ನಡದ ಫ್ಯುಚರ್ ಚಿತ್ರವೊಂದರ ಪ್ರಿಮಿಯರ್ ಶೋ ಆಯೋಜಿಸಿದ್ದು, ಇಲ್ಲಿ ‘ಮಹಿರ’ ತೆರೆ ಕಂಡಿದೆ. ರಾಜ್ ಬಿ ಶೆಟ್ಟಿ, ವರ್ಜಿನಿಯಾ, ಚೈತ್ರಾ ಆಚಾರ್, ಬಾಲಾಜಿ ಮನೋಹರ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಜುಲೈ 7ರಂದು ಲಂಡನ್‌ನ ಓಟು ಸಿನಿವರ್ಲ್ಟ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿದ್ದು, ಕನ್ನಡಿಗರು ಮಾತ್ರವಲ್ಲದೆ ಕನ್ನಡೇತರರು ಕೂಡ ಬಂದು ನೋಡಿದ್ದಾರಂತೆ.
ಇಷ್ಟೊಂದು ಕೋಟಿ ಬೇಕಾಯ್ತಾ ಕೋಟಿಗೊಬ್ಬ 3 ಸೆಟ್‌ಗೆ ?
‘ರೆಡ್ ಕಾರ್ಪೆಟ್ ಈವೆಂಟ್ ಮೂಲಕ ಕನ್ನಡ ಚಿತ್ರದ ಪ್ರಿಮಿಯರ್ ಶೋ ನಡೆದಿರುವುದು ಇದೇ ಮೊದಲು. ಪ್ರತಿಷ್ಠಿತ ಓ2 ಸಿನಿವಲ್ಡ್‌ರ್‍ನ ಚಿತ್ರಮಂದಿರದಲ್ಲಿ 280 ಸೀಟ್‌ಗಳಿದ್ದು, 300ಕ್ಕೂ ಹೆಚ್ಚು ಪ್ರೇಕ್ಷಕರು ಬಂದಿದ್ದರು. ಹೀಗಾಗಿ ಒಂದೇ ದಿನ ಎರಡು ಶೋಗಳನ್ನು ಹಾಕಿದ್ದೇವೆ. ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಸಿನಿಮಾ ನೋಡಿದ ಎಲ್ಲರು ಅಮ್ಮನ ಪಾತ್ರ ಮಾಡಿರುವ ವರ್ಜಿನಿಯಾ ಹಾಗೂ ರಾಜ್ ಬಿ ಶೆಟ್ಟಿಅವರ ನಟನೆ ಬಗ್ಗೆ ಹೊಗಳಿದ್ದಾರೆ. ಅದರಲ್ಲೂ ವರ್ಜಿನಿಯಾ ಅವರ ಸಾಹಸ ಸನ್ನಿವೇಶಗಳಿಗೆ ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮ್ಮ- ಮಗಳು ಮತ್ತು ರಾಜ್ ಬಿ ಶೆಟ್ಟಿಈ ಮೂವರು ಮುಖ್ಯ ಪಾತ್ರಗಳ ನಡುವೆ ಇಡೀ ಸಿನಿಮಾ ಸಾಗುತ್ತದೆ. ಎಲ್ಲೂ ಬೇಸರ ಮೂಡಿಸಲ್ಲ. ಅತ್ಯಂತ ಕುತೂಹಲಕಾರಿಯಾಗಿ ಸಾಗುತ್ತದೆ ಎಂದು ಸಿನಿಮಾ ನೋಡಿದವರು ಹೇಳಿದ್ದಾರೆ. ಇದೇ ಖುಷಿಯಲ್ಲಿ ಚಿತ್ರವನ್ನು ಕರ್ನಾಟಕದಲ್ಲಿ ಜುಲೈ 26ರಂದು ತೆರೆಗೆ ತರುತ್ತಿದ್ದೇವೆ’ ಎಂದು ನಿರ್ದೇಶಕ ಮಹೇಶ್ ಗೌಡ ಹೇಳುತ್ತಾರೆ.
ಸಖತ್ ಸೌಂಡ್ ಮಾಡುತ್ತಿದೆ ಕುರುಕ್ಷೇತ್ರದ ಪ್ರೇಮ ಗೀತೆ!
ಅಂದಹಾಗೆ ಅಮೆರಿಕ ಮೂಲದ ವರ್ಜಿನಿಯಾ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಹೀಗಾಗಿ ಎರಡೂವರೆ ತಿಂಗಳು ನಟನೆಯ ತರಬೇತಿ ಜತೆಗೆ ಸಾಹಸ ದೃಶ್ಯಗಳಿಗೆ ಪೂರ್ವ ತಯಾರಿ ಮಾಡಿಕೊಂಡೇ ಶೂಟಿಂಗ್ ಮಾಡಿದ್ದು, ಅದರ ಫಲಿತಾಂಶ ಈಗ ತೆರೆ ಮೇಲೆ ಕಾಣುತ್ತಿದೆ ಎಂಬುದು ನಿರ್ದೇಶಕರ ಮಾತು.