ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹೆಮ್ಮೆಯ ಸುದ್ದಿ: ಆಸ್ಕರ್ ರೇಸ್‌ಗೆ ಎಂಟ್ರಿ ಕೊಟ್ಟ ರಾಮಾಯಣ!

Published : Nov 25, 2026, 04:08 PM IST
Yash Ramayana Movie

ಸಾರಾಂಶ

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಆಸ್ಕರ್ 2027ರ ಅತ್ಯುತ್ತಮ ದೃಶ್ಯ ಪರಿಣಾಮಗಳ ವಿಭಾಗದ ಲಾಂಗ್‌ಲಿಸ್ಟ್‌ಗೆ ಆಯ್ಕೆಯಾಗಿದೆ.

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ದೃಶ್ಯ ಪರಿಣಾಮಗಳು (VFX) ವಿಭಾಗದ ಲಾಂಗ್ ಲಿಸ್ಟ್‌ಗೆ ಆಯ್ಕೆಯಾಗಿದೆ. ಬೃಹತ್ ಹಾಲಿವುಡ್ ಸಿನಿಮಾಗಳ ಜೊತೆ ಇದು ಪೈಪೋಟಿ ನಡೆಸಲಿದೆ.

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿರುವ ಈ ಸಿನಿಮಾ, ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡುತ್ತಿದೆ. 4000 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟಿಕೆಟ್ ದರವನ್ನು ಗುರುನಾನಕ್ ಜಯಂತಿ ಪ್ರಯುಕ್ತ 99 ರೂಪಾಯಿಗೆ ಇಳಿಸಲಾಗಿತ್ತು.

ರಾಮಾಯಣ ಚಿತ್ರಕ್ಕೆ ದೊಡ್ಡ ಸಾಧನೆ!

ಈಗ 'ರಾಮಾಯಣ' ಸಿನಿಮಾ ಮತ್ತೊಂದು ದೊಡ್ಡ ಸಾಧನೆ ಮಾಡಿದೆ. ಹೌದು, ಈ ಸಿನಿಮಾ ಆಸ್ಕರ್ ಪಟ್ಟಿಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಈ ವರ್ಷದ ಅತ್ಯುತ್ತಮ ದೃಶ್ಯ ಪರಿಣಾಮಗಳು (Best Visual Effects) ವಿಭಾಗದಲ್ಲಿ ಪರಿಗಣಿಸಲಾದ ಟಾಪ್ 20 ಸಿನಿಮಾಗಳ ಪಟ್ಟಿಯಲ್ಲಿ 'ರಾಮಾಯಣ' ಸ್ಥಾನ ಪಡೆದಿದೆ. ವೆರೈಟಿ (Variety) ವರದಿಯ ಪ್ರಕಾರ, ನಿತೇಶ್ ತಿವಾರಿ ಅವರ ಈ ಸಿನಿಮಾ, ಹಾಲಿವುಡ್‌ನ ದೊಡ್ಡ ಸಿನಿಮಾಗಳು ಮತ್ತು ಜಪಾನ್‌ನ 'ಗಾಡ್ಜಿಲ್ಲಾ ಮೈನಸ್ ಜೀರೋ' ಸಿನಿಮಾದ ಜೊತೆ ಪೈಪೋಟಿ ನಡೆಸುತ್ತಿದೆ.

ಆಸ್ಕರ್ ಲಾಂಗ್ ಲಿಸ್ಟ್‌ನಲ್ಲಿ ರಾಮಾಯಣ!

ವರದಿಗಳ ಪ್ರಕಾರ 1600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ 'ರಾಮಾಯಣ-ಪಾರ್ಟ್ 1' ಸಿನಿಮಾದ CGI ಮತ್ತು ದೃಶ್ಯ ಪರಿಣಾಮಗಳಿಗೆ (VFX) ಪ್ರಶಂಸೆ ವ್ಯಕ್ತವಾಗಿದೆ. ಇದು ಭಾರತದ ಅತ್ಯುತ್ತಮ ಸಿನಿಮಾ ಎಂದು ಹಲವರು ಕರೆದಿದ್ದು, ಹಾಲಿವುಡ್ ಸಿನಿಮಾಗಳಿಗೆ ಸರಿಸಮಾನವಾಗಿದೆ ಎನ್ನುತ್ತಿದ್ದಾರೆ. ಡ್ಯೂನ್ (Dune) ಮತ್ತು ಇಂಟರ್‌ಸ್ಟೆಲ್ಲರ್ (Interstellar) ನಂತಹ ಸಿನಿಮಾಗಳಿಗೆ ಕೆಲಸ ಮಾಡಿರುವ, ಎಂಟು ಬಾರಿ ಆಸ್ಕರ್ ಗೆದ್ದಿರುವ DNEG ಸ್ಟುಡಿಯೋ, ಈ ಚಿತ್ರದ ವಿಎಫ್‌ಎಕ್ಸ್ ಮಾಡಿದೆ. DNEG ಕೆಲಸದಿಂದಾಗಿ, 2027ರ ಅಕಾಡೆಮಿ ಅವಾರ್ಡ್ಸ್‌ನ ಅತ್ಯುತ್ತಮ ದೃಶ್ಯ ಪರಿಣಾಮಗಳ ಪ್ರಶಸ್ತಿಗೆ ಪರಿಗಣಿಸಲಾಗುತ್ತಿರುವ ಟಾಪ್ 20 ಸಿನಿಮಾಗಳ ಪಟ್ಟಿಯಲ್ಲಿ 'ರಾಮಾಯಣ' ಈಗ ಸ್ಥಾನ ಪಡೆದುಕೊಂಡಿದೆ.

ಸ್ಪರ್ಧೆಯಲ್ಲಿರುವ ರಾಮಾಯಣ!

ಇನ್ನು ವೆರೈಟಿ (Variety) ವರದಿ ಪ್ರಕಾರ, ಹಾಲಿವುಡ್‌ನ ಜನಪ್ರಿಯ ಸಿನಿಮಾಗಳಾದ 'ಡ್ಯೂನ್: ಪಾರ್ಟ್ ತ್ರೀ', 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ', 'ದಿ ಒಡಿಸ್ಸಿ', 'ಪ್ರಾಜೆಕ್ಟ್ ಹೈಲ್ ಮೇರಿ', 'ಡಿಸ್ಕ್ಲೋಸರ್ ಡೇ', ಮತ್ತು 'ಅವೆಂಜರ್ಸ್: ಡೂಮ್ಸ್‌ಡೇ' ಸಿನಿಮಾಗಳ ಜೊತೆ ರಾಮಾಯಣ ಸಿನಿಮಾ ಸ್ಪರ್ಧೆಯಲ್ಲಿದೆ. ಇವುಗಳ ಜೊತೆಗೆ, 'ವೇಲ್‌ಫಾಲ್' ಮತ್ತು 'ದಿ ಶೀಪ್ ಡಿಟೆಕ್ಟಿವ್ಸ್' ನಂತಹ ಸಣ್ಣ ಸಿನಿಮಾಗಳು ಹಾಗೂ ರಾಮಾಯಣದ ಜೊತೆಯಲ್ಲೇ ಬಿಡುಗಡೆಯಾದ ಜಪಾನ್‌ನ 'ಗಾಡ್ಜಿಲ್ಲಾ: ಮೈನಸ್ ಜೀರೋ' ಕೂಡ ರೇಸ್‌ನಲ್ಲಿದೆ. ಇದರ ಮೊದಲ ಭಾಗವಾದ 'ಗಾಡ್ಜಿಲ್ಲಾ ಮೈನಸ್ ಒನ್' 2025ರ ಆಸ್ಕರ್‌ನಲ್ಲಿ ದೃಶ್ಯ ಪರಿಣಾಮಗಳ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿ, ಒಟಿಟಿಯಲ್ಲಿ ಕಮಾಲ್ ಮಾಡಿದ ಸ್ಯಾಂಡಲ್‌ವುಡ್‌ನ ಟಾಪ್ ಸಿನಿಮಾಗಳು
ನಟ ದರ್ಶನ್ ಜೈಲಿಂದ ಹೊರಗೆ ಬೆನ್ನುನೋವು ಚಿಕಿತ್ಸೆಗೆ ಕೇಳಿದ ಆಸ್ಪತ್ರೆಗಳು ಯಾವುವು ಗೊತ್ತಾ?