
ಹೈದರಾಬಾದ್ (ಜು.17) ನಟ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಜನಪ್ರಿಯ ನಟರಾಗಿ ಹೊರಹೊಮ್ಮಿದ್ದಾರೆ. ಇದೀಗ ವಿಜಯ್ ದೇವರಕೊಂಡ ಅಭಿನಯದ ಕಿಂಗ್ಡಮ್ ಸಿನಿಮಾ ರಿಲೀಸ್‌ಗೂ ಮುನ್ನ ನಟನಿಗೆ ಸಂಕಷ್ಟ ಎದುರಾಗಿದೆ. ವಿಜಯ್ ದೇವರಕೊಂಡ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿರುವುದಾಗಿ ವರದಿಯಾಗಿದೆ. ವಿಜಯ್ ದೇವರಕೊಂಡ ಡೆಂಗ್ಯೂ ಆರೋಗ್ಯ ಸಮಸ್ಯೆ ಬಾಧಿಸಿದೆ ಎಂದು ವರದಿಯಾಗಿದೆ. ಹೀಗಾಗಿ ವಿಜಯ್ ದೇವರಕೊಂಡ ಆಸ್ಪತ್ರೆ ದಾಖಲಾಗಿರುವುದಾಗಿ ವರದಿಯಾಗಿದೆ.
ಅಸ್ವಸ್ಥತೆಯಿಂದ ಬಳಲಿದ ವಿಜಯ್ ದೇವರಕೊಂಡ
ಆಸ್ಪತ್ರೆ ದಾಖಲಾಗಿರುವ ಕುರಿತು ನಟ ವಿಜಯ್ ದೇವರಕೊಂಡ ಅಥವಾ ನಟನ ತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ವಿಜಯ್ ದೇವರಕೊಂಡ ಕಳೆದ ಕಲ ದಿನಗಳಿಂದ ಜ್ವರ ಹಾಗೂ ಆಸ್ವಸ್ಥೆಯಿಂದ ಬಳಲಿದ್ದರು. ಹೀಗಾಗಿ ಪರೀಕ್ಷಿಸಿದಾಗ ಡೆಂಗ್ಯೂ ಪತ್ತೆಯಾಗಿದೆ. ಡೆಂಗ್ಯೂ ಆರೋಗ್ಯ ಸಮಸ್ಯೆ ಅಧಿಕವಾಗುವ ಮುನ್ನವೇ ವಿಜಯ್ ದೇವರಕೊಂಡ ಆಸ್ಪತ್ರೆ ದಾಖಲಾಗಿರುವುದಾಗಿ ವರದಿಯಾಗಿದೆ.
ದೇವರಕೊಂಡ ಸದ್ಯದ ಆರೋಗ್ಯ ಸ್ಥಿತಿ ಹೇಗಿದೆ?
ಜುಲೈ 31ರಂದು ಕಿಂಗ್ಡಮ್ ಸಿನಿಮಾ ಬಿಡುಗಡೆಯಾಗುತ್ತಿದೆ. ಸದ್ಯ ಚಿತ್ರದ ಪ್ರಮೋಶನ್ ನಡೆಯುತ್ತಿದೆ. ಇದರ ನಡುವೆ ವಿಜಯ್ ದೇವರಕೊಂಡ ಆಸ್ಪತ್ರೆ ದಾಖಲಾಗಿರುವುದು ಚಿತ್ರ ತಂಡಕ್ಕೂ ಹಿನ್ನಡೆಯಾಗಿದೆ. ಸದ್ಯ ವಿಜಯ್ ದೇವರಕೊಂಡ ಡೆಂಗ್ಯೂ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರಕೊಂಡ ಪ್ಲೇಟ್‌ಲೇಟ್ ಕೂಡ ಸುಧಾರಿಸಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಜುಲೈ 20 ರಂದು ವಿಜಯ್ ದೇವರಕೊಂಡ ಆಸ್ಪತ್ಪೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಗೌತಮ್ ತಿನ್ನಾನುರಿ ನಿರ್ದೇಶನದ ಕಿಂಗ್ಡಮ್ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ. ದೇವರಕೊಂಡ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮಾರ್ಚ್ 30 ರಂದು ಕಿಂಗ್ಡಮ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಪ್ರೊಡಕ್ಷನ್ ಸೇರಿದಂತೆ ಕೆಲ ತಾಂತ್ರಿಕ ಸಮಸ್ಯೆಗಳಿಂದ ಬಿಡುಗಡೆ ವಿಳಂಬವಾಗಿತ್ತು. ಇದೀಗ ಜುಲೈ 31ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆ ವಿಳಂಬವಾಗಿರುವ ಕಾರಣ ನೆಟ್‌ಫ್ಲಿಕ್ಸ್ ಮಾಡಿಕೊಂಡಿದ್ದ ಒಪ್ಪಂದದಲ್ಲಿ ವ್ಯತ್ಯಾಸವಾಗಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನೆಟ್‌ಫ್ಲಿಕ್ಸ್ ಸೂಚಿಸಿತ್ತು. ಇದೀಗ ಜುಲೈ 31ಕ್ಕ ಸಿನಿಮಾ ಬಿಡುಗಡೆಯಾಗಿದೆ. ಹಲವು ಅಡೆ ತಡೆ ನಡುವೆ ಇದೀಗ ವಿಜಯ್ ದೇವರಕೊಂಡ ಆಸ್ಪತ್ರೆ ದಾಖಲಾಗಿ ಮತ್ತೆ ಸಿನಿಮಾಗೆ ಹಿನ್ನಡೆಯಾಗಿದೆ. ಬಿಡುಗಡೆ ಸನಿಹದಲ್ಲೇ ಸಿನಿಮಾಗೆ ಹಲವು ಅಡೆ ತಡೆಗಳು ಎದುರಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.