
ಮುಂಬೈ[ನ.18]: ಇಟಲಿಯಲ್ಲಿ ಮದುವೆಯದ ಬಾಲಿವುಡ್‌ನ ತಾರಾ ಜೋಡಿ ದೀಪಿಕಾ ಹಾಗೂ ರಣವೀರ್ ಸಿಂಗ್ ಕೊನೆಗೂ ಮುಂಬೈಗೆ ಬಂದಿಳಿದಿದ್ದಾರೆ. ಹಣೆಗೆ ಕಡುಗೆಂಪು ಬಣ್ಣದ ಸಿಂಧೂರವಿಟ್ಟು ಕಂಗೊಳಿಸುತ್ತಿದ್ದ ದೀಪಿಕಾ ತನ್ನ ಗಂಡ ರಣವೀರ್ ಸಿಂಗ್ ಕೈ ಹಿಡಿದು ಅಭಿಮಾನಿಗಳೆದುರು ಬಂದು ಧನ್ಯವಾದ ತಿಳಿಸಿದ್ದಾರೆ.
ಗುರುವಾರವಷ್ಟೇ ಈ ನವ ದಂಪತಿಯ ಮದುವೆ ಫೋಟೋಗಳು ಎಲ್ಲರ ಕಣ್ಮನ ಸೆಳೆದಿದ್ದವು. ಬಾಲಿವುಡ್ ತಾರೆಯರ ಮದುವೆಯು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಆದರೆ ಈ ಲವ್ ಬರ್ಡ್ಸ್ ಮದುವೆಯು ಬಹಳಷ್ಟು ವ್ಯವಸ್ಥಿತವಾಗಿ ಹಾಗೂ ಖಾಸಗಿಯಾಗಿ ನಡೆದಿದ್ದು, ವಧು ವರರ ಫೋಟೋಗಳು ಒಂದೆಡೆಯೂ ಯಾರೊಬ್ಬರಿಗೂ ಸಿಕ್ಕಿರಲಿಲ್ಲ. ಇಟಲಿಯಲ್ಲಿ ಮದುವೆಯಾಗಿ ಇಂದು ಮುಂಬೈಗೆ ಅಗಮಿಸಿರುವ ಈ ಜೋಡಿ ಹಕ್ಕಿಯ ಆರತಕ್ಷತೆ ಕಾರ್ಯಕ್ರಮವು 21ರಂದು ಬೆಂಗಳೂರು ಹಾಗೂ 28ರಂದು ಮುಂಬೈನಲ್ಲಿ ನಡೆಯಲಿದೆ. ಕುಟುಂಬ ಸದಸ್ಯರು, ಬಾಲಿವುಡ್ ಸ್ಟಾರ್ಸ್ ಸೇರಿದಂತೆ ಅನೇಕ ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.