
ಮುಂಬೈ (ಜೂ. 28) ತೊಂದ್ರೆ ಇಲ್ಲ ಪಂಕಜ ಐಟಂ ಹಾಡು, ಕಾಂಟಾ ಲಗಾ ಸೇರಿದಂತೆ ಹಲವು ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದ ನಟಿ ಶೆಫಾಲಿ ಜರಿವಾಲ ನಿಧನ ಹಲವರನ್ನು ಬೆಚ್ಚಿ ಬೀಳಿಸಿತ್ತು. 42ರ ಹರೆಯದ ಶೆಫಾಲಿ ನಿಧನಕ್ಕೆ ಕುಟುಂಬಸ್ಥರು, ಅಭಿಮಾನಿಗಳು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಶೆಫಾಲಿ ಜರಿವಾಲ ಸಿನಿಮಾ, ಬಿಗ್ ಬಾಸ್ ರಿಯಾಲಿಟಿ ಶೋ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರೆ, ಶೆಫಾಲಿ ತಂಗಿ ಶಿವಾನಿ ಜರಿವಾಲ ಮಾತ್ರ ಸಿನಿಮಾ ಸೇರಿದಂತೆ ಮನರಂಜನಾ ಕ್ಷೇತ್ರದಿಂದ ದೂರವಿದ್ದಾರೆ.
ಶಿವಾನಿ ಜರಿವಾಲ ಏನು ಮಾಡುತ್ತಿದ್ದಾರೆ?
ಶಿವಾನಿ ಜರಿವಾಲ, ನಟಿ ಶೆಫಾಲಿ ಜರಿವಾಲರ ಕಿರಿಯ ಸಹೋದರಿ. ಶಿವಾನಿ ಯಾವತ್ತೂ ಎಂಟರ್ಟೈನ್ಮೆಂಟ್ ಇಂಡಸ್ಟ್ರಿ ಕುರಿತು ಆಸಕ್ತಿ ತೋರಿದವರಲ್ಲ. ಜೊತೆಗೆ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ. ಅಕ್ಕನಂತೆ ಸುಂದರಿಯಾಗಿರುವ ಶಿವಾನಿ ಸೈಬರ್ ಸೆಕ್ಯೂರಿಟಿ ಕನ್ಸಲ್ಟಿಂಗ್ ಸರ್ವೀಸ್ ಎಜೆನ್ಸಿ ಸಿಪಿಎಕ್ಸ್ ಸಂಸ್ಥೆಯ ಡೈರೆಕ್ಟ್ ಆಗಿದ್ದಾರೆ. ಶಿವಾನಿಯ ಲಿಂಕ್ಡ್‌ಇನ್ ಪ್ರೊಫೈಲ್ ಆಕೆಯ ಉದ್ಯೋಗ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಿದೆ.
ಶಿವಾನಿ ಜರಿವಾಲ ಲಿಂಕ್ಡ್ಇನ್ ಪ್ರೊಫೈಲ್ ಮಾಹಿತಿ ಪ್ರಕಾರ, ಸರ್ದಾರ ಪಟೇಲ್ ಎಂಜಿನೀಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ ಶಿವಾನಿ ಜರಿವಾಲ ಎನ್‌ವೈಯು ಸ್ಕೂಲ್ ಆಫ್ ಬ್ಯೂಸಿನೆಸ್‌ನಲ್ಲಿ ಇನ್ಫೋಮೇಶನ್ ಸಿಸ್ಟಮ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಶಿವಾನಿ ಎಲ್ಲಿ ನೆಲೆಸಿದ್ದಾರೆ?
ಶೆಫಾಲಿ ಜರಿವಾಲ ಪತಿ ಜೊತೆ ಮುಂಬೈನಲ್ಲಿ ನಲೆಸಿದ್ದಾರೆ. ಆದರೆ ಶಿವಾನಿ ಜರಿವಾಲ ಆಕೆಯ ಲಿಂಕ್ಡ್‌ಇನ್ ಪ್ರೊಫೈಲ್ ಮಾಹಿತಿ ಪ್ರಕಾರ ದುಬೈನಲ್ಲಿ ನೆಲೆಸಿದ್ದಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ಇತರ ವೇದಿಕೆಗಳಲ್ಲೂ ಶಿವಾನಿ ಹೆಚ್ಚು ಕಾಣಿಸಿಕೊಂಡಿಲ್ಲ. ಶೆಫಾಲಿ ಇನ್‌ಸ್ಟಾಗ್ರಾಂ ಪ್ರೊಫೈಲ್ ಪ್ರೈವೇಟ್. ಇನ್ನು ಎಕ್ಸ್ ಸೇರಿದಂತೆ ಇತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಂದರೂ ಶಿವಾನಿ ದೂರವಿದ್ದಾರೆ.
ಅಕ್ಕನ ಸಾವಿನಿಂದ ಆಘಾತಗೊಂಡ ಶಿವಾನಿ
ಅಕ್ಕ ಶೆಫಾಲಿ ಜರಿವಾಲ ಹಠಾತ್ ನಿಧನದಿಂದ ಶಿವಾನಿ ಜರಿವಾಲ ಆಘಾತಗೊಂಡಿದ್ದಾರೆ. ಸಾವಿನ ಹಿಂದಿನ ದಿನ ಶಿವಾನಿ ಜೊತೆ ಮಾತನಾಡಿದ್ದರು. ಆದರೆ ಇದೀಗ ಅಕ್ಕ ಇನ್ನಿಲ್ಲ ಅನ್ನೋದು ಶಿವಾನಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಶೆಫಾಲಿ ಸಾವಿಗೆ ಕಾರಣವೇನು?
ಶೆಫಾಲಿ ಜರಿವಾಲ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವದಿಯಾಗಿದೆ. ಮನೆಯಲ್ಲಿ ಕುಸಿದು ಬಿದ್ದ ಶೆಫಾಲಿಯನ್ನು ಪತಿ ತಕ್ಷಣವೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ಶಫಾಲಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಹೃದಯಾಘಾತದಿಂದ ಶೆಫಾಲಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಶೆಫಾಲಿ ಸಾವಿನ ಹಿಂದೆ ಬೇರೆ ಕಾರಣ ಇದೆಯಾ ಅನ್ನೋದು ಪೊಲೀಸರು ತನಿಖೆ ಮೂಲಕ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಶೆಫಾಲಿ ಸಾವು ಕೆಲ ಅನುಮಾನಗಳನ್ನು ಹುಟ್ಟು ಹಾಕಿದೆ. ಶೆಫಾಲಿ ಸೌಂದರ್ಯ ವರ್ಧಕ ಚಿಕಿತ್ಸೆ ಪಡೆಯುತ್ತಿದ್ದರು. ವಯಸ್ಸು ಹೆಚ್ಚಾದರೂ ಯುವತಿಯಂತೆ ಕಾಣಿಸಲು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದರ ನಡುವೆ ಶೆಫಾಲಿ ಸಾವಿನ ಹಿಂದೆ ನಿಗೂಢ ಕಾರಣಗಳಿರಬಹುದು ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಊಹಾಪೂಹಗಳಿಗೆ ಸ್ಪಷ್ಟ ಉತ್ತರ ಪತ್ತೆ ಹಚ್ಚಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.