ನಟನೆ ಟ್ರೋಲ್ ಮಾಡಿವರಿಗೆ ಶ್ರೀವಲ್ಲಿ ಟಾಂಗ್: ‘ನಾನು ತೆಲುಗು ಸೊಸೆ’ ಎಂದ ರಶ್ಮಿಕಾ ಮಂದಣ್ಣ!

Published : Mar 21, 2026, 03:14 PM IST
Rashmika Mandanna

ಸಾರಾಂಶ

ತೆಲಂಗಾಣ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ 'ದಿ ಗರ್ಲ್‌ಫ್ರೆಂಡ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ವೇದಿಕೆಯಲ್ಲೇ ತಮ್ಮ ನಟನೆಯನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ ಅವರು, ತೆಲುಗು ಚಿತ್ರರಂಗಕ್ಕೆ ಬಂದಾಗ ಮಗಳಂತೆ ನೋಡಿಕೊಂಡರು ಎಂದಿದ್ದಾರೆ.

ಹೈದರಾಬಾದ್: ತೆಲಂಗಾಣ ರಾಜ್ಯಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ನವವಧು ರಶ್ಮಿಕಾ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿಶೇಷ ಅಂದ್ರೆ ಸ್ಟೇಟ್ ಅವಾರ್ಡ್ ವೇದಿಕೆ ಮೇಲೆಯೇ ತನ್ನ ನಟನೆಯನ್ನ ಟೀಕೆ ಮಾಡಿದವರಿಗೆ ರಶ್ಮಿಕಾ ಟಾಂಗ್ ಕೊಟ್ಟಿದ್ದಾರೆ. ರಶ್ಮಿಕಾ ಮಾತು ಕೇಳಿದ ತೆಲುಗು ಮಂದಿ ಸೂಪರ್ ಸೊಸೆ ಅಂತ ಕೊಂಡಾಡ್ತಾ ಇದ್ದಾರೆ.

ತೆಲಂಗಾಣ ಸ್ಟೇಟ್ ಅವಾರ್ಡ್ ಪಡೆದ ರಶ್ಮಿಕಾ..!

ಯೆಸ್ ತೆಲಂಗಾಣ ರಾಜ್ಯ ಚಲನಚಿತ್ರ ಪ್ರಶಸ್ತಿಯಾಗಿರೋ, ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಶ್ಮಿಕಾ ಭಾಗಿಯಾಗಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಸಲಿಗೆ ದಿ ಗರ್ಲ್ ಫ್ರೆಂಡ್ ಸಿನಿಮಾದ ನಟನೆಗಾಗಿ ರಶ್ಮಿಕಾಗೆ ಈ ಪ್ರಶಸ್ತಿ ಬಂದಿದ್ದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ರಾಮ್‌ ಚರಣ್ ತೇಜಾ ಕೈಯಿಂದ ರಶ್ಮಿಕಾ ಈ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.

ಅಸಲಿಗೆ ಒಂದು ಕಾಲದಲ್ಲಿ ರಶ್ಮಿಕಾ ಪರ್ಫೆರ್ಮೆನ್ಸ್‌ನ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗ್ತಾ ಇತ್ತು. ತಮ್ಮನ್ನ ಟ್ರೋಲ್ ಮಾಡ್ತಾ ಇದ್ದವರನ್ನ ವೇದಿಕೆ ಮೇಲೆ ನೆನಪಿಸಿಕೊಂಡಿರೊ ರಶ್ಮಿಕಾ, ನೋಡಿ ಸ್ಟೇಟ್ ಅವಾರ್ಡ್ ಪಡೆದುಕೊಂಡಿದ್ದೀನಿ ಅಂತ ಹೇಳ್ತಾ ಟಾಂಗ್ ಕೊಟ್ಟಿದ್ದಾರೆ.

‘ಹಿಂದೆ ನಾನು ಟ್ರೋಲ್‌ಗಳನ್ನು ಎದುರಿಸಿದ್ದೆ. ಆದರೆ ಈಗ ರಾಜ್ಯ ಪ್ರಶಸ್ತಿ ಪಡೆದಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದೂ ಗರ್ಲ್ ಫ್ರೆಂಡ್ ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದಕ್ಕೆ ತುಂಬಾ ಖುಷಿ ಇದೆ’. ನನ್ನ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿರುವುದು ನನಗೆ ತುಂಬಾ ಹೆಮ್ಮೆ ತಂದಿದೆ. ಈ ಪ್ರಶಸ್ತಿ ನನಗೆ ಇನ್ನೂ ಇಂತಹ ಚಿತ್ರಗಳನ್ನು ಮಾಡಲು ಆತ್ಮವಿಶ್ವಾಸ ನೀಡಿದೆ. ಈ ಚಿತ್ರವನ್ನ ಮಾಡಲು ರಾಹುಲ್ ರವೀಂದ್ರನ್ ಅವರಿಂದ ಸಾಧ್ಯವಾಯಿತು. ಚಿತ್ರಕ್ಕಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳು. ನಾನು ಈ ಚಿತ್ರರಂಗಕ್ಕೆ ಬಂದಾಗ, ಎಲ್ಲರೂ ನನ್ನನ್ನು ಮಗಳಂತೆ ನೋಡಿಕೊಂಡರು. ಈಗ ನಾನು ನಿಮ್ಮ ಮುಂದೆ ಸೊಸೆಯಂತೆ ಇದ್ದೇನೆ. ಎಲ್ಲರೂ, ನನ್ನ ಪ್ರೀತಿಯಿಂದ ನೋಡಿಕೊಳ್ಳಿ’ ಎಂದಿದ್ದಾರೆ.

ಸೊಸೆ ರಶ್ಮಿಕಾ ಮಾತು ಕೇಳಿ ಭಾವುಕರಾದ ಅತ್ತೆ..!

ಯೆಸ್ ಟಾಲಿವುಡ್‌ಗೆ ಬಂದಾಗ ತನ್ನನ್ನ ಎಲ್ಲರೂ ಮಗಳಂತೆ ಸ್ವೀಕಾರ ಮಾಡಿದ್ರು. ಈಗ ತೆಲಂಗಾಣ ಸೊಸೆಯಾಗಿದ್ದಿನಿ ಇನ್ನಷ್ಟು ಪ್ರೀತಿ ಕೊಡಿ ಅಂದ ರಶ್ಮಿಕಾ ಮಾತು ಕೇಳಿ, ವಿಜಯ್ ದೇವರಕೊಂಡ ತಾಯಿ ರಶ್ಮಿಕಾ ಅತ್ತೆ ಕಣ್ಣೀರು ಹಾಕಿದ್ದಾರೆ.

ಅಸಲಿಗೆ ರಶ್ಮಿಕಾ ಯಾವುದೇ ನಟನೆಯ ತರಬೇತಿ ಪಡೆದವರಲ್ಲ. ಕಾಲೇಜು ಕ್ಲಾಸ್​ನಿಂದ ಸೀದಾ ಕಿರಿಕ್ ಪಾರ್ಟಿ ಸಿನಿಮಾ ಸೆಟ್‌ಗೆ ಹಾಜರಾದ್ರು. ಅದೃಷ್ಟವಶಾತ್ ಮೊದಲ ಚಿತ್ರ ಸೂಪರ್ ಹಿಟ್ ಆಯಿತು. ಮುಂದೆ ರಶ್ಮಿಕಾ ಜರ್ನಿ ಯಶಸ್ವಿಯಾಗಿ ಮುಂದುವರೀತು. ನ್ಯಾಷನಲ್ ಕ್ರಶ್ ಅಂತ ಕರೆಸಿಕೊಂಡು ಸಕ್ಸಸ್ ಮೇಲೆ ಸಕ್ಸಸ್ ಕೊಟ್ರೂ ರಶ್ಮಿಕಾನ ಟ್ರೋಲ್ ಮಾಡೋರು ಮಾತ್ರ ಬಿಟ್ಟಿರಲಿಲ್ಲ. ರಶ್ಮಿಕಾ ನಟನೆಯನ್ನ, ಓವರ್ ಆಕ್ಟಿಂಗ್ ಜೊತೆಗೆ ಅವರ ಖಾಸಗಿ ಬದುಕಿನ ವಿಚಾರವನ್ನೂ ಇಟ್ಟುಕೊಂಡು ಟ್ರೋಲ್ ಮಾಡಲಾಗ್ತಾ ಇತ್ತು.

ಇದೀಗ ರಾಜ್ಯ ಪ್ರಶಸ್ತಿ ಗೆದ್ದು ಹಾಗೆ ಟ್ರೋಲ್ ಮಾಡೋರಿಗೆಲ್ಲಾ ಟಾಂಗ್ ಕೊಟ್ಟಿದ್ದಾರೆ ರಶ್ಮಿಕಾ. ಸೋಷಿಯಲ್ ಮಿಡಿಯಾದಲ್ಲಿ ಈ ಅವಾರ್ಡ್ ತನ್ನ ಪಾಲಿಗೆ ಎಷ್ಟು ದೊಡ್ಡದು ಅನ್ನೋ ಸುದೀರ್ಘ ಪೋಸ್ಟ್ ಹಾಕಿದ್ದಾರೆ. ಒಟ್ನಲ್ಲಿ ಮದುವೆ ಖುಷಿಯ ನಡುವೆಯೇ ಈ ಅವಾರ್ಡ್ ರಶ್ಮಿಕಾ ಸಂತಸವನ್ನ ಡಬಲ್ ಮಾಡಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಿನಿಮಾ ಹೀರೋ ಅಲ್ಲ, ನಿರ್ದೇಶಕನನ್ನೇ ಲವ್ ಮಾಡಿ ಮದ್ವೆಯಾದ ನಟಿಯರು
ನಟಿ ಭಾವನಾ ರಾಮಣ್ಣ ಮಗಳ ನಾಮಕರಣ ಸಂಭ್ರಮ: ಶಾಸ್ತ್ರದ ಕ್ಯೂಟ್​ ಫೋಟೋಗಳು ವೈರಲ್​