KGF ನೋಡಿ ಭೇಷ್ ಎಂದ 'ಬಾಹುಬಲಿ' ನಟ!

Published : Feb 11, 2019, 11:30 AM IST
KGF ನೋಡಿ ಭೇಷ್ ಎಂದ 'ಬಾಹುಬಲಿ' ನಟ!

ಸಾರಾಂಶ

ಪಂಚ ಭಾಷೆಗಳಲ್ಲಿ ಯಶ್ ನಟನೆಯ ಕೆಜಿಎಫ್ ತೆರೆ ಕಂಡು 50 ದಿನಗಳನ್ನು ಪೂರೈಸಿದೆ. ಇದೀಗ ಈ ಚಿತ್ರವನ್ನು ವೀಕ್ಷಿಸಿದ 'ಬಾಹುಬಲಿ'ಯ ಈ ನಟ ಹೇಳಿದ್ದೇನು ಗೊತ್ತಾ?

ಕನ್ನಡ ಚಿತ್ರರಂಗವನ್ನೇ ಉತ್ತುಂಗಕ್ಕೇರಿಸಿದ ಸಿನಿಮಾ ಕೆಜಿಎಫ್. ಪರಭಾಷ ನಟ-ನಟಿಯರಂತೂ ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ಗೆ ಫುಲ್ ಬೋಲ್ಡ್ ಆಗಿದ್ದಾರೆ. ಈ KGF ನೋಡಿದ ಬಾಹುಬಲಿಯ ಈ ನಟ ಸಹ ಬೆರಗಾಗಿದ್ದಾರೆ.

ಕೋಟ್ಯಾಂತರ ಜನರ ಗಮನ ಸೆಳೆದು, ಬಾಕ್ಸ್ ಆಫೀಸ್‌ನಲ್ಲಿ ಕೋಟಿಗಟ್ಟಲೆ ಕಲೆಕ್ಷನ್ ಮಾಡಿದ ಸಿನಿಮಾ ಕೆಜಿಎಫ್. ಆ ಮೂಲಕ ಕನ್ನಡ ಚಿತ್ರವನ್ನು ಪರಭಾಷಿಗರೂ ಪ್ರೀತಿಸುವಂತೆ ಮಾಡಬೇಕೆಂದುಕೊಂಡಿದ್ದ ಯಶ್ ಕನಸು ನನಸಾಗಿದೆ.

ಕೆಜಿಎಫ್ ಚಿತ್ರ ವೀಕ್ಷಿಸಿದ ತಮಿಳು ನಟ ಥಲಾಪತಿ ವಿಜಯ್ 'ಇದು ಅದ್ಭುತ ಚಿತ್ರ' ಎಂದಿದ್ದರು. ಇದೀಗ 'ಬಾಹುಬಲಿ'ಯ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿಯೂ ಕೆಜಿಎಫ್ ರಿಲೀಸ್ ಆಗಿ 50 ದಿನಗಳ ನಂತರ ವೀಕ್ಷಿಸಿ, ಫುಲ್ ಖುಷಿಯಾಗಿದ್ದಾರೆ. ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ರಾಣಾ, 'ನನಗೆ ಗೊತ್ತು ನಾನು ಈ ಪಾರ್ಟಿಗೆ ತುಂಬಾ ಲೇಟ್ ಅಂತ. ಅಂತೂ ಕೆಜಿಎಫ್ ನೋಡಿದೆ. ಸಿಕ್ಕಾಪಟ್ಟೆ ಸೂಪರ್ ಆಗಿದೆ. ಯಶ್ ಹಾಗೂ ಪ್ರಶಾಂತ್‌ಗೆ ಶುಭಾಶಯಗಳು. ಅದರಲ್ಲೂ ಧೀರ, ಧೀರ, ಧೀರ...ಈ ಸುಲ್ತಾನಾ ಹಾಡಂತೂ ಸೂಪರ್...' ಎಂದಿದ್ದಾರೆ.

 

ರಾಣಾ ಟ್ವೀಟಿಗೆ ಪ್ರತಿಕ್ರಿಯೆ ನೀಡಿರುವ ರಾಕಿಂಗ್ ಸ್ಟಾರ್ ಯಶ್, 'Better late than never. ಥ್ಯಾಂಕ್ ಯು ರಾಣಾ. ನೀವು ಸದಾ ನಮ್ಮ ಬೆನ್ನೆಲುಬಾಗಿ ನಿಲ್ಲುವಿರಿ. ಬೇಗ ಸಿಗೋಣ ಬ್ರೋ. Cheers' ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್