ಪುನೀತ್ ಇದ್ದಾಗ್ಲೇ ನಾನು ಅವ್ರ ಬಗ್ಗೆ ತುಂಬಾ ಮಾತಾಡಿದೀನಿ; ಯಶ್ ಹೇಳಿಕೆ ಈಗ ಮತ್ತೆ ವೈರಲ್..!

Published : Jul 17, 2025, 07:29 PM IST
Yash Puneeth Rajkumar

ಸಾರಾಂಶ

ಯಶ್ ಅವರು ಸದ್ಯ ಪ್ಯಾನ್ ಇಂಡಿಯಾ ಸಿನಿಮಾ 'ರಾಮಾಯಣ' ಹಾಗೂ ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ರಾಮಾಯಣದ ಟ್ರೇಲರ್ ಬಿಡುಗಡೆ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಹಾಗೂ ಕಾಮೆಂಟ್ಸ್ ಪಡೆದುಕೊಂಡಿದೆ. ಟಾಕ್ಸಿಕ್ ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿದ್ದು..

ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರು ಸದ್ಯ ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಕೆಜಿಎಫ್ ಸಿನಿಮಾಗಿಂತ ಮೊದಲು ನಟ ಯಶ್ ಅವರು ಸ್ಯಾಂಡಲ್‌ವುಡ್‌ಗೆ ಸೀಮಿತವಾಗಿದ್ದರು. ಆದರೆ ಈಗ ಅವರು ಜಗತ್ತೇ ಗುರುತಿಸಿರುವ ಪ್ಯಾನ್ ಇಂಡಿಯಾ ಸ್ಟಾರ್. ಹೀಗಾಗಿ ಸಹಜವಾಗಿಯೇ ನಟ ಯಶ್ ಅವರು ಆಡಿರುವ ಮಾತು, ನೋಡಿರುವ ನೋಟ ಎಲ್ಲವೂ ಈಗ ಸುದ್ದಿಯಾಗುತ್ತದೆ. ಈಗಿನದು ಅಂತಲ್ಲ, ಹಳೆಯ ಸ್ಟೋರಿಗಳು, ಹಳೆಯ ಟಾಕ್‌ಗಳು ಎಲ್ಲವೂ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿವೆ.

ಅದರಲ್ಲೂ ಮುಖ್ಯವಾಗಿ, ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಬಗ್ಗೆ ಯಶ್ ಅವರು ಮಾತನ್ನಾಡಿರುವ ಹಳೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಮತ್ತೆ ಮತ್ತೆ ವೈರಲ್ ಆಗತೊಡಗಿವೆ. ಅದರಲ್ಲಿ ನಟ ಯಶ್ ಅವರು ಅಪ್ಪು ಬಗ್ಗೆ ಹೀಗೆ ಹೇಳಿದ್ದಾರೆ.. 'ಇದೇ ಮಾರುಕಟ್ಟೆಯಲ್ಲಿ ನಮ್ಮ ಸಿನಿಮಾ, ಅವ್ರ ಸಿನಿಮಾ ಬರ್ತಿದ್ದಾಗ ಫೋನ್ ಮಾಡಿ, ಏನ್ ಕಲೆಕ್ಷನ್ ಯಶ್, ಏನಿದು ರೆಕಾರ್ಡು.. ನಿಜವಾಗ್ಲೂ ಖುಷಿ ಆಗ್ತಿದೆ ಅಂತ ಹೇಳಿ.. ಪ್ರತಿ ಹಂತದಲ್ಲೂ ಕಾಲ್ ಮಾಡೋರು.. ಸೀನಿಯರ್ ಆ ರೀತಿ ನಡ್ಕೊಂಡಾಗ ನಮಗೆಲ್ಲಾ ಭಾರೀ ಖುಷಿಯಾಗುತ್ತೆ.. ಆ ವ್ಯಕ್ತಿ ಬಗ್ಗೆ.. ನಾನು ಆವತ್ತು ಸ್ಟೇಜ್‌ನಲ್ಲೇ ಹೇಳಿದೀನಿ.. ನನಗೊಂದು ಹೆಮ್ಮೆ ಏನ್ ಗೊತ್ತಾ? ಆ ಮನುಷ್ಯ ಇದ್ದಾಗ್ಲೇ ನಾನು ಅವ್ರ ಬಗ್ಗೆ ತುಂಬಾ ಮಾತಾಡಿದೀನಿ.. ' ಎಂದಿದ್ದಾರೆ.

ಹೌದು, ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮೂವತ್ತು ವರ್ಷ ದಾಟುತ್ತಿದ್ದಂತೆ, ಅವರ ವ್ಯಕ್ತಿತ್ವದಲ್ಲಿ ಬಹಳಷ್ಟು ಬದಲಾವಣೆಗಳು ಆಗಿದ್ದವು ಎಂದು ಹಲವರು ಹೇಳುತ್ತಾರೆ. ಮೂವತ್ತರವರೆಗೆ ಹುಡುಗಾಟದ ಹುಡುಗರಂತೆ ಇದ್ದ ಅಪ್ಪು, ಬಳಿಕ ಅಪ್ಪಾಜಿ ಹಾಗೂ ಮನೆಯ ಮರ್ಯಾದೆಗೆ ತುಂಬಾ ಗೌರವ ಕೊಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರಂತೆ. ಅಪ್ಪ-ಅಮ್ಮ ಹಾಗೂ ಮನೆಯ ಪರಂಪರೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ಗೌರವಯುತವಾಗಿ ಬದುಕು ನಡೆಸುವುದನ್ನು ಕಲಿತುಕೊಂಡಿದ್ದರು ಎನ್ನುತ್ತಾರೆ ಅವರ ಒಡನಾಡಿಗಳು.

ಅದರಂತೆ, ಅಣ್ಣಾವ್ರ ಮಗ ಹಾಗೂ ಕನ್ನಡದ ನಟ ಪುನೀತ್ ರಾಜ್‌ಕುಮಾರ್ ಅವರು ಯಶ್ ಸೇರಿದಂತೆ ಯುವ ನಟರನ್ನು ತುಂಬಾ ಪ್ರೀತಿಸುತ್ತಿದ್ದರು. ಅವರ ಸಿನಿಮಾ ಬಿಡುಗಡೆ ಆದಾಗ ಅವರಿಗೆ ವಿಶ್ ಮಾಡಿ ಹಾರೈಸುತ್ತಿದ್ದರು. ಸಿನಿಮಾ ಚೆನ್ನಾಗಿ ಓಡಿ ಕಲೆಕ್ಷನ್ ಮಾಡಿದರೆ, ಅದರಿಂದ ಖುಷಿಯಾಗಿ ಮತ್ತೆ ಕರೆ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದರು. ಅದನ್ನು ಹಲವರು ಹೇಳಿದ್ದಾರೆ. ಅದನ್ನೇ ನಟ ಯಶ್ ಅವರು ಹೇಳಿರುವ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗ್ತಿದೆ. ಹೌದು, ನಟ ಯಶ್ ಅವರು ಅಪ್ಪು ಜೊತೆ ವೇದಿಕೆ ಹಂಚಿಕೊಂಡಿದ್ದು, ಅಲ್ಲಿ ಮಾತನ್ನಾಡಿದ್ದು ಎಲ್ಲವನ್ನೂ ಇಡೀ ಕರ್ನಾಟಕ ನೋಡಿದೆ. ಆದರೆ, ಇಂದು ಅಪ್ಪು ನಮ್ಮೊಂದಿಗೆ ಇಲ್ಲ.

ಯಶ್ ಅವರು ಸದ್ಯ ಪ್ಯಾನ್ ಇಂಡಿಯಾ ಸಿನಿಮಾ 'ರಾಮಾಯಣ' ಹಾಗೂ ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ರಾಮಾಯಣದ ಟ್ರೇಲರ್ ಬಿಡುಗಡೆ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಹಾಗೂ ಕಾಮೆಂಟ್ಸ್ ಪಡೆದುಕೊಂಡಿದೆ. ಟಾಕ್ಸಿಕ್ ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿದ್ದು, ಅದಿನ್ನೂ ಬಿಡುಗಡೆ ಆಗಲು ಬಹಳಷ್ಟು ಸಮಯ ಬೇಕು. ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಯಶ್ ಅವರ ಕರಿಯರ್ ಗ್ರಾಫ್ ಹಾಗೂ ಮಾರ್ಕೆಟ್ ವ್ಯಾಲ್ಯೂ ಬಹಳಷ್ಟು ಹೆಚ್ಚಾಗಲಿದೆ ಎಂಬುದು ಹಲವರ ಅಭಿಮತ. ಜೊತೆಗೆ, ಅವರು ನಟಿಸುವ ಸಿನಿಮಾಗಳೂ ಕಡಿಮೆ ಆಗಲಿವೆಯೇ ಎಂಬ ಚರ್ಚೆ ಕೂಡ ಜೋರಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌