
ನ್ಯಾಷನಲ್ ಕ್ರಶ್ ರಶ್ಮಿಕಾ ವಿವಾಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರುವರಿ 26ಕ್ಕೆ ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹ ಫಿಕ್ಸ್ ಆಗಿದ್ದು, ರಾಜಸ್ಥಾನದ ಉದಯಪುರದ ಪ್ಯಾಲೇಸ್ನಲ್ಲಿ ತಾರಾಜೋಡಿ ಸಪ್ತಪದಿ ತುಳಿಯಲಿದ್ದಾರೆ ಅಂತ ಈ ಹಿಂದೆ ಸುದ್ದಿಯಾಗಿತ್ತು. ಆದ್ರೆ ಸದ್ಯ ಉದಯಪುರದಲ್ಲಿ ನಡೀತಿರೋ ತಯಾರಿ ನೋಡ್ತಾ ಇದ್ರೆ, ಇಂದೇ ರಶ್ಮಿಕಾ ಕಲ್ಯಾಣ ಅನ್ನಿಸ್ತಾ ಇದೆ.
ಯೆಸ್ ಈ ತಿಂಗಳ 26ಕ್ಕೆ ರಾಜಸ್ತಾನದ ಉದಯಪುರದಲ್ಲಿ ತಾರಾ ಜೋಡಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆ ನಡೆಯಲಿರೋ ವಿಷ್ಯ ಗೊತ್ತೇ ಇದೆ. ಆದ್ರೆ ಈ ಸ್ಟಾರ್ ಕಪಲ್ ಮದುವೆಗೆ ಉದಯಪುರ ಅರಮನೆ ಈಗಿನಿಂದಲೇ ಸಜ್ಜಾಗ್ತಾ ಇದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ಇಬ್ಬರು ಯುವತಿಯರು ತಾವು ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ನಡೆಯಲಿರುವ ಸ್ಥಳದಲ್ಲಿ ಇದ್ದು, ಅದ್ಧೂರಿಯಾಗಿ ವಿವಾಹದ ಸಿದ್ಧತೆಗಳು ನಡೆಯುತ್ತಿವೆ ಎಂದಿದ್ದಾರೆ. ಅಲ್ಲದೆ ಸಿದ್ಧತೆಗಳು ನಡೆಯುತ್ತಿರುವ ವಿಡಿಯೋವನ್ನ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಜಯ್ ಮತ್ತು ರಶ್ಮಿಕಾ ವಿವಾಹ ರಾಜಸ್ಥಾನದ ಅರಮನೆಗಳ ನಗರ ಉದಯಪುರದ ಸಿಟಿ ಪ್ಯಾಲೆಸ್ನಲ್ಲಿ ನಡೆಯಲಿದೆ ಅಂತ ಈ ಯುವತಿಯರು ಹೇಳಿದ್ದಾರೆ. ಅವರು ಮಾಡಿರುವ ವಿಡಿಯೋನಲ್ಲಿ ವೇದಿಕೆಯನ್ನು ಬಲು ಅದ್ಧೂರಿಯಾಗಿ ಸಿಂಗರಿಸಲಾಗುತ್ತಿದೆ. ಎರಡು ದಿನದ ಹಿಂದಷ್ಟೆ ನಟಿ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ರು. ಆಗ ಪಾಪರಾಜಿಗಳು ‘ಮದುವೆಗೆ ಕರೆಯುವುದಿಲ್ಲವೇ?’ ಅಂತ ನೇರವಾಗಿ ಪ್ರಶ್ನೆ ಮಾಡಿದ್ರು. ಅದಕ್ಕೆ ಜಾಣತನದ ಉತ್ತರ ನೀಡಿ ಜಾರಿಕೊಂಡ ರಶ್ಮಿಕಾ, ‘ಯಾರ ಮದುವೆ?’ ಅಂತ ಕೇಳಿದ್ರು. ಮತ್ತೆ ಮದುವೆಯ ಬಗ್ಗೆಯೇ ಪ್ರಶ್ನೆ ಕೇಳಿದಾಗ ತಕ್ಷಣವೇ ಮಾತನ್ನ ಸಿನಿಮಾದ ಕಡೆಗೆ ತಿರುಗಿಸಿದ್ದಾರೆ.
ಹೌದು, ಮದುವೆಗೆ ಪ್ಯಾಲೇಸ್ ಸಜ್ಜಾಗ್ತಿರೋ ವೈರಲ್ ವಿಡಿಯೋ ನೋಡಿ ಇವತ್ತೇ ಗುಟ್ಟಾಗಿ ರಶ್ಮಿಕಾ - ವಿಜಯ್ ಕಲ್ಯಾಣ ನಡೀತಾ ಇದೆಯಾ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಅಸಲಿಗೆ ತಮ್ಮ ಎಂಗೇಜ್ಮೆಂಟ್ನ ಕೂಡ ಇದೇ ರೀತಿ ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ಗುಟ್ಟಾಗಿ ಮಾಡಿಕೊಂಡಿದ್ರು. ಈಗ ಮದುವೆನೂ ಅಷ್ಟೇ ಸೈಲೆಂಟ್ ಆಗಿ ಆಗ್ತಾ ಇದ್ದಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫ್ಯಾಮಿಲಿ ರಾಜಸ್ಥಾನದ ಪ್ಯಾಲೇಸ್ ಹೊಟೇಲ್ನಲ್ಲಿ ಮದುವೆ ಮಾಡೋದಕ್ಕೆ ತಯಾರಿ ಮಾಡ್ತಾ ಇದೆ. ಕೋಟೆ ನಗರಿ ರಾಜಸ್ಥಾನದಲ್ಲಿ ಅನೇಕ ಅರಮನೆಗಳಿವೆ. ಉದಯಪುರದ ಅರಮನೆಯನ್ನ ಹೊಟೇಲ್ ಆಗಿ ಬದಲಾಯಿಸಿದ್ದು ಅಲ್ಲಿ ಇವೆಂಟ್ಗಳನ್ನ ನಡೆಸೋದಕ್ಕೆ ಬಾಡಿಗೆ ಕೊಡಲಾಗುತ್ತೆ. ಈ ಉದಯಪುರ ಪ್ಯಾಲೇಸ್ ನಲ್ಲೇ ರಶ್ಮಿಕಾ ವಿಜಯ್ ಮದುವೆ ನಡೆಯೋದು ಫಿಕ್ಸ್ ಆಗಿದೆ.
ರಶ್ಮಿಕಾ ಮಂದಣ್ಣ ಮಡಿಕೇರಿ ಮೂಲದವರು. ಕೊಡವ ಕುಟುಂಬದವರಾದ ಅವರ ಮೂಲ ಮನೆ ಈಗಲೂ ವಿರಾಜಪೇಟೆಯಲ್ಲಿದೆ. ಇನ್ನೂ ದೇವರಕೊಂಡ ಫ್ಯಾಮಿಲಿ ಹೈದರಾಬಾದ್ನವರು. ಸೋ ವಧು-ವರ ಇಬ್ಬರ ಜಾಗವನ್ನೂ ಬಿಟ್ಟು ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಸಲಾಗ್ತಾ ಇದೆ. ಇದಕ್ಕೆ ಕಾರಣ ಬೇರೆನೂ ಇಲ್ಲ. ಖಾಸಗಿತನಕ್ಕೆ ಅಡ್ಡಿ ಬರಬಾರದು ಅಂತ. ಕಳೆದ ಅಕ್ಟೋಬರ್ 3ನೇ ತಾರೀಖು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಹೈದ್ರಾಬಾದ್ನಲ್ಲಿ ನಡೆದಿತ್ತು. ಇಬ್ಬರ ಫ್ಯಾಮಿಲಿ ಮತ್ತು ಆಪ್ತರು ಮಾತ್ರ ದೇವರಕೊಂಡ ಮನೆಯಲ್ಲಿ ನಿಶ್ಚಿತಾರ್ಥದಲ್ಲಿ ಭಾಗಿ ಆಗಿದ್ರು. ಇದೂವರೆಗೂ ಎಂಗೇಜ್ಮೆಂಟ್ ವಿಷ್ಯನಾ ಇಬ್ಬರೂ ಗುಟ್ಟಾಗೇ ಇಟ್ಟಿದ್ದಾರೆ. ಮದುವೆ ಮ್ಯಾಟರ್ನೂ ಬಹಿರಂಗ ಪಡಿಸಿಲ್ಲ. ಆದ್ರೆ ಅದೆಷ್ಟೇ ಗುಟ್ಟಾಗಿ ತಯಾರಿ ಮಾಡಿದ್ರೂ ಮದುವೆ ತಯಾರಿ ವಿಷ್ಯ ಸಖತ್ ಸದ್ದು ಮಾಡ್ತಾ ಇದೆ.
ಸಿನಿಮಾ ಜಗತ್ತಲ್ಲಿ ಈಗ ಒಂದು ಟ್ರೆಂಡ್ ಇದೆ. ಅದು ಡೆಸ್ಟಿನೇಷನ್ ವೆಡ್ಡಿಂಗ್ ಟ್ರೆಂಡ್. ಅನುಷ್ಕಾ ಶರ್ಮಾ- ವಿರಾಟ್, ದೀಪಿಕಾ ಪಡುಕೋಣೆ ಹಾಗು ರಣ್ವೀರ್ ಸಿಂಗ್, ಪ್ರಿಯಾಂಕ ಚೋಪ್ರಾ, ಕಿಯಾರಾ ಅಡ್ವಾನಿ ಸೇರಿದಂತೆ ಹಲವು ನಟಿಯರು ಡೆಸ್ಸಿನೇಷನ್ ವೆಡ್ಡಿಂಗ್ ಮಾಡಿಕೊಂಡಿದ್ರು. ವಿದೇಶ ಅಥವಾ ಬೇರೆ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಹೋಗಿ ಆಪ್ತರಿಗಷ್ಟೇ ಆಹ್ವಾನಿಸಿ ಮದುವೆ ಆಗೋದು. ಇದೇ ಪದ್ದತಿಯನ್ನ ನಟಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಅನುರಿಸ್ತಾ ಇದ್ದಾರೆ. ಅರಮನೆಯಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿ ಆಪ್ತರಿಗೆ ಮಾತ್ರ ಆಹ್ವಾನ ಇರಲಿದೆ. ಟಾಲಿವುಡ್, ಕಾಲಿವುಡ್, ಬಾಲಿವುಡ್ ದಿಗ್ಗಜರು ಮದುವೆಯಲ್ಲಿ ಭಾಗಿ ಆಗಲಿದ್ದಾರೆ.
ರಶ್ಮಿಕಾ ಮೊದಲು ಬಣ್ಣ ಹಚ್ಚಿದ್ದು ಸ್ಯಾಂಡಲ್ವುಡ್ನಲ್ಲಿ. ಆದ್ರೆ ಸದ್ಯ ಸ್ಯಾಂಡಲ್ವುಡ್ ಜೊತೆ ರಶ್ಮಿಕಾ ನಂಟು ಅಷ್ಟಕಷ್ಟೇ. ರಕ್ಷಿತ್ ಜೊತೆಗೆ ಬ್ರೇಕ್ ಅಪ್ ಆದ ಮೇಲೆ ರಿಷಬ್ ಶೆಟ್ಟಿ ಸೇರಿದಂತೆ ಯಾರೊಬ್ಬರ ಜೊತೆಗೂ ರಶ್ಮಿಕಾಗೆ ಒಳ್ಳೆ ನಂಟು ಉಳಿದಿಲ್ಲ. ಸೋ ಸ್ಯಾಂಡಲ್ವುಡ್ನಲ್ಲಿ ಯಾರ್ಯಾರಿಗೆ ಮದುವೆ ಆಹ್ವಾನ ಬರುತ್ತೋ ಗೊತ್ತಿಲ್ಲ.
ಹೌದು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅತ್ತ ಮದುವೆ ಸಂಭ್ರಮದಲ್ಲಿದ್ರೆ ಇತ್ತ ಅವರ ಇನ್ನೊಂದು ಸಿನಿಮಾದ ಕೆಲಸ ಕೂಡ ನಡೀತಾ ಇದೆ. ಹಿಂದೆ ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿ ವಿಜಯ್ ರಶ್ಮಿಕಾ ಜೊತೆಯಾಗಿ ನಟಿಸಿದ್ರು. ಈಗ ರಣಬಾಲಿ ಚಿತ್ರದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮತ್ತೆ ಒಟ್ಟಾಗಿ ನಟಿಸ್ತಾ ಇದ್ದಾರೆ. ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ರಣಬಾಲಿ’ ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದು ಇದ್ರಲ್ಲಿ ರಿಯಲ್ ಲೈಫ್ ಜೋಡಿ ಮತ್ತೊಮ್ಮೆ ಜೊತೆಯಾಗಿ ಸ್ಕ್ರೀನ್ ಶೇರ್ ಮಾಡ್ತಾ ಇದ್ದಾರೆ.
ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಮೂಡಿಬರಲಿದೆ. ವಿಜಯ್ ದೇವರಕೊಂಡ ರಣಬಾಲಿ ಎಂಬ ಪಾತ್ರವನ್ನ ಮಾಡ್ತಾ ಇದ್ರೆ, . ರಶ್ಮಿಕಾ ಮಂದಣ್ಣ ಅವರಿಗೆ ಜಯಮ್ಮ ಅನ್ನೋ ಕ್ಯಾರೆಕ್ಟರ್ನಲ್ಲಿದ್ದಾರೆ. ಸ್ವತಂತ್ರ ಪೂರ್ವದ ಕಥೆಯಿರೋ ಈ ಸಿನಿಮಾದ ಟೈಟಲ್ ಟೀಸರ್ ಸಖತ್ ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.