
ಸದ್ಯಕ್ಕೆ ನಟಿ ರಮ್ಯಾ (Ramya) ಹಾಗೂ ನಟ ದರ್ಶನ್ (Darshan Thoogudeepa) ಫ್ಯಾನ್ಸ್ 'ಸೋಷಿಯಲ್ ಮೀಡಿಯಾ ವಾರ್' ಟ್ರೆಂಡಿಂಗ್ ಆಗ್ತಿದೆ ಅಂತ ಎಲ್ಲರಿಗೂ ಗೊತ್ತು. ಡಾ ರಾಜ್‌ಕುಮಾರ್ ಕುಟುಂಬ, ನಟ ಪ್ರಥಮ್, ನಟ ಅಹಿಂಸಾ ಚೇತನ್ ಹಾಗೂ ನಟ ಲೂಸ್ ಮಾದ ಯೋಗೇಶ್ ಸೇರಿದಂತೆ, ಹಲವರು ರಮ್ಯಾ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ನಟಿ ರಮ್ಯಾ ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ತಮಗೆ ಸಪೋರ್ಟ್ ಮಾಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ರಮ್ಯಾ 'ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು, ನಾನು ಸದಾ ಚಿರಋಣಿ' ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ನಟಿ ರಮ್ಯಾ ಹಾಗೂ ನಟ ದರ್ಶನ್ (Darshan Thoogudeepa) ಫ್ಯಾನ್ಸ್ ಗಲಾಟೆ ಬಗ್ಗೆ ಈಗ ಕರ್ನಾಟಕದಾದ್ಯಂತ ಸುದ್ದಿಯಾಗಿದೆ. ನಟಿ ರಮ್ಯಾ ಅವರು 'ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿ, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ 'ಭಾರತದ ಸಾಮಾನ್ಯ ಜನರಿಗೂ ನ್ಯಾಯ ಸಿಗುವ ಆಶಾಕಿರಣ ಮೂಡಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ' ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದರು. ಅದರಿಂದ ರೊಚ್ಚಿಗೆದ್ದ ನಟ ದರ್ಶನ್ ಫ್ಯಾನ್ಸ್, 'ಡಿ ಬಾಸ್ ಫ್ಯಾನ್ಸ್' ಹೆಸರಿನ ಕೆಲವು ಫೇಕ್ ಅಕೌಂಟ್‌ಗಳಿಂದ ನಟಿ ರಮ್ಯಾಗೆ ಬೈದು ಕೆಟ್ಟ ಅಂದರೆ ಅಶ್ಲೀಲ ಮೆಸೇಜ್ ಮಾಡಿದ್ದರು.
ಇದರಿಂದ ಸಿಟ್ಟಿಗೆದ್ದ ನಟಿ ರಮ್ಯಾ ಅವರು ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ಸಮರ ಸಾರಿದ್ದಾರೆ. ಮೊದಲಿಗೆ ಮಹಿಳಾ ಆಯೋಗಕ್ಕೆ ದೂರು ನೀಡಿರುವ ನಟಿ ರಮ್ಯಾ, ಆ ಬಳಿಕ ಕಮೀಷನರ್‌ಗೆ ದೂರು ನೀಡಿದ್ದಾರೆ. 43 ದರ್ಶನ್ ಫ್ಯಾನ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಟ ಶಿವರಾಜ್‌ಕುಮಾರ್ ಸೇರಿದಂತೆ, ದೊಡ್ಮನೆ ಕುಟುಂಬ, ನಟ ಪ್ರಥಮ್ ಹಾಗೂ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ನಟಿ ರಮ್ಯಾ ಪರ ಬ್ಯಾಟ್ ಬೀಸಿದ್ದಾರೆ. ಆದರೆ, ದರ್ಶನ್ ಪತ್ನಿ ವಿಯಲಕ್ಷ್ಮೀ ಅವರು ನಟಿ ರಮ್ಯಾ ವಿರುದ್ಧ ಸಿಟ್ಟಿಗೆದ್ದಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದಂತೆ, ಕನ್ನಡದ ಖ್ಯಾತ ನಿರ್ಮಾಪಕರಾದ ಕೆ ಮಂಜು (K Manju) ಅವರು ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ ನೋಡಿ.. ಹೌದು, ಕೆ ಮಂಜು ಅವರು ದರ್ಶನ್ ಫ್ಯಾನ್ಸ್ ಪರ ಮಾತನಾಡಿಲ್ಲ. ಆದರೆ, ನಟಿ ರಮ್ಯಾ ಮೇಲೆ ಸಣ್ಣ ಆರೋಪ ಮಾಡಿದ್ದಾರೆ. ರಮ್ಯಾ ದರ್ಶನ್ ಫ್ಯಾನ್ಸ್ ಗಲಾಟೆ ಬಗ್ಗೆ ನಿರ್ಮಾಪಕ ಕೆ ಮಂಜು ಹೇಳಿಕೆ ಹೀಗಿದೆ.. 'ರಮ್ಯಾ ಅವ್ರು ಸ್ವಲ್ಪ ಯೋಚನೆ ಮಾಡಬೇಕಿತ್ತು. ಎಲ್ಲದಕ್ಕೂ ಮೊದಲು, ನಟ ದರ್ಶನ್ ಬಗ್ಗೆ ಅವ್ರು ಪೋಸ್ಟ್ ಮಾಡಿದು ತಪ್ಪು.. ರೇಣುಕಾಸ್ವಾಮಿ ಕೇಸ್ ಆದಾಗ ಎಲ್ಲರೂ ಮಾತಾಡಿದ್ದು ಆಗಿದೆ. ಈಗ ಈ ಕೇಸ್ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಸದ್ಯ ನ್ಯಾಯಾಲಯದಲ್ಲಿ ಇರುವ ಕೇಸ್ ಬಗ್ಗೆ ಈಗ ಮತ್ತೆ ಮಾತಾಡಬಾರದಿತ್ತು.
ರಮ್ಯಾ ಅವರು ಈಗ ಮೆಸೇಜ್ ಮಾಡಿದ್ದಕ್ಕೆ ಈಗ ಹೀಗೆಲ್ಲಾ ಆಗಿದೆ. ಆದರೆ, ರಮ್ಯಾ ಪೋಸ್ಟ್‌ಗೆ ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ದು ಕೂಡ ತಪ್ಪು . ಅಭಿಮಾನಿಗಳ ಅತಿರೇಕದ ವರ್ತನೆ ಸರಿ ಅಲ್ಲ. ಯಾವ ಸ್ಟಾರ್ ಆದ್ರೂ ತಮ್ಮ ಅಭಿಮಾನಿಗಳಿಗೆ ಗಲಾಟೆ ಮಾಡಿ ಅಂತ ಹೇಳಲ್ಲ. ರಮ್ಯಾ ಹೇಳಿದ ತಕ್ಷಣ ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತಾ? ಹೀಗಂತ ಕನ್ನಡದ ನಿರ್ಮಾಪಕ ಕೆ. ಮಂಜು ಅವರು ರಮ್ಯಾ ಮಾಡಿದ್ದು ಹಾಗೂ ಫ್ಯಾನ್ಸ್ ಮಾಡಿದ್ದು ಎರಡೂ ತಪ್ಪು ಅಂತ ಹೇಳಿದ್ದಾರೆ.
ಇತ್ತ, ದರ್ಶನ್ ಲೈಫ್ ಮತ್ತೆ ಕೇಸ್ ವಿಚಾರಣೆಯ ಮರುತನಿಖೆ ಹಂತಕ್ಕೆ ತಲುಪಿದ್ದು, ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ದಂಪತಿಗಳು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯಕ್ಕೆ ಎಲ್ಲದಕ್ಕೂ ದೇವರ ಮೊರೆ ಹೋಗಿರುವ ದರ್ಶನ್-ವಿಜಯಲಕ್ಷ್ಮೀ ದಂಪತಿ,
ಅಸ್ಸಾಂನ ಕಾಮಾಕ್ಯದೇವಿ ದೇವಾಲಯಕ್ಕೆ ಭೇಟಿ ನೀಡಿ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರು ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ವಿಜಯಲಕ್ಷ್ಮೀ ಅವರು 'ನಿಮ್ಮನ್ನು ಜನರು ಅದೆಷ್ಟೇ ಕೆಳಕ್ಕೆ ತಳ್ಳಲು ನೋಡಿದರೂ ಕೂಡ, ದೇವರು ನಿಮ್ಮನ್ನು ಮೇಲ್ಮಟ್ಟಕ್ಕೆ ಕರೆದುಕೊಂಡು ಹೋಗುತ್ತಾನೆ. ನಿಮಗೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ...' ಎಂದು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ಮಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತ, ದರ್ಶನ್ ಪ್ರೇಯಸಿ ಎನ್ನಲಾಗಿರುವ ಪವಿತ್ರಾ ಗೌಡ ಅವರು 'ಮನುಷ್ಯರು ಬಣ್ಣ ಬದಲಾಯಿಸಿದರೇನು.. ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ..' ಎಂದು ತಮ್ಮ ಸೋಷಿಯಲ್ ಮೀಡಿಯಾಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದೇ ಪೋಸ್ಟ್ ಕೆಳಗಡೆ, 'MY Silence is not weekness.. Its fairh in God's Justice...' ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅವರಿಬ್ಬರ ಸೋಷಿಯಲ್ ಜಟಾಪಟಿ ಅದರಲ್ಲಿ ಆಸ್ಕ್ತಿ ಇರುವವರಿಗೆ ಖಂಡಿತ ಕುತೂಹಲ ಕೆರಳಿಸುತ್ತಿದೆ. ಈ ಇಬ್ಬರ ಪೋಸ್ಟ್ ಮೂಲಕ ಯಾವ ಸಂಗತಿ ಜಗತ್ತಿಗೆ ಅರ್ಥವಾಗುತ್ತಿದೆ..?
ಸದ್ಯ ನಟಿ ರಮ್ಯಾ (Ramya) ಹಾಗೂ ದರ್ಶನ್ ಫ್ಯಾನ್ಸ್ (Darshan Fans) ಸೋಷಿಯಲ್ ಮೀಡಿಯಾ ವಾರ್‌ಗೆ ಇದೀಗ ನಟ ಲೂಸ್ ಮಾದ ಯೋಗೇಶ್ (Actor Loose Mada Yogesh ) ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಮಾತನ್ನಾಡಿರುವ ನಟ ಯೋಗಿ 'ಹೆಣ್ಣು ಮಕ್ಕಳಿಗೆ ಅಶ್ಲೀಲ ಸಂದೇಶ ಕಳಿಸೋರನ್ನು ಕರೆದುಕೊಂಡು ಬಂದು ಚಪ್ಪಲಿಯಲ್ಲಿ ಹೊಡಿಬೇಕು' ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಕೆಟ್ಟ ಸಂದೇಶ ಕಳಿಸೋರ ಬಗ್ಗೆ ನಟ ಯೋಗಿ ಕೋಪಗೊಂಡಿದ್ದಾರೆ.
ಈ ಬಗ್ಗೆ ಹೇಳಿರುವ ನಟ ಯೋಗಿ 'ಅವರಿಗೆ ಜ್ಞಾನನೇ ಇಲ್ಲ..ಸ್ಟಾರ್ ವಾರ್ ಎಲ್ಲಾ ಕಡೆ ಕಾಮನ್.. ಆದರೆ ಪರ್ಸನಲ್ ಆಗಿ ಟಾರ್ಗೆಟ್ ಮಾಡಲಾಗ್ತಿದೆ. ರಮ್ಯಾ ಅವರು ಕಂಪ್ಲೀಟ್ ಕೊಟ್ಟಿದ್ದು ಒಳ್ಳೆಯದು. ದರ್ಶನ್ ಅವರು ಮುಂದೆ ಬಂದು ಫ್ಯಾನ್ಸ್ ಗೆ ಹೀಗೆ ಮಾಡ್ಬೇಡಿ ಅಂದ್ರೆ ಒಳ್ಳೆಯದು. ಇಂಥದ್ದನೆಲ್ಲಾ ನಟ ದರ್ಶನ್ ಅವರು ಹೇಳಿ ಮಾಡಿಸೋ ವ್ಯಕ್ತಿ ಅಲ್ಲ... ಮುಖ ಕಾಣ್ದಿರೋ ಅಕೌಂಟ್ ನಲ್ಲಿ ಈ ಥರ ಬೇವರ್ಸಿ ಕೆಲಸ ಮಾಡೋವರಿಗೆ ಏನ್ ಹೇಳೋದು? ನನಗೂ ಹೀಗೆ ಆಗಿತ್ತು , ಇಂಡಸ್ಟ್ರಿಗೆ ಕಾಲಿಟ್ಟ ಹೊಸದರಲ್ಲಿ. ಯಾರೋ ಒಬ್ರು ನನಗೆ ಬ್ಲೇಡ್ ಹಾಕ್ಬಿಟ್ಟಿದ್ರು..' ಎಂದು ನಟ ಯೋಗೇಶ್ ಹೇಳಿದ್ದಾರೆ.
ಇವೆಲ್ಲಾ ಆಯ್ತು.. ಇದೀಗ, ನಟಿ ರಮ್ಯಾ ಹಾಗೂ ದರ್ಶನ್ ಫ್ಯಾನ್ಸ್ ಗಲಾಟೆಗೆ ಫಿಲಂ ಚೇಂಬರ್ ಕೂಡ ಎಂಟ್ರಿ ಕೊಟ್ಟಿದೆ. ಅತ್ತ ನಟ ಪ್ರಥಮ್ ದರ್ಶನ್ ಫ್ಯಾನ್ಸ್‌ಗೆ ಬುದ್ಧಿ ಕಲಿಸದೇ ಬಿಡುವುದಿಲ್ಲ' ಎಂದು ವಾರ್ನ್ ಮಾಡಿದ್ದಾರೆ. ನಟಿ ರಮ್ಯಾ ಅವರಂತೂ 'ಸೋಷಿಯಲ್ ಮೀಡಿಯಾಗಳಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ಕಾಮೆಂಟ್ ಪೋಸ್ಟ್ ಮಾಡೋದು ನಿಲ್ಲುವವರೆಗೂ ನಾನು ಈ ಹೋರಾಟದಿಂದ ಯಾವತ್ತೂ ಹಿಂದೆ ಸರಿಯವುದಿಲ್ಲ; ಎಂದಿದ್ದಾರೆ. ಮುಂದೇನು ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.