
ಬೆಂಗಳೂರು (ನ. 18): ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಕಾಲಿಟ್ಟು ಎರಡು ವರ್ಷಗಳು ಕಳೆದಿವೆ. ಕೇವಲ ಎರಡು ವರ್ಷಗಳಲ್ಲಿ ಇವರ ಸ್ಟಾರ್ ತಿರುಗಿದೆ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ, ಟಾಲಿವುಡ್ ನಲ್ಲೂ ಬಹುಬೇಡಿಕೆ ನಟಿ. ’ಗೀತಾ ಗೋವಿಂದಂ’ ಸೂಪರ್ ಡ್ಯೂಪರ್ ಬಳಿಕ ಸಾಲು ಸಾಲು ಆಫರ್ ಗಳು ರಶ್ಮಿಕಾರನ್ನು ಹುಡುಕಿಕೊಂಡು ಬಂದಿದೆ.
ಗಂಡನೊಂದಿಗೆ ಮುಂಬೈಗೆ ಬಂದಿಳಿದ ಮಿಸಸ್ ದೀಪಿಕಾ ರಣವೀರ್ ಸಿಂಗ್!
ಸದ್ಯ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಶ್ಮಿಕಾ ಕನ್ನಡದ ಪೊಗರು ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರಕ್ಕಾಗಿ ಇವರ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 64 ಲಕ್ಷ ರೂಪಾಯಿ. ಹೀಗೊಂದು ಮಾತು ಗಾಂಧಿ ನಗರದಲ್ಲಿ ಗಿರಗಿಟ್ಲೆ ಹೊಡೆಯುತ್ತಿದೆ.
ಯಶ್- ಸುದೀಪ್ ನಡುವೆ ಇನ್ನೊಬ್ಬ ಸ್ಟಾರ್ ನಟನ ಎಂಟ್ರಿ
ಇದು ನಿಜವೇ ಆಗಿದ್ದರೆ ಕನ್ನಡದ ನಟಿಯರ ಪೈಕಿ ರಶ್ಮಿಕಾ ಅತೀ ಹೆಚ್ಚು ಸಂಭಾವನೆ ಪಡೆದ ನಟಿ. ಇಲ್ಲಿಯವರೆಗೂ ಕನ್ನಡ ನಟಿಯರು ಯಾರೂ 50 ಲಕ್ಷ ಸಂಭಾವನೆ ಗಡಿ ದಾಟಿರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.