- ಸುಕನ್ಯಾ ಎನ್.ಆರ್, ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು ಪುತ್ತೂರು
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತು ಹಿರಿಯರ ಕಾಲದಿಂದಲೂ ವಾಡಿಕೆಯಲ್ಲಿದೆ. ಮಾತು ಮೃದುವಾದಷ್ಟು ಕೇಳುಗರ ಮನಸ್ಸನ್ನ ಧನಾತ್ಮಕ ಚಿಂತನೆ ಕಡೆಗೆ ಕೊಂಡೊಯ್ಯುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಮಾತಿನ ದಾಟಿ ವಿಭಿನ್ನವಾಗಿರುವುದು, ಒಂದೊಳ್ಳೆ ಆಶಾದಾಯಕ ನುಡಿ ಎಂತಹ ವ್ಯಕ್ತಿಯನ್ನಾದರು ಬದಲಾಯಿಸುವ ಶಕ್ತಿಯನ್ನು ಹೊಂದಿದೆ.
ಇಂತಹ ವಿಶೇಷ ಕಲೆಯನ್ನ ಕರಗತ ಮಾಡಿಕೊಂಡು ಮಾತಿನ ಮೂಲಕ ಕೇಳುಗರ ಮನಗೆದ್ದು 'ಸವಿ ಸವಿ ನೆನಪು' ಕಾರ್ಯಕ್ರಮದ ಮೂಲಕ ಜನರ ಮನದ ಕದ ತಟ್ಟುತ್ತಾ ಪ್ರತಿಯೊಬ್ಬ ಕೇಳುಗರ ಮನೆ ಮಾತಾಗಿರುವ ವ್ಯಕ್ತಿಯೇ ಆರ್ ಜೆ ಪ್ರಸನ್ನ.
undefined
ಹಾಡು ಹಾಡಲ್ಲೇ ಮಾತು ಮಾತಲ್ಲೇ ಮಂಗಳೂರಿನ ಮನಸ್ಸು ಮನಸ್ಸಲ್ಲೇ ಸವಿ ಸವಿ ನೆನಪು ನಾನು ನಿಮ್ಮ ನೆನಪಿನ ನಾವಿಕ ಎಂದು ಹೇಳುತ್ತ ಅದೆಷ್ಟೋ ರೇಡಿಯೋ ಪ್ರೀಯರ ಕಿವಿಯನ್ನ ಇಂಪಾಗಿಸುತ್ತಿರುವ ಪ್ರಸನ್ನ ಮೂಲತಃ ಉಡುಪಿ ಜೆಲ್ಲೆಯ ಕುಂದಾಪುರ ತಾಲೂಕಿನ ಹೊಸಗಂಡಿಯವರಗಿದ್ದು, ಕೃಷಿ ಕುಟುಂಬದಲ್ಲಿ ಬೆಳೆದು ಬಂದಿರುವ ಇವರು ಉಡುಪಿಯಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ, ರೇಡಿಯೋ ಕ್ಷೇತ್ರಕ್ಕೆ ಪಾದರ್ಪಣೆ ಮಾಡುತ್ತಾ , 2009ರಿಂದ ಸತತವಾಗಿ ರೇಡಿಯೋ ಜಾಕಿಯಾಗಿ ಹನ್ನೆರಡು ವರ್ಷಗಳಿಂದ ಒಂದೇ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಏಕೈಕ ವ್ಯಕ್ತಿ ಪ್ರಸನ್ನ .
ಕರಾವಳಿ ಜನರ ಅಚ್ಚು ಮೆಚ್ಚಿನ RJ ಎರಲ್
ಪ್ರೌಢ ಶಿಕ್ಷಣವನ್ನು ಕಲಿಯುತ್ತಿರುವಾಗಲೇ ನಿರೂಪಣೆಯಲ್ಲಿ ಬಹಳಷ್ಟು ಆಸಕ್ತಿ ಬೆಳೆಸಿಕೊಂಡಿದ್ದ ಇವರು ಶಿಕ್ಷಣದ ಜೊತೆಯಲ್ಲಿ ಉಡುಪಿಯ ಬ್ರಹ್ಮಾವರದಲ್ಲಿ ಸೈಬರ್ ಕೆಫೆ ನಡೆಸುತ್ತಾ ಕಾರ್ಯಕ್ರಮವನ್ನು ಕೂಡ ನಿರ್ವಹಿಸುತ್ತಿದ್ದರು .
ಬಾಲ್ಯದ ವಯಸ್ಸಿನಲ್ಲೇ ಆಕಾಶದೆತ್ತರ ಬೆಳೆಯಬೇಕೆಂಬ ಕನಸನ್ನು ಕಂಡಂತಹ ಇವರಿಗೆ ತನ್ನ ಕಂಠವೇ ವರವಾಯಿತು.
ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ನಿರೂಪಣೆ ಮಾಡುವ ಸಂದರ್ಭದಲ್ಲಿ ಉದಯ ಟಿವಿ ನಿರ್ದೇಶಕರು ಪ್ರಸನ್ನರ ಮಾತಿನ ಶೈಲಿ, ಮೃದುವಾದ ಕಂಠಕ್ಕೆ ಮನಸೋತು ಮುಂದೆ ರೇಡಿಯೋ ಜಾಕಿಯಾಗುವಂತೆ ಹುರಿದುಂಬಿಸಿ ಕನಸು ಕಟ್ಟಿದ ಹಕ್ಕಿಗೆ ರೆಕ್ಕೆ ಕಟ್ಟಿ ಬಾನೆತ್ತರ ಹಾರಬಯಸಿದರು. ಅಂದು ತುಂಬಿದ ಧೈರ್ಯದ ಮಾತು ಇಂದು ಪ್ರಸನ್ನರವರನ್ನು ಪ್ರತಿಯೊಬ್ಬ ರೇಡಿಯೋ ಕೇಳುಗರ ಮನ ಮನೆಗಳಲ್ಲಿ ಅಚ್ಚುಮೆಚ್ಚಿನ ಆರ್.ಜೆಯಾಗಿ ಮಾಡಿದೆ.
ಕನ್ನಡ-ತುಳು ಪಟಪಟ ಮಾತಾಡ್ತಾ ಜನರಿಗೆ ಮರಳು ಮಾಡೋ ಆರ್‌ಜೆ ಶ್ರದ್ಥಾ ಇವರೇ!
ಕೊರೊನ ಸಂದರ್ಭದಲ್ಲಿ ರೇಡಿಯೋ ಕಾರ್ಯಕ್ರಮದ ಮುಖಾಂತರ ಜನರಿಗೆ ಜಾಗೃತಿ ಮೂಡಿಸುತ್ತಾ, ಅನೇಕ ಜನರ ಮನಸನ್ನು ಅರ್ಥ ಮಾಡಿಕೊಂಡು ಧೈರ್ಯ ತುಂಬಿ ಪ್ರತಿ ದಿನ ಕಾರ್ಯಕ್ರಮ ಮುಗಿಸುತ್ತಿದ್ದರು.ಮನುಷ್ಯ ಭಾವನೆಗಳಿಗೆ ಒಳಗಾದ ವ್ಯಕ್ತಿ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಭಾವನೆಯನ್ನ ಗೌರವಿಸುತ್ತಾ ಪ್ರೀತಿಸುತ್ತಾನೆ ಅವರ ಭಾವನೆಯನ್ನು ಅರ್ಥ ಮಾಡಿಕೊಂಡು ಬೆಲೆಕೊಟ್ಟು ಸ್ಪಂದಿಸುವ ಈ ಕಾರಣಕ್ಕೆ ಬಹುಶಃ ಅದೆಷ್ಟೋ ಜನರಿಗೆ ಹತ್ತಿರವಾಗಿದ್ದಾರೆ.
ಹಾಗೆಯೇ ತಮ್ಮನ್ನ ತಾವು ಅನೇಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದು , ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿ ತುಳು ಚಿತ್ರ ಅವಾರ್ಡ್ ಇವರ ನಿರ್ದೇಶನದಲ್ಲಿ ಜಾರಿಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಆರ್‌ಜೆ ನೇತ್ರಾ ಧ್ವನಿ ಕೇಳಿರುತ್ತೀರಿ, ಆದ್ರೆ ಅವ್ರು ಹೇಗಿದ್ದಾರೆ ನೋಡಿದ್ದೀರಾ?
ಸತತವಾಗಿ ಹದಿನೆಂಟು ವರ್ಷಗಳ ಕಾಲ ರೇಡಿಯೋ ಕ್ಷೇತ್ರದಲ್ಲಿ ಅನುಭವ ಹೊಂದಿದ್ದು, ಕರ್ನಾಟಕದಲ್ಲಿ ಬೀದರ್ ಜಿಲ್ಲೆ ಒಂದನ್ನ ಹೊರತುಪಡಿಸಿ ಉಳಿದ 29 ಜಿಲ್ಲೆಯಲ್ಲಿ ನಿರೂಪಣೆ ಮಾಡುತ್ತಾ ರಾಜ್ಯ, ಹೊರರಾಜ್ಯ, ದೇಶ-ವಿದೇಶಗಳಲ್ಲಿ ತನ್ನ ಮಾತಿನ ಮೋಡಿಯಿಂದ ಅಭಿಮಾನಿಗಳನ್ನೇ ಹುಟ್ಟುಹಾಕಿದ್ದಾರೆ. ಮಾತಿಗೆ, ಮಾತಿನ ಶೈಲಿಗೆ ಅದ್ಭುತ ಶಕ್ತಿ ಇದೆ ಎಂಬುದನ್ನು ಮತೊಮ್ಮೆ ನಿರೂಪಿಸಿಕೊಟ್ಟಿದಾರೆ. ಇದುವರೆಗೂ ಒಂದೂವರೆ ಸಾವಿರಕ್ಕೂ ಹೆಚ್ಚು ನಿರೂಪಣೆ, ಮುನ್ನೂರಕ್ಕೂ ಹೆಚ್ಚು ಟಿವಿ, ರೇಡಿಯೋ, ಕಿರುಚಿತ್ರಗಳಲ್ಲಿ ಧ್ವನಿಯನ್ನು ಕೊಟ್ಟಿದ್ದಾರೆ. ಉಡುಪಿ, ದಕ್ಷಿಣ ಕನ್ನಡ , ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಅನೇಕ ಜಿಲ್ಲೆಗಳ ಪೊಲೀಸ್ ಇಲಾಖೆಯ ಅಧಿಕೃತ ಕಾಲರ್ ಟೋನ್ ಗಳಲ್ಲಿ ಕೂಡ ಇವರ ಧ್ವನಿ ಇದೆ.
ಖ್ಯಾತ ಸಂಗೀತ ಗಾಯಕರಾದ ಎಸ್.ಜಾನಕಿ, ಎಸ್.ಪಿ ಬಾಲಸುಬ್ರಮಣ್ಯಂ , ಅರ್ಜುನ್ ಜನ್ಯ , ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣ ಮುಂತಾದ ಅನೇಕ ಗಣ್ಯರು ಇವರ ಮೃದುವಾದ ಕಂಠದ ಮಾತಿಗೆ ಮನಸೋತಿದ್ದಾರೆ. 93.5 ರೆಡ್ ಎಫ್ಎಂ ನಲ್ಲಿ ಸವಿ-ಸವಿ ನೆನಪು ಕಾರ್ಯಕ್ರಮದ ಮುಖಾಂತರ ಗುರುತಿಸಿಕೊಂಡು ಜನರ ಭಾವನೆಗಳಿಗೆ ಸ್ಪಂದಿಸುತ್ತಾ ಹನ್ನೆರಡು ವರ್ಷಗಳಿಂದ ಪ್ರಸಾರವಾಗುತ್ತಿದ್ದು,
'ನಮಸ್ಕಾರ ಮಂಗಳೂರು 'ಎಂಬ ಕಾರ್ಯಕ್ರಮ ಪ್ರತೀದಿನ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ರೇಡಿಯೋದಲ್ಲಿ ಪ್ರಸಾರ ಮಾಡಲಾಗುತ್ತಿದೆ .
ಅವನಲ್ಲ ಅವಳು, ಪ್ರಿಯಾಂಕಾ ಸವೆಸಿದ ಸಾಧನೆಯ ಹಾದಿ
ರೇಡಿಯೋ ಜಾಕಿಯಾಗಬೇಕೆಂಬ ಕನಸ್ಸು ನನಸಾಗುವಲ್ಲಿ ತಂದೆ-ತಾಯಿಯ ಆಶೀರ್ವಾದ, ಕುಟುಂಬದವರ ಪ್ರೇರಣೆ, ಪತ್ನಿಯ ಪ್ರೋತ್ಸಾಹ ಇಷ್ಟರ ಮಟ್ಟಿಗೆ ಬೆಳೆದು ಬರುವಂತೆ ಮಾಡಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಆರ್.ಜೆ ಪ್ರಸನ್ನ .