ಯಶ್ ಹೀರೋ ಆಗ್ಬೇಕಿತ್ತು, ಆದ್ರೆ ಯೋಗರಾಜ್ ಭಟ್ ಸಿನಿಮಾ 'ಪಂಚರಂಗಿ' ನಾಯಕ ಬದಲಾಗಿದ್ದು ಹೇಗೆ?

Published : Jun 11, 2025, 04:35 PM ISTUpdated : Jun 11, 2025, 04:43 PM IST
Yogaraj Bhat Rocking Star Yash

ಸಾರಾಂಶ

ಬಾಲಿವುಡ್ ಸಿನಿರಂಗ ಸೇರಿದಂತೆ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಈ ರೀತಿಯ ಘಟನೆಗಳು ಅಂದು ಹಾಗೂ ಇಂದು ನಡೆಯುತ್ತಲೇ ಇರುತ್ತವೆ. ಅಮಿತಾಭ್ ಬಚ್ಚನ್ ಮಾಡಬೇಕಿದ್ದ ಅದೆಷ್ಟೋ ಪಾತ್ರಗಳು ಬೇರೆ ನಟರ ಪಾಲಾಗಿದೆ. ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಮಾಡಬೇಕಿದ್ದ ಸಿನಿಮಾ ಬೇರೆ ನಟಿಯರ ಪಾಲಾಗಿದೆ. 

ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಪಂಚರಂಗಿ' ಹೀರೋ ಆಗಿ ಯಶ್ (Rocking Star Yash) ಆಯ್ಕೆ ಆಗಬೇಕಿತ್ತು. ಮೊಟ್ಟಮೊದಲು ಈ ಕಥೆಗೆ ಹೀರೋ ಆಗಿ ಆಯ್ಕೆ ಮಾಡಿದ್ದು ಯಶ್ ಅವರನ್ನೇ ಆಗಿತ್ತು. ಆದರೆ, ಕೆಲವು ಸಿನಿಮಾಗಳ ಡೇಟ್ಸ್ ಹಾಗೂ ಅನಿವಾರ್ಯ ಕಾರಣಗಳಿಂದ ಆ ಬಳಿಕ ಈ ಜಾಗಕ್ಕೆ ಬಂದಿದ್ದು ನಟ ದಿಗಂತ್ ಮಂಚಾಲೆ. ಈ ಸುದ್ದಿ ಇತ್ತೀಚೆಗೆ ಹರಿದಾಡತೊಡಗಿತ್ತು. ಈ ಬಗ್ಗೆ ಪಂಚರಂಗಿ ಚಿತ್ರದ ನಿರ್ದೇಶಕರಾದ ಯೋಗರಾಜ್ ಭಟ್ ಅವರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪರ್ಕಿಸಿದಾಗ ಯೋಗರಾಜ್‌ ಭಟ್ ಅವರು ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

'ಹೌದು, ಒಮ್ಮೆ ಹಾಗೇ ಆಗಬೇಕಿತ್ತು. ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ, 'ಪಂಚರಂಗಿ' ಚಿತ್ರಕ್ಕೆ ಯಶ್ ಹೀರೋ ಆಗಲಿಲ್ಲ.' ಎಂದಿದ್ದಾರೆ. ಅಲ್ಲಿಗೆ ಸಿಕ್ಕ ಸುದ್ದಿ 'ನಿಜ' ಎಂಬುದು ಕನ್ಫರ್ಮ್. ಕನ್ನಡ ಸೇರಿದಂತೆ ಬಹಳಷ್ಟು ಭಾಷೆಯ ಸಿನಿಮಾಗಳಲ್ಲಿ ಹೀಗೆ ಅಗುತ್ತಲೇ ಇರಯತ್ತವೆ, ಅದೇನೂ ಹೊಸ ಸಂಗತಿ ಅಲ್ಲ. ಕಾರಣ, ಯಾವುದೇ ಸಿನಿಮಾ ಇರಲಿ, ಡೇಟ್ಸ್ ಹೊಂದಾಣಿಕೆ, ಕಥೆಗೆ-ಪಾತ್ರಕ್ಕೆ ಯಾವುದೇ ಒಬ್ಬ ನಟ ಅಥವಾ ಹೊಂದಾಣಿಕೆ ಆಗಬೇಕಾಗುತ್ತದೆ. ಈ ಕಾರಣಕ್ಕೆ ಬಹಳಷ್ಟು ಬಾರಿ ಯಾರನ್ನೋ ಮೊದಲು ಆಯ್ಕೆ ಮಾಡಿ ಇನ್ಯಾರನ್ನೋ ಆ ಬಳಿಕ ಹೀರೋ ಅಥವಾ ಹೀರೋಯಿನ್ ಮಾಡಿಕೊಂಡು ಸಿನಿಮಾ ಮಾಡಿರುವ ಉದಾಹರಣೆ ಬೇಕಾದಷ್ಟಿದೆ.

ಪಂಚರಂಗಿಯಲ್ಲಿ ಕೂಡ ಅದೇ ಆಗಿದೆ. ಮೊದಲು ಆಯ್ಕೆಯಾಗಿದ್ದು ಯಶ್. ಆದರೆ, ಬಳಿಕ ಆ ಜಾಗಕ್ಕೆ ನಟ ದಿಗಂತ್ ಬಂದಿದ್ದಾರೆ. ಸಿನಿಮಾ ತೆರಕಂಡು ಜನಮೆಚ್ಚುಗೆ ಗಳಿಸಿ ಸೂಪರ್ ಹಿಟ್ ದಾಖಲಿಸಿದೆ. ಮುಂಗಾರು ಮಳೆ ಮೂಲಕ ಕನ್ನಡದ ಸ್ಟಾರ್ ನಿರ್ದೇಶಕರಾಗಿ ಹೊರಹೊಮ್ಮಿರುವ ಯೋರಾಜ್ ಭಟ್ ಅವರು ಬಳಿಕ ಗಾಳಿಪಟ ಚಿತ್ರದ ಮೂಲಕ ಉತ್ತುಂಗ ಸ್ಥಾನದಲ್ಲಿ ಅಂದು ರಾರಾಜಿಸುತ್ತಿದ್ದರು. ಪಂಚರಂಗಿ ಬಳಿಕ ಯೋಜರಾಜ್ ಭಟ್ ಅವರ 'ಮನಸಾರೆ'ಚಿತ್ರ ಕೂಡ ಸೂಪರ್ ಹಿಟ್ ದಾಖಲಿಸಿದೆ. ಅಂದು ಕನ್ನಡ ಸಿನಿಮಾ ಉದ್ಯಮದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗಿತ್ತು.

ಬಾಲಿವುಡ್ ಸಿನಿರಂಗ ಸೇರಿದಂತೆ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಈ ರೀತಿಯ ಘಟನೆಗಳು ಅಂದು ಹಾಗೂ ಇಂದು ನಡೆಯುತ್ತಲೇ ಇರುತ್ತವೆ. ಅಮಿತಾಭ್ ಬಚ್ಚನ್ ಮಾಡಬೇಕಿದ್ದ ಅದೆಷ್ಟೋ ಪಾತ್ರಗಳು ಬೇರೆ ನಟರ ಪಾಲಾಗಿದೆ. ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಮಾಡಬೇಕಿದ್ದ ಸಿನಿಮಾ ಬೇರೆ ನಟಿಯರ ಪಾಲಾಗಿದೆ. ಈ ಸಂಗತಿ ಇಂದಿಗೂ ಕೂಡ ಸಜವಾಗಿಯೇ ನಡೆದುಕೊಂಡು ಬಂದಿದೆ. ಆದರೆ, ಇಂದು ಆ ಸುದ್ದಿ ತಿಳಿದಾಗ, ನಮಗೆ ಅಚ್ಚರಿ ಎನ್ನಿಸುತ್ತವೆ. ಕಾರಣ, ಸಿನಿಮಾವನ್ನು ನಾವು ತೆರೆಯ ಮೇಲೆ ನೋಡಿರುತ್ತೇವೆ. ಆದರೆ. ಅದರ ಹಿಂದೆ ಅದೇನು ನಡೆದಿತ್ತು ಎಂಬುದು ಪ್ರೇಕ್ಷಕ ವರ್ಗಕ್ಕೆ ಗೊತ್ತಿರೋದಿಲ್ಲ.

ಸಿನಿಮಾ ಬಿಡುಗಡೆ ಆಗಿ ಒಂದೋ ಎರಡೋ ದಶಕಗಳು ಕಳೆದ ಮೇಲೆ ಈ ಸಂಗತಿ ಬಹಿರಂಗ ಆದಾಗ, ಸಹಜವಾಗಿಯೇ ಹಲವರ ಪಾಲಿಗೆ ಇದು ಅಚ್ಚರಿ ಹುಟ್ಟಿಸುತ್ತದೆ. ಏಕೆಂದರೆ, ಅದಾದ ಬಳಿಕ ಸಿನಿಮಾ ಉದ್ಯಮದಲ್ಲಿ ಬಹಳಷ್ಟು ಏರಿಳಿತಗಳು ನಡೆದಿರುತ್ತವೆ. ಅಂದಿನ ಘಟನೆಯನ್ನು ಇಂದಿನ ಕನ್ನಡಿಯಲ್ಲಿ ನೋಡಿದಾಗ, ಹತ್ತು ಹಲವು ಸಂಗತಿಗಳು ಶಾಕಿಂಗ್ ಅನ್ನಿಸುತ್ತವೆ ಅಷ್ಟೇ. ಒಟ್ಟಿನಲ್ಲಿ ಕನ್ನಡ ಪ್ರೇಕ್ಷಕರಿಗೆ ನಟ ಯಶ್ ಅವರನ್ನು 'ಪಂಚರಂಗಿ' ಬದಲು 'ಡ್ರಾಮಾ'ದಲ್ಲಿ ನೋಡುವ ಬಾಗ್ಯ ಸಿಕ್ಕಿತು. ಅದೇ ಯೋಗರಾಜ್ ಭಟ್ಟರ ಮುಂದಿನ ಸಿನಿಮಾದಲ್ಲಿ ಯಶ್-ರಾಧಿಕಾ ಪಂಡಿತ್ ಜೋಡಿಯನ್ನು ಸ್ಯಾಂಡಲ್‌ವುಡ್ ಪ್ರೇಕ್ಷಕರು ನೋಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!
ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌