
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದಾ ತಮ್ಮ ಮಾತುಗಳಿಂದ ಸದ್ದು ಮಾಡುತ್ತಲೇ ಇರುವವರು. ಅದೇ ರೀತಿ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಡುವುದರಲ್ಲಿಯೂ ಅವರದ್ದು ಎತ್ತಿದ ಕೈ. ಕಾಂಟ್ರವರ್ಸಿ ಲೇಡಿ ಎಂದೇ ಫೇಮಸ್ ಆಗಿರೊ ಕಿರಿಕ್ ರಶ್ಮಿಕಾ ಹೊಸ ರೂಪ ನೋಡಿ ಅಭಿಮಾನಿಗಳು ಶಾಕ್ ಆಗುವುದರ ಜೊತೆಗೆ, ಅಬ್ಬಬ್ಬಾ ಎಂದು ಹುಬ್ಬೇರಿಸಿದ್ದಾರೆ. ನಟಿ ರಕ್ತಸಿಕ್ತ ಅವತಾರದಲ್ಲಿ ಭಯಾನಕ ರೂಪದಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಅಂದಹಾಗೆ ಇದು ರಶ್ಮಿಕಾ ಅವರ ಹೊಸ ಚಿತ್ರದ ದೃಶ್ಯ. ಚಿತ್ರದ ಹೆಸರು ‘ಮೈಸಾ’ (Mysaa). ಇದು ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಮಹಿಳಾ ಪ್ರಧಾನ ಚಿತ್ರವಾಗಿರುವ ಮೈಸಾದಲ್ಲಿ ರಶ್ಮಿಕಾ ತಮ್ಮ ಹಿಂದಿನ ಎಲ್ಲಾ ಗೆಟಪ್ಗಳನ್ನು ಮೀರಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಷ್ಟಕ್ಕೂ ರಶ್ಮಿಕಾ ಅಂದರೆ ರೊಮ್ಯಾಂಟಿಕ್ ಎಂದೇ ಹೇಳಲಾಗುತ್ತದೆ. ಆದರೆ ಈ ಹೊಸ ಅವತಾರ ಮಾತ್ರ ಸಂಪೂರ್ಣ ಬದಲಾಗಿದ್ದು, ಕೈಯಲ್ಲಿ ಆಯುಧ ಹಿಡಿದು, ರಕ್ತಿಸಿಕ್ತ ಮುಖದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ವೀಕ್ಷಿಸಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದಾರೆ. ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಎಂಬುವವರು ಚಿತ್ರಕ್ಕೆ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, “ನಾನು ಯಾವಾಗಲೂ ನಿಮಗೆ ಹೊಸದನ್ನು ನೀಡಲು ಪ್ರಯತ್ನಿಸುತ್ತೇನೆ. ವಿಭಿನ್ನವಾದದ್ದು, ರೋಮಾಂಚನಕಾರಿಯಾದದ್ದನ್ನು, ಮತ್ತು ಇದು.. ಇದು ಅಂತಹದ್ದರಲ್ಲಿ ಒಂದು. ನಾನು ಇದುವರೆಗೆ ನಟಿಸದ ಪಾತ್ರ, ನಾನು ಎಂದಿಗೂ ಕಾಲಿಡದ ಜಗತ್ತು, ಮತ್ತು ನಾನು ಇಲ್ಲಿಯವರೆಗೆ ಭೇಟಿಯಾಗದ ನನ್ನ ಒಂದು ಆವೃತ್ತಿ. ಇದು ಉಗ್ರವಾಗಿದೆ, ಇದು ತೀವ್ರವಾಗಿದೆ. ಇದು ಕೇವಲ ಆರಂಭ..” ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ಕಾಲಿವುಡ್ ನಟ ಧನುಷ್ ನಟನೆಯ ʻಕುಬೇರʼ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ನ್ಯಾಷನಲ್ ಕ್ರಶ್ ತಮ್ಮ ಹೊಸ ಸಿನಿಮಾವನ್ನು ಘೋಷಿಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದರ ಜೊತೆಗೆ ಇದಾಗಲೇ ನಟಿ ಛಾವಾ ಚಿತ್ರದ ಭರ್ಜರಿ ಯಶಸ್ಸಿನ ಮೂಡ್ನಲ್ಲಿದ್ದಾರೆ. ಅದೇ ಇನ್ನೊಂದೆಡೆ, ನಟ ದೀಕ್ಷಿತ್ ಶೆಟ್ಟಿ ಜೊತೆ ನಟಿಸಿರುವ ದಿ ಗರ್ಲ್ ಫ್ರೆಂಡ್ ತೆಲಗು ಚಿತ್ರ ತೆರೆಯ ಮೇಲೆ ಬಂದಿದೆ. ಈ ಸಮಯದಲ್ಲಿ ರಶ್ಮಿಕಾ ಅವರ ಡೆಡಿಕೇಷನ್ ಬಗ್ಗೆ ನಾಯಕ ದೀಕ್ಷಿತ್ ಮಾತನಾಡಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ತಾರೆಯೊಬ್ಬರು ಈ ಪರಿಯಲ್ಲಿ ಯಾವುದೇ ಹೆಡ್ವೇಟ್ ಇಲ್ಲದೇ, ಸಹನಟರ ಜೊತೆ ಇಷ್ಟೊಂದು ಖುಷಿಯಿಂದ ಮಾತನಾಡುವುದನ್ನು ಕಂಡು ಅಚ್ಚರಿಯಾಗುತ್ತದೆ ಎಂದಿದ್ದರು.
ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಹಾರ್ಡ್ವರ್ಕರ್. ಬಹುಶಃ ಅವರಂಥ ಹಾರ್ಡ್ವರ್ಕಿಂಗ್ ನಟಿಯನ್ನು ನಾನು ನೋಡಿಲ್ಲ. ದಿನದ 24 ಗಂಟೆಗಳೂ ಬಿಜಿಯಾಗಿರುತ್ತಾರೆ. ಇಷ್ಟಾದರೂ ಅವರ ಮುಖದಲ್ಲಿ ಯಾವುದೇ ಸುಸ್ತು ಕಾಣುವುದಿಲ್ಲ. ಖುಷಿಯಿಂದಲೇ ಎಲ್ಲರ ಜೊತೆ ಬೆರೆಯುತ್ತಾರೆ ಎನ್ನುತ್ತಲೇ ರಶ್ಮಿಕಾ ಅವರು ಶೂಟಿಂಗ್ ಸೆಟ್ನಲ್ಲಿ ನಡೆದುಕೊಳ್ಳುವ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ಈಗ ಹೊಸ ಅವತಾರದಲ್ಲಿ ನಟಿ ಹೇಗೆ ಕಾಣಿಸಲಿದ್ದಾರೆ ಎನ್ನುವ ಕಾತರ ಅಭಿಮಾನಿಗಳದ್ದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.