
ಬೆಂಗಳೂರು[ಜು. 30] ಪ್ರಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಜನ ಗಣ ಮನ’ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ತೆಲುಗು ಸ್ಟಾರ್ ಮಹೇಶ್ ಬಾಬು ಜನ ಗಣ ಮನದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಯಶ್ ಅವರೊಂದಿಗೆ ಬೆಂಗಳೂರಿನಲ್ಲಿಯೇ ಎರಡು ಸಾರಿ ಮಾತುಕತೆ ನಡೆಸಿರುವ ಜಗನ್ನಾಥ್ ಎಲ್ಲವನ್ನು ಫೈನಲ್ ಮಾಡಿಕೊಂಡಿದ್ದಾರೆ. ಕೊನೆ ಹಂತದ ಮಾತುಕತೆಗೆ ಇನ್ನೊಮ್ಮೆ ಬರುವ ಸಾಧ್ಯತೆ ಇದೆ.
ಕೆಜಿಎಫ್-2 ಟೀಂನಿಂದ ಬಿಗ್ ನ್ಯೂಸ್; ಕುತೂಹಲ ಮೂಡಿಸಿದೆ ‘ಅಧೀರ’
ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ನಂತರ ಹಿಂದಿ ಮತ್ತು ತಮಿಳಿಗೆ ಡಬ್ ಆಗಲಿದೆ. ಸದ್ಯ ಯಶ್ ತಮ್ಮ ಕೆಜಿಎಫ್ ಚಾಪ್ಟರ್-2 ನಲ್ಲಿ ಬಿಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.