
ಬಾಲಿವುಡ್ ನಟ ರಣವೀರ್ ಸಿಂಗ್, ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ತಮಗಾದ ಒಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಅವಕಾಶಕ್ಕಾಗಿ ಒಬ್ಬ ಕಾಸ್ಟಿಂಗ್ ಏಜೆಂಟ್, ಲೈಂಗಿಕವಾಗಿ ಸಹಕರಿಸುವಂತೆ ಕೇಳಿದ್ದ ಘಟನೆಯನ್ನು ಅವರು ಬಹಿರಂಗಪಡಿಸಿದ್ದಾರೆ.
ಬಾಲಿವುಡ್‌ನ ಟಾಪ್ ನಟರಲ್ಲಿ ರಣವೀರ್ ಸಿಂಗ್ ಕೂಡ ಒಬ್ಬರು. 'ಬ್ಯಾಂಡ್ ಬಾಜಾ ಬಾರಾತ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಣ್‌ವೀರ್, 2012ರ ಹೊತ್ತಿಗೆ ಬಿ-ಟೌನ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಇಂದು ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿರುವ 'ಧುರಂಧರ್' ಫ್ರಾಂಚೈಸಿ ಮೂಲಕ ಕೋಟಿಗಟ್ಟಲೆ ಸಂಪಾದಿಸುವ ಸ್ಟಾರ್ ಆಗಿ ರಣ್‌ವೀರ್ ಬೆಳೆದಿದ್ದಾರೆ. ಆದರೆ ಈ ಹಂತಕ್ಕೆ ತಲುಪುವುದು ಅವರಿಗೆ ಸುಲಭವಾಗಿರಲಿಲ್ಲ.
ಸಾಕಷ್ಟು ಕಷ್ಟಗಳನ್ನು ದಾಟಿ ಬಂದಿರುವ ಅವರು, ಹಿಂದೆ ತಮಗಾದ ಒಂದು ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದರು. ಇದೀಗ 'ಧುರಂಧರ್ 2' ಸಿನಿಮಾ ಚರ್ಚೆಯಲ್ಲಿರುವುದರಿಂದ, ಆ ಹಳೆಯ ಸಂದರ್ಶನ ಮತ್ತೆ ವೈರಲ್ ಆಗಿದೆ. ತಮ್ಮ ಆರಂಭಿಕ ದಿನಗಳಲ್ಲಿ ತಾವೂ ಕೂಡ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದೆ ಎಂದು ರಣವೀರ್ ಸಿಂಗ್ ಹೇಳಿಕೊಂಡಿದ್ದರು. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದರು.
ಕಾಸ್ಟಿಂಗ್ ಏಜೆಂಟ್ ಒಬ್ಬರ ಗಮನ ಸೆಳೆಯಲು, ತಾನು ಒಂದು ಒಳ್ಳೆಯ ಪೋರ್ಟ್‌ಫೋಲಿಯೋ ತೆಗೆದುಕೊಂಡು ಹೋಗಿದ್ದೆ. ಆದರೆ ಆತ ಅದನ್ನು ನೋಡಲು ಕೂಡ ತಯಾರಿರಲಿಲ್ಲ ಎಂದು ರಣ್‌ವೀರ್ ನೆನಪಿಸಿಕೊಂಡರು. ಆತನಿಗೆ ಬೇರೆಯದೇ ಬೇಕಿತ್ತು ಎಂಬುದನ್ನು ಅವರು ವಿವರಿಸಿದರು. 'ಆತ ನನ್ನ ಪೋರ್ಟ್‌ಫೋಲಿಯೋವನ್ನು ಪಕ್ಕಕ್ಕಿಟ್ಟು, 'ನೀನು ಜಾಣನಾಗಿರಬೇಕು, ಸೆ*ಕ್ಸಿ ಆಗಿರಬೇಕು. ಸ್ಮಾರ್ಟ್ ಮತ್ತು ಸೆ*ಕ್ಸಿಯಾಗಿದ್ದರೆ ಯಾರು ಬೇಕಾದರೂ ಮುಂದೆ ಹೋಗಬಹುದು. ನಾನು ನಿನ್ನನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಬಲ್ಲೆ. ಆಗ ನಿನಗೆ ಬೇಕಾದದ್ದೆಲ್ಲವನ್ನೂ ನೀನು ಕೊಡುತ್ತೀಯಾ. ನನ್ನನ್ನು ಮುಟ್ಟಿಕೋ ಎಂದು ನೀನೇ ಹೇಳುತ್ತೀಯಾ' ಅಂದ.
ಹಾಗೆ ಹೇಳಲು ಆತನಿಗಿದ್ದ ಧೈರ್ಯ ನೋಡಿ ನನಗೆ ಶಾಕ್ ಆಯ್ತು. 'ಸರಿ, ನಾವೇನೂ ಮಾಡಲ್ಲ, ನಿನ್ನನ್ನು ಒಮ್ಮೆ ಮುಟ್ಟಲು ಬಿಡು' ಅಂತಾನೂ ಆತ ಕೇಳಿದ' ಎಂದು ರಣವೀರ್ ಸಿಂಗ್ ಹೇಳಿದರು. ವಾಗ್ವಾದದ ನಡುವೆ ಆತ ತನ್ನ ದೇಹವನ್ನು ಮುಟ್ಟಲು ಪ್ರಯತ್ನಿಸುತ್ತಿದ್ದ. ಆದರೆ ತಾನು ಖಡಾಖಂಡಿತವಾಗಿ ಆಗಲ್ಲ ಎಂದು ಹೇಳಿದಾಗ ಆತ ಅಲ್ಲಿಂದ ಹೊರಟುಹೋದ ಎಂದು ರಣ್‌ವೀರ್ ತಿಳಿಸಿದರು. ನಂತರ, ಅದೇ ವ್ಯಕ್ತಿಯಿಂದ ಬೇರೆ ಹಲವರಿಗೂ ಇಂಥದ್ದೇ ಕೆಟ್ಟ ಅನುಭವಗಳಾಗಿವೆ ಎಂದು ತನಗೆ ತಿಳಿಯಿತು ಎಂದೂ ಅವರು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.