ಅರ್ಜೆಂಟ್‌ಅಲ್ಲಿ ಓಡಿಬಂದ ರಶ್ಮಿಕಾ ಮಂದಣ್ಣ, 'ಕಾಲು ನೋಡ್ಕೊಳ್ಳಿ..' ಅಂತಾ ಹೇಳಿದ್ದೇಕೆ ಫ್ಯಾನ್ಸ್‌?

By Santosh Naik  |  First Published Oct 4, 2023, 9:34 PM IST

ತಾವು ಏನು ಮಾಡಿದ್ರೂ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗುವ ಕೆಲವೇ ಕೆಲವು ಹೀರೋಯಿನ್‌ಗಳಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಮುಂಬೈನಲ್ಲಿ ಬುಧವಾರ ಅವರು ಅರ್ಜೆಂಟ್‌ ಶೂ ಲೇಸ್‌ ಕಟ್ಟದೇ ಓಡಿ ಬಂದಿದ್ದು ವೈರಲ್‌ ಆಗಿದೆ.


ಬೆಂಗಳೂರು (ಅ.4): ಕಿರಿಕ್‌ ಪಾರ್ಟಿ ಮೂಲಕ ಹೀರೋಯಿನ್‌ ಆಗಿ ತೆರೆಯ ಮೇಲೆ ಮಿಂಚಿದ ರಶ್ಮಿಕಾ ಮಂದಣ್ಣ ಇಂದು ತಮಿಳು, ತೆಲುಗು ಚಿತ್ರರಂಗದಲ್ಲಿ ಸೂಪರ್‌ ಸ್ಟಾರ್.‌ ಇದರ ನಡುವೆ ಬಾಲಿವುಡ್‌ನಲ್ಲೂ ಅವರು ಅದೃಷ್ಟ  ಪರೀಕ್ಷೆಗೆ ಇಳಿದಿದ್ದಾರೆ. ರಶ್ಮಿಕಾ ಮಂದಣ್ಣಕ್ಕೆ ಕರ್ನಾಟಕದ ಹೊರಗೆ ಎಷ್ಟು ದೊಡ್ಡ ಹೆಸರಿದೆಯೋ ಕನ್ನಡಿಗರು ರಶ್ಮಿಕಾ ಮಂದಣ್ಣ ಬಗ್ಗೆ ಮೊದಲಿನಷ್ಟು ಕ್ರೇಜ್‌ ಹೊಂದಿಲ್ಲ. ಅದಕ್ಕೆ ಸಾಕಷ್ಟು ಕಾರಣಗಳೂ ಅವರಿಗೆ ಇವೆ. ಹೀಗಿರುವಾಗ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಬರುವ ಒಂದೊಂದು ಸುದ್ದಿಯೂ ಇಲ್ಲಿ ಟ್ರೋಲ್‌ ಆಗುತ್ತದೆ. ರಶ್ಮಿಕಾ ಮಂದಣ್ಣ ನಿಜವಾಗಿಯೂ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ, ನಟಿ ಈವೆಂಟ್‌ಗಾಗಿ ದುಬೈಗೆ ತೆರಳಿದ್ದರು.ಈ ವೇಳೆ ಅವರ ಅಭಿಮಾನಿಗಳು  'ಸಾಮಿ ಸಾಮಿ'ಗೆ ನೃತ್ಯ ಮಾಡುವ ಹಲವಾರು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಶಾಲಾ ಬಾಲಕಿಯೊಬ್ಬಳು ತನ್ನ ಶಾಲಾ ಸಮವಸ್ತ್ರದಲ್ಲಿಯೇ ಸಾಮಿ ಸಾಮಿ ಹಾಡಿಗೆ ನೃತ್ಯ ಮಾಡಿದ್ದಳು. ಇದನ್ನು ರಶ್ಮಿಕಾ ಮಂದಣ್ಣ ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಬಹಳ ಮುದ್ದಾಗಿದೆ ಎಂದು ಬರೆದುಕೊಂಡು ರಿಶೇರ್‌ ಮಾಡಿಕೊಂಡಿದ್ದರು.

ಈ ನಡುವೆ ಗುರುವಾರ ರಶ್ಮಿಕಾ ಮಂದಣ್ಣ ಅವರ ಹೊಸ ವಿಡಿಯೋ ವೈರಲ್‌ ಆಗಿದೆ. ಕಪ್ಪು ಬಣ್ಣದ ಜಾಗರ್ಸ್‌ ಹಾಗೂ ಜಾಕೆಟ್‌ ಧರಿಸಿ ಕಾರ್‌ನತ್ತ ರಶ್ಮಿಕಾ ಬರುತ್ತಿದ್ದ ವೇಳೆ ಅವರನ್ನು ಅಭಿಮಾನಿಯೊಬ್ಬರು ಫೋಟೋಗೆ ಮನವಿ ಮಾಡುತ್ತಾರೆ. ನಗುತ್ತಲೇ ರಶ್ಮಿಕಾ ಫೋಟೋಗೆ ಪೋಸ್‌ ನೀಡಿದ್ದಾರೆ. ಅದರೆ, ಈ ವಿಡಿಯೋ ನೋಡಿದ ಹೆಚ್ಚಿನವರು ರಶ್ಮಿಕಾ ಮಂದಣ್ಣ ಅವರಿಗೆ ನಿಮ್ಮ ಕಾಲುಗಳನ್ನು ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಅಂಥದ್ದೇನಾಯಿತು ಅಂತಾ ನೋಡೋದಾದರೆ, ಅರ್ಜೆಂಟ್‌ಅಲ್ಲಿ ಕಾರ್‌ನತ್ತ ಓಡಿ ಬಂದ ರಶ್ಮಿಕಾ ತನ್ನ ಎರಡೂ ಶೂಗಳ ಲೇಸ್‌ ಕಟ್ಟೋದನ್ನೇ ಮರೆತಿದ್ದಾರೆ. ಹೊಸ ಸ್ಟೈಲ್‌ ಅಂದ್ಕೊಂಡು ಉದ್ದೇಶಪೂರ್ವಕವಾಗಿ ಅವರು ಲೇಸ್‌ ಕಟ್ಟಲಿಲ್ಲವೋ, ಇಲ್ಲ ಅವರಿಗೆ ನೆನಪೇ ಆಗಲಿಲ್ಲವೋ ಅನ್ನೋದು ಗೊತ್ತಿಲ್ಲ. ಆದರೆ, ಎಲ್ಲೋ ಹೋಗುವ ಅರ್ಜೆಂಟ್‌ ಅಂತೂ ಅವರ ಮುಖದಲ್ಲಿ ಕಾಣ್ತಾ ಇತ್ತು.

ಇದರ ನಡುವೆ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಹೊಸ ಹೇರ್‌ಸ್ಟೈಲ್‌ ಮಾಡಿದ್ದನ್ನು ಜನ ಗುರುತಿಸಿದ್ದಾರೆ. ಕಿರಿಕ್‌ ಪಾರ್ಟಿ ಚಿತ್ರದಲ್ಲಿ ಸಾನ್ವಿ ಪಾತ್ರಕ್ಕೆ ಮಾಡಿದಂಥ ಹೇರ್‌ಸ್ಟೈಲ್‌ಅನ್ನು ರಶ್ಮಿಕಾ ಮಾಡಿದ್ದಾರೆ ಎಂದು ಅವರ ಫ್ಯಾನ್ಸ್‌ ಹೇಳುತ್ತಿದ್ದಾರೆ.

ಮೇಕಪ್‌ ಇಲ್ಲದ ರಶ್ಮಿಕಾ ಮಂದಣ್ಣಳನ್ನು ನೋಡಿ, ಹೊಲದಲ್ಲಿ ನಿಲ್ಲಿಸುವ ಬೆಚ್ಚಪ್ಪನಂತಿದ್ದಾಳೆಂದ ಫ್ಯಾನ್ಸ್!

ಇನ್ಸ್‌ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿರು ವ್ಯಕ್ತಿಗೆ, ರಶ್ಮಿಕಾ ಮಂದಣ್ಣ ಅವರ ಕಾಲುಗಳನ್ನು ಅಷ್ಟೆಲ್ಲಾ ಫೋಕಸ್‌ ಮಾಡೋ ಅಗತ್ಯವೇನಿತ್ತು ಅಂತಾ ಪ್ರಶ್ನೆ ಮಾಡಿದ್ದಾರೆ. ಇದು ಬಹಳ ನಾರ್ಮಲ್‌ ನಿಮಗೆ ಶಾಕಿಂಗ್‌ ಅನಿಸುವಂಥ ವಿಚಾರ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಬಹುಶಃ ರಶ್ಮಿಕಾ ಶೂ ಲೇಸ್‌ ಕಟ್ಟದೇ ಇರುವ ಕಾರಣಕ್ಕೆ ನಾಳೆ ಸೆನ್ಸೆಕ್ಸ್‌ನಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಇನ್ನೊಬ್ಬರು ಟೀಕಿಸಿ ಕಾಮೆಂಟ್‌ ಮಾಡಿದ್ದಾರೆ.

Tap to resize

Latest Videos

Rashmika Mandanna ಬ್ಯೂಟಿಗೆ ಮುತ್ತಿಟ್ಟ ಸೂರ್ಯ: ಸೀರೆಲಿ ಹುಡುಗಿರ ನೋಡಲೇಬಾರದು ಎಂದ ಪಡ್ಡೆಹೈಕ್ಳು

 

click me!