
ಯಶ್-ಸಲ್ಮಾನ್ ಫೈಟ್?
ರಾಕಿಂಗ್ ಸ್ಟಾರ್ ಯಶ್ (Rocking Star Yash ) ನಟನೆಯ ಬಹುನಿರೀಕ್ಷೆಯ ಟಾಕ್ಸಿಕ್ (Toxic) ಸಿನಿಮಾ ಮುಂದಿನ ಮಾರ್ಚ್ 19ಕ್ಕೆ ವರ್ಲ್ಡ್ವೈಡ್ ತೆರೆಗೆ ಬರಲಿದೆ. ಆದ್ರೆ ಇದೇ ಡೇಟ್ಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ಪ್ರೇಕ್ಷಕರ ಎದುರು ಬರಲಿಕ್ಕೆ ಸಜ್ಜಾಗ್ತಾ ಇದ್ದಾರೆ. ರಾಕಿಭಾಯ್ ಎದುರು ಬ್ಯಾಡ್ ಬಾಯ್ ಪೈಟ್ ಕೊಡಬಹುದಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಯೆಸ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿ ಬಗ್ಗೆ ಅದೆಷ್ಟು ದೊಡ್ಡ ನಿರೀಕ್ಷೆ ಇದೆ ಅನ್ನೋದು ಗೊತ್ತೇ ಇದೆ. 2022ರಲ್ಲಿ ಬಂದ ಕೆಜಿಎಫ್-2 ಬಳಿಕ ಭರ್ತಿ 4 ವರ್ಷಗಳ ಗ್ಯಾಪ್ ನಂತರ ಯಶ್ ನಟನೆಯ ಸಿನಿಮಾ ಬರ್ತಾ ಇದೆ.
ವಿಶ್ವದಾದ್ಯಂತ ಯಶಸ್ಸು ಕಂಡ ಕೆಜಿಎಫ್ ಬಳಿಕ ಅದನ್ನೂ ಮೀರಿಸುವಂಥಾ ಸಿನಿಮಾ ಮಾಡ್ತಿನಿ ಅಂತ ಯಶ್ , ಇಷ್ಟು ಸಮಯ ತೆಗೆದುಕೊಂಡು ಟಾಕ್ಸಿಕ್ ರೆಡಿ ಮಾಡ್ತಿದ್ದಾರೆ. ಈ ಸಿನಿಮಾದ ನಿರ್ಮಾಣ, ನಿರ್ದೇಶನದಲ್ಲೂ ಯಶ್ ಪಾಲುದಾರನಾಗಿದ್ದಾರೆ.
ಇಂಥಾ ಮೆಗಾ ಮೂವಿ ಎದುರು ಸಲ್ಲುಮಿಯಾನ ಸಿನಿಮಾ ಬರೋದು ಬಹುತೇಕ ಖಚಿತವಾಗಿದೆ. ಸಲ್ಮಾನ್ ನಟನೆಯ ಬ್ಯಾಟಲ್ ಆಫ್ ಗಲ್ವಾನ್ ಮೂವಿ ಕೊನೆಹಂತದಲ್ಲಿದ್ದು, ಮಾರ್ಚ್ನಲ್ಲೇ ತೆರೆಗೆ ಬರೋ ತಯಾರಿಯಲ್ಲಿದೆ. ಬ್ಯಾಟಲ್ ಆಫ್ ಗಲ್ವಾನ್ ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಅಸಲಿಗೆ ಸಲ್ಮಾನ್ ಖಾನ್ ಈದ್ ಹಬ್ಬದ ಸಮಯದಲ್ಲಿ ತಮ್ಮ ಸಿನಿಮಾವನ್ನ ರಿಲೀಸ್ ಮಾಡೋದು ಕಾಮನ್. 2026ರಲ್ಲಿ ಮಾರ್ಚ್ 19ರಂದೇ ಈದ್ ಇದ್ದು, ಅದೇ ದಿನ ಸಲ್ಲು ಸಿನಿಮಾ ಬರೋದು ಬಹುತೇಕ ಫಿಕ್ಸ್.
ಹೌದು ಈ ಹಿಂದೆ 2018ರ ಡಿಸೆಂಬರ್ನಲ್ಲಿ ಕೆಜಿಎಫ್ ಚಾಪ್ಟರ್1 ಬಂದಾಗ, ಅದರ ಎದುರು ಶಾರೂಖ್ ಖಾನ್ ನಟನೆಯ ಝೀರೋ ಮೂವಿ ತೆರೆಗೆ ಬಂದಿತ್ತು. ಆಗ ಕಿಂಗ್ ಖಾನ್ ಎದುರು ಕೆಜಿಎಫ್ ಯಾವ ಲೆಕ್ಕ ಅಂತ ಎಲ್ಲರೂ ಭಾವಿಸಿದ್ರು. ಆದ್ರೆ ಕೆಜಿಎಫ್ ಎದುರು ಜೀರೋ ಅಕ್ಷರಶಃ ಜೀರೋ ಆಗಿತ್ತು.
ಇದೀಗ ರಾಕಿ ಸಿನಿಮಾದೆದರು ಬಾಲಿವುಡ್ನ ಮತ್ತೊಬ್ಬ ಖಾನ್ ಫೈಟ್ಗೆ ನಿಂತಿದ್ದಾರೆ. ಅಸಲಿಗೆ ಸಲ್ಲುಮಿಯಾ ನಟಿಸಿದ ಹಿಂದಿನ ಸಿನಿಮಾ ಸಿಕಂದರ್ ಹೀನಾಯ ಸೋಲು ಕಂಡಿತ್ತು. ಸೋ ಈ ಬಾರಿ ಸಲ್ಮಾನ್ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಗಲ್ವಾನ್ನಲ್ಲಿ ಭಾರತೀಯ ಚೀನಿ ಸೈನಿಕರ ನಡುವೆ ನಡೆದ ಸಂಘರ್ಷದ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿರೋ ಸಲ್ಮಾನ್ ದೊಡ್ಡ ಹಿಟ್ ನ ನಿರೀಕ್ಷೆಯಲ್ಲಿದ್ದಾರೆ.
ಇಂಥಾ ಟೈಂನಲ್ಲಿ ಸಲ್ಮಾನ್ , ಟಾಕ್ಸಿಕ್ ಎದುರು ತಮ್ಮ ಸಿನಿಮಾ ರಿಲೀಸ್ ಮಾಡ್ತಾರಾ..? ಬ್ಯಾಡ್ ಬಾಯ್ , ರಾಕಿ ಭಾಯ್ಗೆ ಸವಾಲು ಹಾಕ್ತಾರಾ,. ಅಥವಾ ರಿಲೀಸ್ ಡೇಟ್ ಮುಂದೂಡಿ ಕದನ ವಿರಾಮ ಘೋಷಿಸ್ತಾರಾ.? ಕಾದುನೋಡಬೇಕಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.