ಸ್ಟಾರ್ ಮಕ್ಕಳೂ ಸಿನಿಮಾ ಜಗತ್ತಿಗೆ ಎಂಟ್ರಿ ಆಗುತ್ತಿರುವವರ ಸಾಲಿಗೆ ಈಗ ನಟ ರವಿಭಟ್ ಪುತ್ರಿ ಕೃಷ್ಣಾ ಸೇರಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಮನೋಮೂರ್ತಿ ನಿರ್ಮಾಣದ ‘ಸವರ್ಣದೀರ್ಘ ಸಂಧಿ’ ಹೆಸರಿನ ಚಿತ್ರದೊಂದಿಗೆ ನಾಯಕಿ ಆಗಿ ಕಷ್ಣಾ ಸಿನಿ ಪಯಣ ಶುರುವಾಗುತ್ತಿದೆ. ಈಗಾಗಲೇ ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡ ಚೆಲುವೆ. ಅವರ ಜತೆ ಮಾತುಕತೆ.
ನಿಮ್ಮ ಪರಿಚಯ ಹೇಳುವುದಾದ್ರೆ...
ನಟ ರವಿಭಟ್ ನನ್ನ ತಂದೆ. ಅಮ್ಮ ಬ್ಯಾಂಕ್ ಉದ್ಯೋಗಿ. ಜನಪ್ರಿಯ ನಟಿ ವಿನಯ ಪ್ರಸಾದ್ ನನ್ನ ತಂದೆಯ ಅಕ್ಕ. ಬೆಂಗಳೂರಿನಲ್ಲೇ ಹುಟ್ಟಿಬೆಳೆದಿದ್ದು. ಕ್ರೈಸ್ಟ್ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಪದವಿ ಮುಗಿದಿದೆ. ಕಾಲೇಜಿನಲ್ಲಿದ್ದಾಗಲೇ ಮಾಡೆಲಿಂಗ್ ಮಾಡ್ತಿದ್ದೆ. ಅಲ್ಲಿಂದೀಗ ನಟಿಯಾಗಿ ಸಿನಿ ಜರ್ನಿ ಆರಂಭವಾಗುತ್ತಿದೆ.
undefined
ಸಿನಿಮಾ ನಟಿ ಆಗ್ಬೇಕು ಅಂತೆನಿಸಿದ್ದೇಕೆ?
ಅಪ್ಪ, ಹಾಗೂ ಅತ್ತೆ ವಿನಯ ಪ್ರಸಾದ್ ಇದಕ್ಕೆ ಕಾರಣ. ಪದವಿ ಮುಗಿದು ಮುಂದೇನು ಎನ್ನುವ ಹೊತ್ತಿಗೆ ಅಪ್ಪ ಮತ್ತು ಅತ್ತೆ ಕೊಟ್ಟಸಲಹೆಯೇ ನಟಿಯಾಗುವ ಕುರಿತು. ಅದೇ ಹೊತ್ತಿಗೆ ‘ಸವರ್ಣದೀರ್ಘ ಸಂಧಿ’ ಹೆಸರಿನ ಸಿನಿಮಾ ಶುರುವಾಗುತ್ತಿತ್ತು. ಆ ಕಡೆಯಿಂದ ಆಫರ್ ಬಂತು.
ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!
ನಾಯಕಿ ಆಗಿ ಆಯ್ಕೆಯಾಗುವ ಮುನ್ನ ಆ್ಯಕ್ಟಿಂಗ್ ತರಬೇತಿ ಇತ್ತಾ?
ಮಾಡೆಲಿಂಗ್‌ನಲ್ಲಿದ್ದೆ. ಡಾನ್ಸ್ ಜತೆಗೆ ಹಾಡುವ ಅಭ್ಯಾಸವೂ ಇತ್ತು. ಅದು ಮನೆಯ ವಾತಾವರಣದಿಂದಲೇ ಶುರುವಾಗಿದ್ದು. ಆದರೆ ವೃತ್ತಿಪರವಾಗಿ ಆ್ಯಕ್ಟಿಂಗ್ ಬಗ್ಗೆ ತರಬೇತಿಗೆ ಅಂತ ಹೋಗಿದ್ದು ಸಿನಿಮಾ ನಟಿ ಆಗಬೇಕೆಂದುಕೊಂಡಾಗಲೇ. ಫ್ಯಾಮಿಲಿ ಫ್ರೆಂಡ್ ಉಷಾ ಭಂಡಾರಿ ಅವರ ಆ್ಯಕ್ಟಿಂಗ್ ಅಕಾಡೆಮಿ ಸೇರಿದೆ. ಉಷಾ ಭಂಡಾರಿ ಅವರ ಕಡೆಯಿಂದ ‘ಸವರ್ಣದೀರ್ಘ ಸಂಧಿ’ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆದೆ.
ಚಿತ್ರದಲ್ಲಿನ ನಿಮ್ಮ ಪಾತ್ರ ಹೇಗಿದೆ, ಇದರ ಸಿದ್ಧತೆ ಹೇಗಿತ್ತು?
ಅಮೃತ ವರ್ಷಿಣಿ ಅಂತ ಪಾತ್ರದ ಹೆಸರು. ಆಕೆ ಸಿಂಗರ್. ತುಂಬಾ ಬುದ್ಧಿವಂತೆ. ಪಾತ್ರಕ್ಕೆ ಮನೆಯಲ್ಲೇ ಒಂದಷ್ಟುಸಿದ್ಧತೆ ನಡೆಯಿತು. ಯಾಕಂದ್ರೆ ಮನೆಯಲ್ಲಿ ಒಂದಷ್ಟುಜನ ಸಿಂಗರ್ ಇದ್ದಾರೆ. ನಂಗೂ ಒಂದಷ್ಟುಗೊತ್ತು. ಅದು ಸ್ವಲ್ಪ ಸಹಾಯವಾಯಿತು. ಅನಂತರ ನಟಿ ಪದ್ಮಜಾ ರಾವ್ ಮನೆಯಲ್ಲಿ ಒಂದಷ್ಟುದಿನಗಳ ಕಾಲ ರಿಹರ್ಸಲ್ ನಡೆಯಿತು. ಅದಾದ ನಂತರ ಶೂಟಿಂಗ್ ಸೆಟ್‌ಗೆ ಕಾಲಿಟ್ಟೆ. ಪಾತ್ರಕ್ಕೆ ನ್ಯಾಯ ಒದಗಿಸಿರುವ ಖುಷಿಯಿದೆ.
ಫಸ್ಟ್ ಟೈಮ್ ಕ್ಯಾಮರಾ ಎದುರಿಸಿದ ಅನುಭವ ಹೇಗಿತ್ತು?
ಸಿನಿಮಾ, ಚಿತ್ರೀಕರಣ ಅನ್ನೋದು ಹೊಸತಲ್ಲ. ಅಪ್ಪನ ಡೈಲಿ ಸಿನಿಮಾ ಶೂಟಿಂಗ್ ಸ್ಟೈಲ್ ನಂಗೆ ಗೊತ್ತಿತ್ತು. ಹಾಗಿಯೇ ಸಾಕಷ್ಟುಸಲ ಶೂಟಿಂಗ್ ಸೆಟ್‌ಗೂ ಹೋಗಿದ್ದೆ. ಜತೆಗೆ ಮಾಡೆಲಿಂಗ್‌ನಲ್ಲಿದ್ದೂ ಕ್ಯಾಮೆರಾ ಎದುರಿಸಿದ ಅನುಭವವೂ ಇತ್ತು. ಹಾಗಾಗಿ ಆರಂಭದ ದಿನ ಸೆಟ್‌ನಲ್ಲಿ ನಂಗೇನು ಭಯ ಆಗಲಿಲ್ಲ. ಎಲ್ಲವೂ ಸಹಜವೇ ಎನಿಸಿತು. ಜತೆಗೆ ಚಿತ್ರತಂಡದ ಸಹಕಾರ ಚೆನ್ನಾಗಿತ್ತು.
ಸಿನಿಮಾ ಟೀಮ್ ಬಗ್ಗೆ ಹೇಳುವುದಾದರೆ...
ನಂಗಿದು ಒಂಥರ ಅದೃಷ್ಟ. ಶುರುವಿನಲ್ಲೇ ಇಷ್ಟುಒಳ್ಳೆಯ ಟೀಮ್ ಸಿಗುತ್ತೆ ಅಂತ ಅನ್ಕೊಂಡಿರಲಿಲ್ಲ. ಅಪ್ಪ, ಅತ್ತೆ ಹಾಗೂ ಉಷಾ ಭಂಡಾರಿ ಅವರ ಕಡೆಯಿಂದ ಎಂಟ್ರಿಯಲ್ಲೇ ಇಷ್ಟುಒಳ್ಳೆಯ ಚಿತ್ರ ತಂಡ ಸಿಕ್ಕಿತು. ಶೂಟಿಂಗ್ ಮುಗಿಯುವ ತನಕವೂ ನಂಗೆ ಎಂದಿಗೂ ಬೇಸರ ಎನಿಸಿಲ್ಲ. ಎಂಜಾಯ್ ಮಾಡುತ್ತಲೇ ಶೂಟಿಂಗ್ ಮುಗಿಸಿದ್ದೇವೆ. ಒಂಥರ ಚೆನ್ನಾಗಿತ್ತು. ಸಿನಿಮಾ ಕೂಡ ಅಷ್ಟೇ ಚೆನ್ನಾಗಿದೆ. ವೀರೇಂದ್ರ ಶೆಟ್ಟಿನಿರ್ದೇಶನದ ಜತೆಗೆ ನಾಯಕ ನಟರು ಕೂಡ. ಹಾಗೇಯೇ ಮನೋ ಮೂರ್ತಿ ಸರ್ ಅದ್ಭುತವಾದ ಸಂಗೀತ ನೀಡಿದ್ದಾರೆ. ಒಂಥರ ಕಾಮಿಡಿ ಸಿನಿಮಾ, ತುಂಬಾ ಚೆನ್ನಾಗಿ ಬಂದಿದೆ.