ರಶ್ಮಿಕಾಗೆ ಬೋಲ್ಡ್ ಆದ US ಹುಡುಗ! ಇಲ್ಲಿದೆ ಲವ್ ಲೆಟರ್....

Published : Feb 12, 2019, 12:44 PM IST
ರಶ್ಮಿಕಾಗೆ ಬೋಲ್ಡ್ ಆದ US ಹುಡುಗ! ಇಲ್ಲಿದೆ ಲವ್ ಲೆಟರ್....

ಸಾರಾಂಶ

  ಸೆಲೆಬ್ರಿಟಿಗಳೆಂದರೆ ಸುಮ್ಮನೇನಾ? ಅವರಿಗೂ ಇರುತ್ತಾರೆ ಕ್ರೇಜಿ ಫ್ಯಾನ್ಸ್. ಅಂಥ ಫ್ಯಾನ್‌ ಒಬ್ಬ ಅಮೆರಿಕದಿಂದ ಕರ್ನಾಟಕದ ಕ್ರಶ್‌ ರಶ್ಮಿಕಾ ಮಂದಣ್ಣಗೆ ಪತ್ರ ಬೆರೆದಿದ್ದಾನೆ. ಏನಿದೆ ಪತ್ರದಲ್ಲಿ?

'ಕಿರಿಕ್ ಪಾರ್ಟಿ' ಮೂಲಕ ಸಿನಿ ಜರ್ನಿ ಶುರುಮಾಡಿದ ರಶ್ಮಿಕಾ 'ಸಾನ್ವಿ' ಎಂದೇ ಫೇಮಸ್ ಆದವರು. ಅಂದಿನಿಂದ ಇಂದಿನವರೆಗೂ ರಶ್ಮಿಕಾ ಫ್ಯಾನ್ ಕ್ಲಬ್‌ಗಳು ವಿಸ್ತರಿಸುತ್ತಿವೆ.

ಇದೀಗ ರಶ್ಮಿಕಾ ಫ್ಯಾನ್‌ಗಳಲ್ಲಿ ಎಂಟು ವರ್ಷದ ಪೋರನೊಬ್ಬ ಸೇರಿಕೊಂಡಿದ್ದಾನೆ. ಫ್ಯಾನ್ ಪೇಜ್ ವೊಂದರಲ್ಲಿ ಪೋರ ರೋಹಿತ್ ದೇವ ಬರೆದ ಪತ್ರವನ್ನು ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ. ಪತ್ರದಲ್ಲೊಂದು ಹಾರ್ಟ್, ಸ್ಟಾರ್ ಹಾಗೂ ಸ್ಮೈಲಿ ಚಿತ್ರ ಬಿಡಿಸಿ ರೋಹಿತ್ ಏನು ಬರೆದಿದ್ದಾನೆ?

ಪುಟ್ಟ ತಂಗಿಯೊಂದಿಗೆ ರಶ್ಮಿಕಾ ಡ್ಯಾನ್ಸ್ ! #16YearsChallenge

'ಡಿಯರ್ ರಶ್ಮಿಕಾ/ ಗೀತಾ,

ನೀನು ಬ್ಯೂಟಿಫುಲ್ ವುಮೆನ್. ನೀನು ನೀನಾಗಿ ಅಭಿನಯಿಸುವ ರೀತಿ ನಂಗಿಷ್ಟ. ನಿನ್ನ ಮುಖ ತುಂಬಾ ಬ್ಯೂಟಿಫುಲ್. ನಿನ್ನ ಸಿನಿಮಾ ಹಾಡುಗಳೂ ನನಗೆ ತುಂಬಾ ಇಷ್ಟ. ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ನಿನ್ನ ಸಿನಿಮಾ 'ಗೀತಾ ಗೋವಿಂದಮ್' ನೋಡಿ ಕಲಿತೆ. ಇದು ನನ್ನ ಫೇವರೇಟ್ ಫಿಲ್ಮ್. ಮಾತನಾಡೋ ಸ್ಟೈಲ್, ಆ್ಯಕ್ಟಿಂಗ್ ಎಲ್ಲವೂ ಸೂಪರ್. ನಿನ್ನ ಸಿನಿಮಾ ಹಾಡುಗಳೂ ಕೇಳಲು ಮುದ ನೀಡುತ್ತವೆ. ತುಂಬಾ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಿನ್ನಿಂದ ನನಗೊಂದು ಹಗ್ ಬೇಕು,' ಲವ್, ರೋಹಿತ್ ದೇವ್' ಎಂದು ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.

ಒಟ್ಟಿನಲ್ಲಿ ರಶ್ಮಿಕಾರನ್ನು ಎಲ್ಲರೂ ಇಷ್ಟ ಪಡುವವರೇ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Darshan The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ ದರ್ಶನ್‌ ಮೆಸೇಜ್
ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು