452 ಕೋಟಿ ರೂ ಗಳಿಸಿದ ಹನುಮಾನ್ ಅಂಶ್ ಸಿನಿಮಾ ಸೀಕ್ವೆಲ್ ವಿವಾದ, ಆರಂಭದಲ್ಲೇ ತಂಡದಲ್ಲಿ ಜಟಾಪಟಿ

Published : Nov 02, 2026, 06:47 PM IST
Hanuman ansh box office collection day 76

ಸಾರಾಂಶ

ಕಾಂತಾರ ಸೇರಿದಂತೆ ಹಲವು ಸಿನಿಮಾ ದಾಖಲೆ ಮುರಿದ ಹನುಮಾನ್ ಅಂಶ್ ಬರೋಬ್ಬರಿ 452 ಕೋಟಿ ರೂಪಾಯಿ ಗಳಿಸಿದೆ. ಇದೀಗ ಸೀಕ್ವೆಲ್‌ಗೆ ರೆಡಿಯಾಗಿರುವ ಚಿತ್ರತಂಡದಲ್ಲಿ ಜಟಾಪಟಿ ಶುರುವಾಗಿದೆ. ಆರಂಭದಲ್ಲೇ ಸಂಕಷ್ಟ ಎದುರಾಗಿದೆ.

ಮುಂಬೈ (ನ.02) ನೀಮ್ ಕರೋಲಿ ಬಾಬಾ ಆಧಾರಿತ ಹನುಮಾನ್ ಅಂಶ್ ಸಿನಿಮಾ ಬಾಲಿವುಡ್‌ನ ಹಲವು ದಾಖಲೆ ಮುರಿದಿತ್ತು. ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಒಟ್ಟು 452 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭರ್ಜರಿ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ಹನುಮಾನ್ ಅಂಶ್ 2 ಸೀಕ್ವೆಲ್ ತೆಗೆಯಲು ಮುಂದಾಗಿದೆ. ಆದರೆ ಆರಂಭದಲ್ಲೇ ತಂಡದಲ್ಲಿ ಜಟಾಪಟಿ ಶುರುವಾಗಿದೆ. ಕಾಪಿರೈಟ್ಸ್ ವಿಚಾರದಲ್ಲಿ ಹನುಮಾನ್ ಅಂಶ್ 2 ಸಿನಿಮಾ ವಿವಾದದಲ್ಲಿ ಸುಲಿಕಿಕೊಂಡಿದೆ.

ಇಬ್ಬರ ನಡುವೆ ಜಗಳ, ಸಿನಿಮಾಗೆ ಸಂಕಷ್ಟ

ಹನುಮಾನ್ ಅಂಶ್ ಯಸಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದಂತೆ ಸೀಕ್ವೆಲ್ ಹನುಮಾನ್ ಅಂಶ್ 2 ಸಿನಿಮಾ ಘೋಷಣೆಯಾಗಿತ್ತು. ಇತ್ತ ಸಿನಿ ಪ್ರೇಕ್ಷರು ಸೀಕ್ವೆಲ್‌ಗಾಗಿ ಕಾಯುತ್ತಿದ್ದಾರೆ. ಒಂದೆಡೆ ಭರ್ಜರಿ ಯಶಸ್ಸು ಮತ್ತೊಂದೆಡೆ ನಿರೀಕ್ಷೂ ಮೀರಿದ ಕಲೆಕ್ಷನ್ ಚಿತ್ರತಂಡದಲ್ಲಿ ಒಡಕು ಮೂಡಿಸಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶಿಸಿದ್ದ ಹನುಮಾನ್ ಅಂಶ್ ಸಿನಿಮಾದ ಸೀಕ್ವೆಲ್‌ ಶೂಟಿಂಗ್‌ಗೆ ಟೈಟಲ್, ಚಿತ್ರದ ಕತೆಗಳ ಹಕ್ಕುಸ್ವಾಮ್ಯ (ಕಾಪಿರೈಟ್ಸ್) ಕುರಿತು ನಿರ್ಮಾಣ ಸಂಸ್ಥೆ ನಡುವೆ ಒಡಕು ಮೂಡಿದೆ. ಒಮ್ಮತದ ನಿರ್ಧಾರಕ್ಕೆ ಸಾಧ್ಯವಾಗಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ.

ಹನುಮಾನ್ ಅಂಶ್ ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ಹನುಮಾನ್ ಅಂಶ್ 2 ಸಿನಿಮಾ ಹಂಚಿಕೆ ಮಾಡಲು ಒಪ್ಪಂದ ಮಾಡಿಕೊಂಡ ಸಂಸ್ಥೆಗಳ ನಡುವೆ ಇಂಟಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್ ವಿವಾದ ಸೃಷ್ಟಿಯಾಗಿದೆ. ಹೀಗಾಗಿ ಕಾನೂನು ಸಂಘರ್ಷ ತೀವ್ರಗೊಳ್ಳುತ್ತಿದೆ. ಹನುಮಾನ್ ಹೆಸರನ್ನು ಸೀಕ್ವೆಲ್ 2ಗೆ ಬಳಸಿಕೊಳ್ಳಲು ಕಾನೂನು ತೊಡಗು ಎದುರಾಗಿದೆ. ಇದರ ನಡುವೆ ನಿರ್ಮಾಪಕರು ವಿವಾದ ಬಗೆ ಹರಿಸಿ ಸೀಕ್ವೆಲ್ ಶೂಟಿಂಗ್‌ಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ವಿವಾದ ಹೆಚ್ಚಾಗುತ್ತಿದೆ.

ಹನುಮಾನ್ ಅಂಶ್ 2 ಸಿನಿಮಾ ವಿಳಂಬ

ಹನುಮಾನ್ ಅಂಶ್ 2 ವಿವಾದದಿಂದ ಶೂಟಿಂಗ್ ಸ್ಥಗಿತಗೊಂಡಿದೆ. ಸಿನಿಮಾ ಚಿತ್ರಕತೆ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳು ವಿಳಂಬವಾಗಿದೆ. ವಿವಾದ ಬಗೆಹರಿಸಲು ನಿರ್ಮಾಪಕರು ಮುಂದಾಗಿದ್ದಾರೆ. ಕೆಲ ದಿನಗಳಲ್ಲೇ ವಿವಾದ ಬಗೆಹರಿಸಿ ಶೂಟಿಂಗ್ ಆರಂಭಿಸುವುದಾಗಿ ಚಿತ್ರತಂಡ ಹೇಳಿದೆ. ಆದರೆ ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಕಾರಣ ಮೊದಲ ಭಾಗದಲ್ಲಿ ತೇಜಾ ಸಜ್ಜಾ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ವಿವಾದದಿಂದ ಕೆಲ ನಟ ನಟಿಯರು ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಹನುಮಾನ್ ಅಂಶ್ 2 ಸಿನಿಮಾ ತಂಡವೂ ಆತಂಕ ಹೊರಹಾಕಿದೆ.

ಮೂಲಗಳ ಪ್ರಕಾರ ಸಿನಿಮಾದ ಸೀಕ್ವೆಲ್‌ಗೆ ಹೆಸರು ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹನುಮಾನ್ ಅಂಶ್ ಸಿನಿಮಾ ಟೈಟಲ್ ಕಾಪಿರೈಟ್ಸ್‌ನಿಂದ ಚಿತ್ರತಂಡ ಇದೀಗ ಹೊಸ ಹೆಸರಿನಲ್ಲಿ ಸೀಕ್ವೆಲ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಂಜುಳಾ ಮದುವೆಯ ರಹಸ್ಯವನ್ನು ವೇದಿಕೆ ಮೇಲೆ ದಿಢೀರ್ ಬಯಲು ಮಾಡಿದ್ದೇಕೆ ದ್ವಾರಕೀಶ್?
₹450 ಕೋಟಿ ಭರ್ಜರಿ ಗಳಿಕೆಯ ಬೆನ್ನಲ್ಲೇ ಹನುಮಾನ್ ಅಂಶ್‌ ತಂಡದಲ್ಲಿ ಬಿರುಕು: ಸಿನಿಮಾ ಹಕ್ಕುಗಳಿಗಾಗಿ ಶುರುವಾಯ್ತು ಯುದ್ಧ!