
ಜಗತ್ತಿನಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ ಎನ್ನುವ ಮಾತಿದೆ. ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಕೆಲವೊಮ್ಮೆ ಯಾವುದೋ ವ್ಯಕ್ತಿಯನ್ನು ನೋಡಿದಾಕ್ಷಣ, ನಮಗೆ ಎಲ್ಲೋ ನೋಡಿದ ಹಾಗೆ ಅನ್ನಿಸುತ್ತದೆ. ಆದರೆ ಆ ವ್ಯಕ್ತಿ ಇನ್ನೊಬ್ಬರಂತೆ ಇರುವ ಕಾರಣ ಹಾಗೆ ಅನ್ನಿಸುವುದು ಉಂಟು. ಇನ್ನು ಸಿನಿಮಾ ಸೆಲೆಬ್ರಿಟಿಗಳ ಮಟ್ಟಿಗೆ ಹೇಳುವುದಾದರೆ,, ಯಾವುದಾದರೂ ಸಾಮಾನ್ಯ ವ್ಯಕ್ತಿಗಳ ದೇಹದ ಯಾವುದಾದರೂ ಒಂದೆರಡು ಭಾಗಗಳು, ಅದರಲ್ಲಿಯೂ ಹೆಚ್ಚಾಗಿ ಕಣ್ಣುಗಳು ಒಂದೇ ರೀತಿ ಇದ್ದರೆ, ಅದೇ ನಟ ಅಥವಾ ನಟಿಯ ರೀತಿಯಲ್ಲಿಯೇ ಫುಲ್ ರೆಡಿಯಾಗಿ, ಅವರನ್ನು ಅನುಸರಿಸಿದರೆ ಒಂದೇ ರೀತಿ ಕಾಣುವುದು ಸಹಜ.
ಇದಾಗಲೇ ಕೆಲವು ಜ್ಯೂನಿಯರ್ ಆರ್ಟಿಸ್ಟ್ಗಳು ವೇದಿಕೆಯ ಮೇಲೆ ಕಾಣಬಹುದು. ಡಾ.ರಾಜ್ಕುಮಾರ್, ರಜಿನೀಕಾಂತ್, ವಿಷ್ಣುವರ್ಧನ್, ಅಂಬರೀಷ್ ಅವರಿಂದ ಹಿಡಿದು ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವು ರೀತಿಯ ನಟರನ್ನೇ ಹೋಲುವಂತೆ ಡ್ರೆಸ್ ಮಾಡಿಕೊಂಡು ಬರುವುದು ಇದೆ. ಆದರೆ ಇದು ಜನಸಾಮಾನ್ಯರು ಮತ್ತು ಸ್ಟಾರ್ ನಡುವಿನ ಕಥೆಯಾಯ್ತು. ಅದರೆ ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಒಬ್ಬರನ್ನೇ ಹೋಲುವ ಇನ್ನೊಬ್ಬ ನಟರು ಇರುವ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗ್ತಿದೆ.
ಇದರಲ್ಲಿ ಕೆಲವು ಭಾಷೆಗಳ ಸ್ಟಾರ್ ನಟರು, ಇನ್ನೊಂದು ಭಾಷೆಯ ಅಥವಾ ಅದೇ ಭಾಷೆಯ ನಟರಂತೆಯೇ ಕಾಣುವುದುನ್ನು ನೋಡಬಹುದಾಗಿದೆ. ಈಗ ವೈರಲ್ ಆಗಿರೋ ಫೋಟೋದಲ್ಲಿ ಇರುವ ಕೆಲವು ನಟರ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.