
ಕನ್ನಡದ ನಟ, ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಚೀನಾದ ಒಂದು ಸ್ಟೋರಿ ಹೇಳಿದ್ದಾರೆ. ಅದೀಗ ಭಾರೀ ವೈರಲ್ ಆಗುತ್ತಿದೆ. ಅಲ್ಲಿ ಅವರು ಚೀನಾದ ಒಂದು ಜಾತಿಯ ಬಿದಿರಿನ ಮರದ ಬಗ್ಗೆ ಹೇಳಿದ್ದಾರೆ. ಈ ಸ್ಟೋರಿ ತುಂಬಾ ವಿಭಿನ್ನ ಹಾಗೂ ಸ್ಪೆಷಲ್ ಇದೆ. ಅಲ್ಲಿ ಬೆಳೆಯುವ ಒಂದು ಜಾತಿಯ ಬಿದಿರು ನಿಜವಾಗಿಯೂ ಅಚ್ಚರಿ ಎನ್ನುವಂಥ ಸ್ಟೋರಿ ಹೊಂದಿದೆ. ಜೊತೆಗೆ, ಲೈಫ್ ಲೆಸನ್ ಕೂಡ ಹೇಳುವಂತಿದೆ ಎನ್ನಬಹುದು. ಹಾಗಿದ್ರೆ, ಕನ್ನಡದ ನಟ ಹೇಳಿರೋ ಚೀನಾದ ಅಂಥ ಸ್ಟೋರಿ ಏನು? ಇಲ್ಲಿದೆ ನೋಡಿ...
ಯಶ್ ಅವರು 'ಚೀನಾದಲ್ಲಿ ಒಂದು ಜಾತಿಯ ಬಾಂಬೂ (ಬಿದಿರು) ಮರ ಇದೆ. ಬಿದಿರು ಎಲ್ಲಾ ಕಡೆ ಬೇರೆಬೇರೆ ಸಾಕಷ್ಟು ಜಾತಿಯದ್ದು ಇದೆ. ಆದರೆ, ಚೀನಾದಲ್ಲಿ ಇರೋ ಈ ಬಿದಿರು ವಿಶೇಷತೆ ಹೊಂದಿದೆ. ಅದನ್ನ ಭೂಮಿಯಲ್ಲಿ ನೆಟ್ಟ ಮೇಲೆ ಆಲ್‌ಮೋಸ್ಟ್ ಮೂರು ವರ್ಷ ಭೂಮಿಯ ಮೇಲೆ ಅದು ಬೆಳೆಯೋದಿಲ್. ಅಂದರೆ, ಅದು ಭೂಮಿಯ ಮೇಲ್ಬಾಗದಲ್ಲಿ ಯಾವುದೇ ಬೆಳವಣಿಗೆ ತೋರಿಸೋದಿಲ್ಲ. ಆದರೆ, ಆ ಮೂರೂ ವರ್ಷ ಅದು ಭೂಮಿಯಲ್ಲಿ ಬೇರನ್ನು ಆಳಕ್ಕೆ ಇಳಿಸುತ್ತಲೇ ಇರುತ್ತೆ. ಬಳಿಕ, ಅದು ಬೆಳೆಯೋದಕ್ಕೆ ಪೂರಕವಾಗಿ ಬೇರನ್ನು ಆಳಕ್ಕೆ ಇಳಿಸುತ್ತಲೇ ಹೋಗುತ್ತೆ.
ಸುಮಾರು 3 ವರ್ಷಗಳ ಬಳಿಕ ಬರೀ ಎರಡರಿಂದ ಮೂರು ತಿಂಗಳಲ್ಲಿ (2-3) ಅದು ಬರೋಬ್ಬರಿ 80 ಅಡಿ ಬೆಳೆಯುತ್ತೆ. ಆ ಮೂರೂ ವರ್ಷ ಅದು ಮುಂದೆ ಬೆಳೆಯಬೇಕಾಗಿರೋ ಆ 80 ಅಡಿಗಾಗಿ ಬೇರು ಬಿಡುತ್ತಾ ಇರುತ್ತೆ. ಜೀವನದಲ್ಲಿ ವ್ಯಾಲ್ಯೂ ಸಿಸ್ಟಮ್ ಕೂಡ ಹಾಗೇ. ರೂಟ್ ಸ್ಟ್ರಾಂಗ್ ಮಾಡ್ಕೋಬೇಕು. ಕಾನ್ಫಿಡೆನ್ಸ್ ಅಂದ್ರೆ ಎಲ್ಲಾ ಸಂಗತಿಗಳ ಬಗ್ಗೆ ಕ್ಲಾರಿಟಿ, ಧೈರ್ಯ, ವಿಷಯ ಜ್ಞಾನ ಎಲ್ಲಾನೂ ಸಂಪಾದಿಸಿ, ಆ ಬಳಿಕ ಸಾಧನೆ ಶುರುಮಾಡಿಕೊಂಡದ್ರೆ ಸೋಲು ಅನ್ನೋದು ಬೆನ್ನು ಹತ್ತಲ್ಲ. ಹಾಗೆ ಮಾಡದೇ, ಬೇಸಿಕ್ ಅಂದ್ರೆ ಫಂಡೇಶನ್ ಗಟ್ಟಿ ಮಾಡಿಕೊಳ್ಳದೇ ತುಂಬಾ ಬೆಳೆಯೋಕೆ ಹೋದ್ರೆ ಅದು ಅಸಾಧ್ಯ ಆಗಿಬಿಡುತ್ತೆ. ಆ ಬಿದಿರು ಈ ಪಾಠವನ್ನು ಹೇಳುತ್ತೆ ಅಂತ ಯಶ್ ನಂಬಿದಾರೆ.
ಅವರು ನಂಬಿರೋದು ಸರಿಯಾಗಿದೆ ಅನ್ನಲೇಬೇಕು. ಏಕೆಂದರೆ, ಲೈಫಲ್ಲಿ ರೂಟ್ ಗಟ್ಟಿಯಾಗಿ ಇರಲೇಬೇಕು. ಸನಾತನ ಧರ್ಮದ ಕರ್ಮ ಸಿದ್ಧಾಂತ ಕೂಡ ಅದನ್ನೇ ಹೇಳುತ್ತೆ. 'ಬಿತ್ತಿದ್ದನ್ನು ಬೆಳೆ' ಅನ್ನೋ ಗಾದೆ ಮಾತಿರಲಿ ಅಥವಾ, 'ಮಾಡಿದ್ದುಣ್ಣೋ ಮಾರಾಯ' ಎಂಬ ಗಾದೆ ಮಾತಾಗಲೀ ಅದನ್ನೇ ಹೇಳುತ್ತೆ. ಯಾರೇ ಆಗಲೀ, ಅವರು ಹಿಂದೆ ಮಾಡಿದ್ದರ ಪರಿಣಾಮವನ್ನು ಈಗ ಅನುಭವಿಸುತ್ತಾರೆ. ಹಿಂದಿನ ಜನ್ಮದ್ದು ಈಗ, ಅಥವಾ ನಿನ್ನೆ ಮಾಡಿದ್ದು ಇಂದು ಅನ್ನೋ ಸಿದ್ಧಾಂತ ಸುಮ್ಮನೇ ಹುಟ್ಟಿಕೊಂಡಿದ್ದು ಅಲ್ಲ. ಚೀನಾದ ಬಾಂಬೂ ಕಥೆ ಕೂಡ ಅದನ್ನೇ ಹೇಳುತ್ತೆ. ಬೇರು ಗಟ್ಟಿಯಾಗಿದ್ದರೆ ಮಾತ್ರ ಮರ ಎತ್ತರೆತ್ತರಕ್ಕೆ ಬೆಳೆಯೋಕೆ ಸಾಧ್ಯ, ಹಾಗೇ ಗಟ್ಟಿಯಾಗಿ ಗಾಳಿ-ಮಳೆ ತಡೆದುಕೊಂಡು ಭದ್ರವಾಗಿ ನಿಲ್ಲಲು ಸಾಧ್ಯ.
ಯಶ್ ಈ ಕಥೆಯ ಮೂಲಕ ಅದೇನನ್ನು ಹೇಳಲು ಬಯಸಿದ್ದಾರೆ ಎಂಬುದು ಯೋಗ್ಯರಿಗೆ ಎಲ್ಲರಿಗೂ ಅರ್ಥವಾಗುತ್ತದೆ. ಮರವನ್ನು ಚೆನ್ನಾಗಿ ಬೆಳೆಸಲು ಬಯಸುವವರು ಬೇರನ್ನು ಗಟ್ಟಿಯಾಗಿ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಮರ ಬೆಳೆಯಲಾಗದು. ಅದೇ ರೀತಿ ಜೀವನದಲ್ಲೂ ಅಷ್ಟೇ, ಲೈಫ್ ವ್ಯಾಲ್ಯೂ ಬಗ್ಗೆ ಚೆನ್ನಾಗಿ ಅರಿತಿರಬೇಕು. ಆಗ ಮಾತ್ರ ಏನಾದ್ರೂ ವಿಭಿನ್ನ ಹಾಗೂ ವಿಶೇಷ ಸಾಧನೆ ಮಾಡೋಕೆ ಸಾಧ್ಯ. ಇದು ಬಿದಿರಿಗೆ ಮಾತ್ರವಲ್ಲ, ಮನುಷ್ಯರಿಗೂ ಚೆನ್ನಾಗಿ ಅನ್ವಯಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.