
ನಾನು ತೆಲುಗು ಕಲ್ತಿಲ್ವಾ, ಹಂಗೇ ನೀನು ಕನ್ನಡ ಕಲಿ...!
- ‘ಅರ್ಜುನ್ ರೆಡ್ಡಿ ’ ಖ್ಯಾತಿಯ ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ಹೀಗೆ ವಾರ್ನಿಂಗ್ ಮಾಡಿ, ಕಿವಿ ಹಿಂಡಿದ್ದು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ. ಈ ಘಟನೆ ನಡೆದಿದ್ದು ಅವರಿಬ್ಬರ ಸಿನಿಮಾ ‘ಡಿಯರ್ ಕಾಮ್ರೇಡ್’ ಕನ್ನಡ ಅವತರಣಿಕೆಯ ಟ್ರೇಲರ್ ಲಾಂಚ್ ಸಂದರ್ಭ. ‘ಗೀತ ಗೋವಿಂದಂ’ ಚಿತ್ರದ ಸೂಪರ್ ಹಿಟ್ ಜೋಡಿಯ ಮತ್ತೊಂದು ಚಿತ್ರ ಎನ್ನುವ ಕಾರಣಕ್ಕೆ ಟಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲೇ ತೀವ್ರ ಕುತೂಹಲ ಹುಟ್ಟಿಸಿರುವ ತೆಲುಗಿನ ‘ಡಿಯರ್ ಕಾಮ್ರೇಡ್’ ಕನ್ನಡದಲ್ಲೂ ಬರುತ್ತಿದೆ. ಮೈತ್ರಿ ಮೂವೀಸ್ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದೆ.
ನಾಲ್ಕು ಭಾಷೆಗಳಲ್ಲಿ ಕಾಮ್ರೇಡ್ ..,
ಹಾಗೆಯೇ ತಮಿಳು, ಮಲಯಾಳಂನಲ್ಲೂ ಡಬ್ ಆಗಿ ಜುಲೈ 26ಕ್ಕೆ ತೆರೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಜುಲೈ 12 ರಂದು ಬೆಂಗಳೂರಿಗೆ ಬಂದಿತ್ತು. ಕನ್ನಡದ ಹುಡುಗಿ ರಶ್ಮಿಕಾ ಜತೆಗೆ ಚಿತ್ರದ ನಾಯಕ ವಿಜಯ್ ದೇವರ ಕೊಂಡ, ನಿರ್ಮಾಪಕ ರವಿ ಹಾಜರಿದ್ದರು. ನಿಗದಿ ಪಡಿಸಿದ್ದ ಸಮಯಕ್ಕಿಂತ ಒಂದೂವರೆ ತಾಸು ತಡವಾಗಿ ಬಂದ ಚಿತ್ರದ ನಾಯಕ-ನಾಯಕಿ ವೇದಿಕೆ ಏರಿ ಮಾತಿಗೆ ಕುಳಿತುಕೊಳ್ಳುವ ಮುನ್ನ ತಡವಾಗಿದ್ದಕ್ಕೆ ಟ್ರಾಫಿಕ್ ಕಾರಣ ಅಂತ ಹೇಳಿ, ಕ್ಷಮೆ ಕೋರಿದರು.
ಮತ್ತೆ ಶುರುವಾಯ್ತು ರಶ್ಮಿಕಾ- ವಿಜಯ್ ಲಿಪ್‌ಲಾಕ್
ಯೂತ್‌ಫುಲ್ ಸಿನಿಮಾ...
‘ ಡಿಯರ್ ಕಾಮ್ರೆಡ್ ಒಂದು ಯೂತ್‌ಫುಲ್ ಸಿನಿಮಾ. ಟೈಟಲ್ ನೋಡಿದವರೆಲ್ಲ ಇದೇನು ಪೊಲಿಟಿಕಲ್ ಸಿನಿಮಾವಾ ಇಲ್ಲವೇ ವಾರ್ ಸಿನಿಮಾವಾ ಅಂತ ಕೇಳುವುದು ಮಾಮೂಲು ಆಗಿದೆ. ಆದರೆ ಇದೊಂದು ಎಮೋಷನಲ್ ಸಿನಿಮಾ. ಇಲ್ಲಿ ಪ್ರೀತಿ, ಪ್ರೇಮವಿದೆ, ಭಾವನೆಗಳ ಮಿಳಿತವಿದೆ. ಸಾಮಾಜಿಕ ಕಾಳಜಿಯಿದೆ. ಹಾಗಾಗಿ ಇದು ಒಂದು ಭಾಷೆ, ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತದೆ’ ಎಂದರು ನಟ ವಿಜಯ್ ದೇವರಕೊಂಡ. ಚಿತ್ರದ ಕುರಿತ ಅವರ ಮಾತುಗಳ ಮಧ್ಯೆ ತೂರಿ ಬಂದಿದ್ದು ಚಿತ್ರದ ಟ್ರೇಲರ್‌ನಲ್ಲಿ ರಿವೀಲ್ ಆದ ಲಿಪ್‌ಲಾಕ್ ಸನ್ನಿವೇಶಗಳ ಕುರಿತ ಪ್ರಶ್ನೆ.
ಲಿಪ್‌ಲಾಕ್ ಅನ್ನೋದೇ ನಾನ್‌ಸೆನ್ಸ್....
ಲಿಪ್‌ಲಾಕ್ ಅಂದ್ರೇನು? ಹೀಗೆ ಹೇಳುವುದೇ ನಾನ್ ಸೆನ್ಸ್. ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ನಾವು ಅಳುತ್ತೇವೆ, ನಗುತ್ತೇವೆ. ಇದು ಕೂಡ ಹಾಗೆಯೇ ಪಾತ್ರದಲ್ಲಿನ ಭಾವನೆಗಳನ್ನು ತೋರಿಸುವುದಕ್ಕೆ ಕಿಸ್ ಮಾಡುವುದನ್ನೇ ಲಿಪ್‌ಲಾಕ್ ಎನ್ನುವುದು ಸರಿಯಲ್ಲ. ನಿರ್ದೇಶಕರು ಪಾತ್ರಕ್ಕೆ ಅದು ಬೇಕು ಎನ್ನುತ್ತಾರೆ. ನಾವು ಅವರು ಹೇಳಿದನ್ನು ಮಾಡುತ್ತೇವೆ ಎನ್ನುವುದು ವಿಜಯ್ ದೇವರ ಕೊಂಡ ಉತ್ತರ. ರಶ್ಮಿಕಾ ಕೂಡ ಹಾಗೆಯೇ ಪ್ರತಿಕ್ರಿಯಿಸಿದರು. ಲಿಪ್ ಲಾಕ್ ಪಾತ್ರಕ್ಕೆ ಸಂಬಂಧಿಸಿದ್ದು ಎಂದರು. ಅವರಿಬ್ಬರ ನಡುವೆ ಲಿಪ್‌ಲಾಕ್ ಸಂಭಾಷಣೆ ನಡೆಯುತ್ತಿದ್ದಾಗ ಕನ್ನಡ ಕಲಿಕೆಯ ಪ್ರಸ್ತಾಪ ಬಂತು. ವಿಜಯ್ ಮಾತಿಗೆ ಪ್ರತಿಕ್ರಿಯಿಸಿದ ರಶ್ಮಿಕಾ, ನಾನು ತೆಲುಗು ಕಲ್ತಿಲ್ವಾ, ಹಂಗೇ ನೀನು ಕನ್ನಡ ಕಲಿ ... ಅಂತ ಕಿವಿ ಮಾತು ಹೇಳಿದ ಪ್ರಸಂಗ ನಡೆಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.