ಚಿತ್ರ ವಿಮರ್ಶೆ: ಆಪರೇಷನ್‌ ನಕ್ಷತ್ರ

By Web DeskFirst Published Jul 13, 2019, 9:59 AM IST
Highlights

ಯಾರು ಯಾರನ್ನು ಮೋಸ ಮಾಡುತ್ತಿದ್ದಾರೆ. ಯಾಕೆ ಮೋಸ ಮಾಡುತ್ತಾರೆ. ಹಾಗೆ ಮೋಸದ ಸಂಚು ರೂಪಿಸುವವರೇ ಕೊನೆಗೆ ಏನಾಗುತ್ತಾರೆ ಎಂಬುದನ್ನು ತಿಳಿಯುವ ಆಸಕ್ತಿ ಇದ್ದರೆ ‘ಆಪರೇಷನ್‌ ನಕ್ಷತ್ರ’ ಚಿತ್ರ ನೋಡಬೇಕು.

ಹಣದ ಮುಂದೆ ಎಲ್ಲವೂ ಶೂನ್ಯ, ಹಣವೇ ಮುಖ್ಯ ಎಂದುಕೊಂಡವರ ಮೈಂಡ್‌ ಗೇಮ್‌ ಹಾಗೂ ಥ್ರಿಲ್ಲರ್‌ ಜರ್ನಿಯನ್ನು ಹೇಳುವ ನಿರ್ದೇಶಕರು, ತಮ್ಮ ಚಿತ್ರಕತೆಯನ್ನು ‘ನಿಧಾನವೇ ಪ್ರಧಾನ’ ಎನ್ನುವ ಸೂತ್ರಕ್ಕೆ ಆರಂಭದಲ್ಲೇ ಒಪ್ಪಿಸಿಬಿಡುತ್ತಾರೆ. ಯಾಕೆಂದರೆ ಸಸ್ಪೆನ್ಸ್‌ ಕತೆಗಳು ನೋಡುಗನ ತಾಳ್ಮೆ ಪರೀಕ್ಷೆಗೆ ಇಳಿದರೆ ಸಹಿಸಿಕೊಳ್ಳುವುದು ಕಷ್ಟ. ಆದರೆ, ನಿರ್ದೇಶಕರು ಒಂದು ಕುತೂಹಲಕಾರಿ ಕತೆಯನ್ನು ಹೇಳುವುದಕ್ಕೆ ಪ್ರಯತ್ನಿಸಿದ್ದಾರೆ ಎಂಬುದು ಗೊತ್ತಾಗುವುದು ವಿರಾಮದ ನಂತರ ಕತೆಯಲ್ಲಿ. ಇವರ ಪ್ರಯತ್ನಕ್ಕೆ ತಾಂತ್ರಿಕ ವಿಭಾಗದಿಂದ ಅಗತ್ಯವಿದ್ದಷ್ಟುಬೆಂಬಲ ಸಿಕ್ಕಿಲ್ಲ. ಹೀಗಾಗಿ ನಿರ್ದೇಶಕನ ಕತೆ ಮತ್ತು ತಾಂತ್ರಿಕತೆಯ ವಿಭಾಗದ ಜೋಡಿಯೂ ಸಮ್ಮಿಶ್ರ ಸರ್ಕಾರದ ಸದ್ಯದ ಪರಿಸ್ಥಿತಿಯನ್ನು ತೆರೆ ಮೇಲೆ ನೆನಪಿಸುತ್ತದೆ. ಇವರಿಬ್ಬರ ನಡುವೆ ಚಿತ್ರದ ಮುಖ್ಯ ಪಾತ್ರಗಳು ತಮ್ಮ ಪಾಡಿಗೆ ಬಂದು ಹೋಗುತ್ತವೆ! ಯಾಕೆಂದರೆ ಕತೆಗೆ ಸೂಕ್ತ ಎನಿಸುವ ಪಾತ್ರಗಳನ್ನು ಸಂಯೋಜನೆ ಮಾಡುವಲ್ಲಿ ನಿರ್ದೇಶಕರು ಎಡವಿದ್ದಾರೆ.

ಚಿತ್ರ ವಿಮರ್ಶೆ: ಯಾನ

ಆತ ಶ್ರೀಮಂತ ಉದ್ಯಮಿ. ಮದುವೆ ವಯಸ್ಸಿಗೆ ಬಂದ ಮಗಳು ಇದ್ದಾಳೆ. ಆದರೆ, ಆಕೆಗೆ ತಾಯಿ ಇಲ್ಲ. ಈತನಿಗೆ ಹೆಂಡತಿ ಇಲ್ಲ. ಇಬ್ಬರ ಕೊರತೆಯನ್ನು ನೀಗಿಸುವ ಭರವಸೆಯೊಂದಿಗೆ ಆ ಉದ್ಯಮಿ ಮನೆಗೆ ಬರುವ ಥರ್ಟಿ ಪ್ಲಸ್‌ ವಯಸ್ಸಿನ ಹೆಣ್ಣು ಮಗಳು ಯಾರು? ಸತ್ತು ಹೋದಳು ಎಂದುಕೊಂಡ ಶ್ರೀಮಂತ ಉದ್ಯಮಿಯ ಒಬ್ಬಳೇ ಮಗಳು ಮತ್ತೆ ಬದುಕಿದ್ದು ಹೇಗೆ? ಮಗಳ ಸಾವು ಕಂಡು ತಾನೂ ಸಾಯುವ ಅಪ್ಪ. ಇದೆಲ್ಲವನ್ನೂ ತನಿಖೆ ಮಾಡುವುದಕ್ಕೆ ಬರುವ ಪೊಲೀಸ್‌ ಅಧಿಕಾರಿ. ಇಲ್ಲಿವರೆಗೂ ಇದ್ದ ಒಳ್ಳೆಯ ಮುಖಗಳು ಒಂದೊಂದಾಗಿ ಕಳಚುತ್ತ ಹೋಗುತ್ತವೆ. ಒಳ್ಳೆಯತನದ ಹಿಂದೆ ದುಷ್ಟತನವೂ ಅಡಗಿದೆ ಎನ್ನುವ ಸತ್ಯ ಹೊರ ಬರುತ್ತದೆ. ಜತೆಗೆ ಇದೆಲ್ಲದಕ್ಕೂ ಒಂದುವರೆ ಸಾವಿರ ಕೋಟಿಯ ಸಂಪತ್ತು. ಅದರ ಮೇಲೆ ಕಣ್ಣಿಟ್ಟಮೂವರು. ಇದಕ್ಕಾಗಿ ನಡೆಯುವ ಐದು ಸಾವುಗಳು. ಇವುಗಳನ್ನು ಬೆನ್ನಟ್ಟಿಹೋದಾಗ ಮಾತ್ರ ಕತೆಯ ತಿರುಳು ನೋಡುಗನಿಗೆ ಸನಿಹವಾಗುತ್ತದೆ. ನಿರ್ದೇಶಕನ ಕಲ್ಪನೆ ಶ್ರೀಮಂತವಾಗಿದೆ. ಆದರೆ, ಆ ಕಲ್ಪನೆಯ ಕತೆಯನ್ನು ಕಟ್ಟುವುದಕ್ಕೆ ಬೇಕಾದ ಅದ್ದೂರಿತನ ಮಾತ್ರ ತೆರೆ ಮೇಲೆ ಕಾಣಲ್ಲ. ಅದರಲ್ಲೂ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಬೇಕಿದ್ದ ಛಾಯಾಗ್ರಹಣವೇ ಕಳಪೆಯಾಗಿ ಕಾಣುತ್ತದೆ.

ಚಿತ್ರ ವಿಮರ್ಶೆ: ಚಿತ್ರಕಥಾ

ನಟನೆ ವಿಚಾರಕ್ಕೆ ಬಂದರೆ ನಟಿ ಯಜ್ಞಾ ಶೆಟ್ಟಿ, ಮೊದಲ ಬಾರಿಗೆ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಅವರದ್ದು ಹೆಚ್ಚುವರಿ ಪ್ಲೇಯರ್‌ನಂತೆ. ನಿರಂಜನ್‌ ಒಡೆಯರ್‌ ಪಾತ್ರದ ವ್ಯಾಪ್ತಿ ದೊಡ್ಡದು. ಲಿಖಿತ್‌ ಸೂರ್ಯ ಪಾತ್ರಕ್ಕೆ ಮತ್ತಷ್ಟುಖಡಕ್‌ ಬೇಕಿತ್ತು. ಆದರೂ ಈ ಪಾತ್ರಗಳನ್ನು ವಿಜಯ್‌ ಭರಮಸಾಗರ ಅವರ ಸಂಭಾಷಣೆಗಳು ಕೊಂಚ ಲಿಫ್ಟ್‌ ಮಾಡಿವೆ.

ತಾರಾಗಣ: ನಿರಂಜನ್‌ ಒಡೆಯರ್‌, ಲಿಖಿತ್‌ ಸೂರ್ಯ, ಯಜ್ಞಾ ಶೆಟ್ಟಿ, ದೀಪಕ್‌ ರಾಜ್‌ಶೆಟ್ಟಿ, ಅದಿತಿ ಪ್ರಭುದೇವ, ಪ್ರಶಾಂತ್‌ ನಟನ, ಶ್ರೀನಿವಾಸ್‌ ಪ್ರಭು, ಗೋವಿಂದೇ ಗೌಡ

ನಿರ್ದೇಶನ: ಮಧುಸೂದನ ಕೆ ಆರ್‌

ನಿರ್ಮಾಣ: 5 ಸ್ಟಾರ್‌ ಫಿಲಮ್ಸ್‌

ಸಂಗೀತ: ವೀರ್‌ ಸಮಥ್‌ರ್‍

ಛಾಯಾಗ್ರಹಣ: ಶಿವಸೀನು

click me!