
ಸುಕನ್ಯಾ ಎನ್.ಎನ್, ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ, ಆಳ್ವಾಸ್ ಕಾಲೇಜು ಮೂಡುಬಿದಿರೆ
ದಕ್ಷಿಣ ಕನ್ನಡ ಜಿಲ್ಲೆ ಅಂದ್ರೇನೆ ತುಳು ಭಾಷೆಯ ತವರೂರು ಅಂತ ಪಟ್ ಅಂತ ಯಾರ್ ಬೇಕಿದ್ರು ಹೇಳ್ತಾರೆ. ಅಂಥದ್ರಲ್ಲಿ ತುಳು ಸಿನಿಮಾ ಅಂದ್ರೆ ಮನರಂಜನೆಗೆ ಹೆಸರುವಾಸಿಯಾಗಿದೆ .ಹಾಗೇನೆ ಅನೇಕ ತುಳು ಸಿನಿಮಾಗಳು ಇಂದು ದೇಶದಾದ್ಯಂತ ಸದ್ದು ಮಾಡಿದ್ದು ಇದೀಗ 'ಸರ್ಕಸ್ ' ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದೆ ತುಳುನಾಡ ಸರ್ಕಸ್ ತಂಡ. ಬಿಗ್ ಬಾಸ್ ಖ್ಯಾತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನದ ಸರ್ಕಸ್ ತುಳು ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಿನಿಮಾ ಬಿಡುಗಡೆಗೂ ಮುನ್ನವೇ ದುಬೈ, ಅಮೇರಿಕಾ, ಆಸ್ಟ್ರೇಲಿಯಾ ಮತ್ತು ದೇಶ ವಿದೇಶಗಳಲ್ಲಿ 51 ಪ್ರೀಮಿಯರ್ ಶೋ ನಡೆಸಿದ್ದು, ಈಗಾಗಲೇ ಈ ಚಿತ್ರ ಸಾವಿರಾರು ವೀಕ್ಷಕರ ಪ್ರಶಂಸೆಯನ್ನು ಗಳಿಸಿದೆ. ನಟ, ನಿರೂಪಕ, ನಿರ್ದೇಶಕರೂ ಆದಂತಹ ಬಿಗ್ ಬಾಸ್ ಸೀಸನ್ 9 ರ ವಿಜೇತ ರೂಪೇಶ್ ಶೆಟ್ಟಿ ತಮ್ಮ ನಿರ್ದೇಶನದ ಸರ್ಕಸ್ ಚಿತ್ರದ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ ಮತ್ತು ಪ್ರತಿಯೊಬ್ಬ ಮನುಷ್ಯನು ಪ್ರತಿ ದಿನ ತಮ್ಮ ಜೀವನದ ಸೈಕಲ್ ಅನ್ನು ತುಳಿಯುತ್ತಲೇ ಇರಬೇಕು ಇದೆ ಜೀವನ ಎಂಬ ಸಂದೇಶವನ್ನಿಟ್ಟುಕೊಂಡು ಹಾಸ್ಯ ರೂಪದಲ್ಲಿ ಜಗತ್ತಿಗೆ ಮನುಷ್ಯನ ಜೀವನ ಯಾವ ರೀತಿ ಸೈಕಲ್ ನ ಮೆಟ್ಟಿಲಂತೆ ಇರುತ್ತದೆ ಎಂಬ ಸಂದೇಶವನ್ನು ಸಾರುವ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಊರಿಗೆ ತೆರಳಿ ಮಕ್ಕಳಂತೆ ಆಟವಾಡಿ, ಬಾಲ್ಯದ ನೆನಪನ್ನು ಮರುಸೃಷ್ಟಿಸಿದ ರೂಪೇಶ್ ಶೆಟ್ಟಿ
ಈ ಚಿತ್ರದಲ್ಲಿ ತುಳುವರ ಹಾಸ್ಯ ಜಬರ್ದಸ್ತ್ ಜೋರಾಗಿದ್ದು ಅನೇಕ ಯುವ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ಈ ಹಿಂದೆ ರೂಪ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಂತಹ 'ಗಿರ್ ಗಿಟ್' ಎಂಬ ತುಳು ಚಿತ್ರ ಸಾಕಷ್ಟು ಸದ್ದು ಮಾಡಿದ್ದು ದೇಶ ವಿದೇಶಗಳಲ್ಲಿ ಸಿನಿ ರಸಿಕರಿಂದ ಭರ್ಜರಿ ಮೆಚ್ಚುಗೆ ಕಾರಣವಾಗಿತ್ತು. ಈಗ ಸರ್ಕಸ್ ಚಿತ್ರವು ಅದ್ದೂರಿಯಾಗಿ ಏಕಕಾಲದಲ್ಲಿ ವಿದೇಶದಲ್ಲಿಯೂ ಬಿಡುಗಡೆಗೊಂಡಿದ್ದು ಪ್ರೇಕ್ಷಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ಈ ಚಿತ್ರವನ್ನು ನಿರ್ಮಿಸಿದ್ದಾರೆ .ಇನ್ನು ಚಿತ್ರಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಬರೆದಿದ್ದರೆ ಮತ್ತು ಹೊಸ ಪ್ರತಿಭೆ ನಟಿ ರಚನ ರೈ ಅವರನ್ನು ಈ ಚಿತ್ರದ ಮೂಲಕ ತುಳುಚಿತ್ರ ರಂಗಕ್ಕೆ ಪರಿಚಯಿಸಿದ್ದಾರೆ.
ಸಾನ್ಯಾ ಮನೆಯಲ್ಲಿ ರೂಪೇಶ್ ಶೆಟ್ಟಿ : ಮದ್ವೆ ಯಾವಾಗ ಎಂದ ಅಭಿಮಾನಿಗಳು
ಇನ್ನೂ ತುಳುನಾಡ ಹಾಸ್ಯ ಮುತ್ತುಗಳು ಆದಂತಹ ನವರಸ ನಾಯಕ ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಸಾಯಿಕೃಷ್ಣ,ಕುಡ್ಲ, ಪ್ರಸನ್ನಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ಪ್ರದೀಪ್ ಆಳ್ವ, ನಿತೇಶ್ ಶೆಟ್ಟಿ ಎಕ್ಕಾರ್, ರೂಪ ಮಾರ್ಕಾಡಿ, ಪಂಚಮಿ ಭೋಜರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 'ಸಲಗ" ಖ್ಯಾತಿಯ ಯಶ್ ಶೆಟ್ಟಿ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಡಕ್ ಎಂಟ್ರಿ ಕೊಟ್ಟಿದ್ದಾರೆ. ನೃತ್ಯ ನಿರ್ದೇಶಕನಾಗಿ ನವೀನ್ ಶೆಟ್ಟಿ, ನಿರಂಜನ ದಾಸ್ ಕ್ಯಾಮೆರಾ, ರಾಹುಲ್ ವಸಿಷ್ಠ ಸಂಕಲನ, ಲೋಯ್ ಸಲ್ದಾನ ಅವರ ಸಂಗೀತ ಈ ಚಿತ್ರದಲ್ಲಿ ಕೇಳುಗರ ಕಿವಿ ಇಂಪಾಗುವಂತಿದೆ. ಸುಮಾರ್ 1.30 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸರ್ಕಸ್ ಸಿನಿಮಾವು ಇಂದು ಸಿನಿಪ್ರಿಯರ ಮನೆ ಮನಗಳ ಕದ ತಟ್ಟುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.