
ಇಂದು (June 06) ಕನ್ನಡದ 'ಕಿರಿಕ್ ಪಾರ್ಟಿ' ಖ್ಯಾತಿಯ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಹುಟ್ಟುಹಬ್ಬ. ಈ ಸಮಯದಲ್ಲಿ ಅವರ ಆತ್ಮೀಯ ಮಿತ್ರ ಹಾಗೂ ಸದಾ ಜೊತೆಗಿರುವ ರಿಷಬ್ ಶೆಟ್ಟಿ (Rishab Shetty) ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬಕ್ಕೆ ಹಾರೈಸಿ ಪೋಸ್ಟ್ ಮಾಡಿದ್ದಾರೆ. ಸಹಜವಾಗಿಯೇ ಈ ಪೋಸ್ಟ್ ಸಾಕಷ್ಟು ವೈರಲ್ ಆಗತೊಡಗಿದೆ. ಕಾರಣ, ಕನ್ನಡ ಹಾಗೂ ತುಳು ಚಿತ್ರಜಗತ್ತಿನಲ್ಲಿ ರಿಷಬ್-ರಕ್ಷಿತ್ ವಿಶೇಷವಾದ ಸ್ಥಾನ ಪಡೆದುಕೊಂಡಿದ್ದಾರೆ. ತಮ್ಮ ಸ್ನೇಹಿತನಿಗೆ ರಿಷಬ್ ಯಾವ ರೀತಿಯಲ್ಲಿ ವಿಶ್ ಮಾಡಬಹುದು ಎಂದು ಹಲವರು ತುಂಬಾ ಕುತೂಹಲದಿಂದ ಖಂಡಿತ ಕಾಯುತ್ತಿದ್ದರು. ಅವರಿಗೀಗ ಉತ್ತ ಸಿಕ್ಕಿದೆ, ಪೋಸ್ಟ್ ವೈರಲ್ ಆಗುತ್ತಿದೆ.
ಹಾಗಿದ್ರೆ, ಹುಟ್ಟಹಬ್ಬದ ಹುಡುಗ, ನಟ-ನಿರ್ದೇಶಕ ರಕ್ಷಿತ್ ಶೆಟ್ಟಿಗೆ ರಿಷಬ್ ಅದೇನು ವಿಶ್ ಮಾಡಿದ್ದಾರೆ? 'ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿಯ ಆಧಾರ ಸ್ತಂಭ. ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ ಸದಾ ನನ್ನ ಜೊತೆ ಗಟ್ಟಿಯಾಗಿ ನಿಂತವನು ನೀನು. ಇಷ್ಟೆಲ್ಲಾ ಏರಿಳಿತಗಳ ಈ ಪಯಣದಲ್ಲಿ ನನ್ನ ಕೈ ಬಿಡದೇ ಜೊತೆಗಿದ್ದ ನಿನಗೆ ಧನ್ಯವಾದಗಳು. ನಿನ್ನ ಎಲ್ಲಾ ಕಸನುಗಳೂ ನನಸಾಗಲಿ. ಉತ್ತಮ ಆರೋಗ್ಯ ಮತ್ತು ಅಗಾಧ ಯಶಸ್ಸು ಸದಾ ನಿನ್ನದಾಗಲಿ' ಎಂದು ತಮ್ಮ ಆತ್ಮೀಯ ಸ್ನೇಹಿತ ರಕ್ಷಿತ್ ಶೆಟ್ಟಿಯವರಿಗೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಹಾರೈಸಿದ್ದಾರೆ.
ಹೌದು, ಈ ಇಬ್ಬರೂ ನಟರ, ನಿರ್ದೇಶಕರು ಸದಾ ಒಬ್ಬರಿಗೊಬ್ಬರು ಆಧಾರವಾಗಿ ನಿಂತವರು. ತಮ್ಮ ಸಿನಿಮಾ ಜರ್ನಿಯ ಆರಂಭಿಕ ಹಂತದಿಂದಲೂ ಕೂಡ ರಕ್ಷಿತ್ ಹಾಗೂ ರಿಷಭ್ ತಮ್ಮ ಸ್ನೇಹವನ್ನು ಅನವರತ ಕಾಪಾಡಿಕೊಂಡು ಬಂದವರು. ಅವರ ಜೊತೆಯಲ್ಲಿ ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಮುಂತಾದ ಹೆಸರುಗಳು ಕೂಡ ಕೇಳಿ ಬರುತ್ತವೆ. ಆದರೂ ಕೂಡ, ರಕ್ಷಿತ್-ರಿಷಬ್ ಸ್ನೇಹದ ಲೆವಲ್ಲೇ ಬೇರೆ ಎಂಬ ಅಭಿಪ್ರಾಯವೂ ಇದೆ. ಅದೇನು ವಿಶೇಷವೋ ಗೊತ್ತಿಲ್ಲ, ಅವರಿಬ್ಬರ ಸ್ನೇಹ ವಿಷ್ಣುವಧ್ನ್-ಅಂಬರೀಷ್ ಸ್ನೇಹವನ್ನು ನೆನಪಿಸುವಂತಿದೆ ಎನ್ನುವುದು ಬಹಳಷ್ಟು ಜನರ ಅನಿಸಿಕೆ.
ಸದ್ಯ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಕಾಂತಾರ ಮೊದಲ ಭಾಗ (ಕಾಂತಾರ ಪ್ರೀಕ್ವಿಲ್) ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಚಿತ್ರದ ಕೆಲವು ಕಲಾವಿದರ ಅಕಾಲಿಕ ದುರಂತ ಮರಣ ಕೂಡ ಸಂಭವಿಸಿ ಕಾಂತಾರ ಪ್ರೀಕ್ವೆಲ್ ಚಿತ್ರದ ಸುದ್ದಿಗಳು ಸ್ವಲ್ಪ ಹೆಚ್ಚೇ ಸುದ್ದಿ ಮಾಡಿವೆ. ಅದೇನೇ ಆದರೂ ಆಗಬೇಕಿರುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬಂತೆ, ಕಾಂತಾರ ಬಾಗ 2 ಚಿತ್ರೀಕರಣ ಮುಂದುವರೆದಿದೆ. ಈ ವರ್ಷದ ಕೊನೆಯಲ್ಲಿ ಕಾಂತಾರ ಪ್ರೀಕ್ವೆಲ್ ತೆರೆಗೆ ಬರಲಿದೆ ಎನ್ನಲಾಗಿದೆ. ಕಾಂತಾರ ಚಿತ್ರವು ಸೂಪರ್ ಹಿಟ್ ಆಗಿರುವ ಹಿನ್ನೆಲೆಯಲ್ಲಿ ಕಾಂತಾರ ಪ್ರೀಕ್ವೆಲ್ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಇನ್ನು, ರಕ್ಷಿತ್ ಶೆಟ್ಟಿಯವರು ತಮ್ಮದೇ ಆಗಿರುವ ಮುಮದಿನ ಸಿನಿಮಾ ರಿಚರ್ಡ್ ಆ್ಯಂಟಿನಿ (Richard Anthony) ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಅವರ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿಬರಲಿರುವ ರಿಚರ್ಡ್ ಆ್ಯಂಟಿನಿ ಸಿನಿಮಾ ಬಗ್ಗೆ ಈಗಾಗಲೇ ಬಹಳಷ್ಟು ನಿರೀಕ್ಷೆ ಮನೆಮಾಡಿದೆ. ಈ ಸಿನಿಮಾ ಕೂಡ ಇದೇ ವರ್ಷ ಬಿಡುಗಡೆ ಭಾಗ್ಯ ಕಾಣುವ ನಿರೀಕ್ಷೆ ಇದೆ. ಒಟ್ಟಿನಲ್ಲಿ, ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನ ಸ್ನೇಹಿತ ರಿಷಬ್ 'ನಾವಿಬ್ಬರೂ ಅಂತಿಂಥ ಸ್ನೇಹಿತರಲ್ಲ, ಗ್ರೇಟ್ ಫ್ರೆಂಡ್ಸ್' ಎನ್ನುವ ಹಾಗೆ ಪೋಸ್ಟ್ ಮಾಡಿ ಸಾಕ್ಷಿ ಕೊಟ್ಟಿದ್ದಾರೆ. ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಸ್ನೇಹಿತರು ಹಾಗೂ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.