‘ರಾಮಾಯಣ’ದಲ್ಲಿ ರಾವಣನ ಗರ್ಜನೆ ಯಾರದ್ದು? ಯಶ್ ವಾಯ್ಸ್ ಬಗ್ಗೆ ಪ್ರಜ್ವಲ್ ದೇವರಾಜ್ ಕೊಟ್ರು ಸ್ಪಷ್ಟನೆ!

Published : Aug 20, 2026, 04:42 PM IST
Yash Ramayana

ಸಾರಾಂಶ

Yash Ravana Voice: ‘ರಾಮಾಯಣ’ ಟ್ರೇಲರ್‌ನಲ್ಲಿ ರಾವಣನಾಗಿ ಯಶ್ ಅವರ ಗಂಭೀರ ಧ್ವನಿ ಕೇಳಿಬಂದಿತ್ತು. ಈ ಧ್ವನಿ ದೇವರಾಜ್ ಅವರದ್ದು ಎಂಬ ವದಂತಿಗೆ ಪ್ರಜ್ವಲ್ ದೇವರಾಜ್ ಸ್ಪಷ್ಟನೆ ನೀಡಿದ್ದಾರೆ.

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಘೋಷಣೆಯಾದ ದಿನದಿಂದಲೂ ಒಂದಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರ ಲುಕ್ ಮತ್ತು ಗಂಭೀರ ಧ್ವನಿ ಅಭಿಮಾನಿಗಳ ಗಮನ ಸೆಳೆದಿತ್ತು. ಆದರೆ ಈ ಧ್ವನಿ ಯಶ್ ಅವರದ್ದೇನಾ ಅಥವಾ ಬೇರೆ ಯಾರದ್ದಾದರೂ ಧ್ವನಿಯನ್ನು ಬಳಸಲಾಗಿದೆಯಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿತ್ತು.

ಕೆಲವರು ಟ್ರೇಲರ್‌ನಲ್ಲಿ ಕೇಳಿಬಂದ ರಾವಣನ ಗಂಭೀರ ಗರ್ಜನೆ ಸ್ಯಾಂಡಲ್‌ವುಡ್‌ನ ಹಿರಿಯ ನಟ ದೇವರಾಜ್ ಅವರದ್ದು ಎಂದು ಹೇಳಿಕೊಂಡಿದ್ದರು. ಈ ವದಂತಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿತ್ತು. ಇದೀಗ ನಟ ಪ್ರಜ್ವಲ್ ದೇವರಾಜ್ ಈ ಗೊಂದಲಕ್ಕೆ ಸ್ಪಷ್ಟನೆ ನೀಡಿದ್ದು, ರಾವಣನ ಧ್ವನಿ ಸ್ವತಃ ಯಶ್ ಅವರದ್ದೇ ಎಂದು ತಿಳಿಸಿದ್ದಾರೆ.

‘ಯಶ್ ಅವರ ಧ್ವನಿಯೇ ಅದು’ ಎಂದ ಪ್ರಜ್ವಲ್

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಚಾರದ ಬಗ್ಗೆ ಮಾತನಾಡಿರುವ ಪ್ರಜ್ವಲ್ ದೇವರಾಜ್, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿ ನಿಜವಲ್ಲ ಎಂದು ಹೇಳಿದ್ದಾರೆ. ವದಂತಿ ಹರಡಿದ ಬಳಿಕ ತಾವೇ ಯಶ್ ಅವರಿಗೆ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದಾಗಿ ಪ್ರಜ್ವಲ್ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ತಂದೆ, ಹಿರಿಯ ನಟ ದೇವರಾಜ್ ಅವರೊಂದಿಗೂ ಯಶ್ ಮಾತನಾಡಿದ್ದರು. ಹಿರಿಯ ನಟ ದೇವರಾಜ್ ಅವರ ಗಂಭೀರ ಧ್ವನಿಗೆ ತಮ್ಮ ಧ್ವನಿಯನ್ನು ಹೋಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಯಶ್ ಹೇಳಿದ್ದಾಗಿ ಪ್ರಜ್ವಲ್ ಬಹಿರಂಗಪಡಿಸಿದ್ದಾರೆ. ಇದರಿಂದ ‘ರಾಮಾಯಣ’ ಟ್ರೇಲರ್‌ನಲ್ಲಿ ಕೇಳಿಬಂದ ಆ ಗಂಭೀರ ಕಂಠ ಬೇರೆ ಯಾರದ್ದೂ ಅಲ್ಲ, ಯಶ್ ಅವರದ್ದೇ ಎಂಬುದು ಸ್ಪಷ್ಟವಾಗಿದೆ.

ರಾವಣನ ಪಾತ್ರಕ್ಕೆ ಯಶ್ ಧ್ವನಿಯೇ ಮತ್ತಷ್ಟು ಪ್ಲಸ್?

ರಾವಣನ ಪಾತ್ರಕ್ಕೆ ಯಶ್ ಅವರ ಗಂಭೀರ ಹಾಗೂ ನೈಸರ್ಗಿಕ ಧ್ವನಿ ಮತ್ತಷ್ಟು ತೂಕ ನೀಡಿದೆ ಎಂಬ ಅಭಿಪ್ರಾಯ ಅಭಿಮಾನಿಗಳದ್ದು. ಟ್ರೇಲರ್‌ನಲ್ಲಿ ಯಶ್ ಅವರ ಲುಕ್ ಜೊತೆಗೆ ಅವರ ವಾಯ್ಸ್ ಮಾಡಿರುವ ಇಂಪ್ಯಾಕ್ಟ್ ಕೂಡ ಗಮನ ಸೆಳೆದಿದೆ. ವಿಶೇಷವಾಗಿ ರಾವಣನ ಪಾತ್ರದ ಗಾಂಭೀರ್ಯಕ್ಕೆ ಹೊಂದುವಂತಹ ಕಂಠ ಯಶ್ ಅವರಲ್ಲಿರುವುದು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಇದೀಗ ಧ್ವನಿಯ ಕುರಿತಿದ್ದ ಗೊಂದಲಕ್ಕೂ ತೆರೆ ಬಿದ್ದಿರುವುದರಿಂದ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

2026ರಲ್ಲಿ ಯಶ್‌ ಎರಡು ದೊಡ್ಡ ಸಿನಿಮಾಗಳು

ಯಶ್ ಅಭಿಮಾನಿಗಳಿಗೆ 2026 ಮತ್ತೊಂದು ವಿಶೇಷ ವರ್ಷವಾಗಲಿದೆ. ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ. ಮತ್ತೊಂದೆಡೆ ‘ರಾಮಾಯಣ’ ಕೂಡ ಈ ವರ್ಷದ ದೀಪಾವಳಿ ವೇಳೆಗೆ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಹಳ್ಳಿಕಾರ್ ಒಡೆಯ’ ವರ್ತೂರು ಸಂತೋಷ್‌ಗೆ 2ನೇ ಮದುವೆ: ಪ್ರೀತಿಯ ಕಥೆ ಬಿಚ್ಚಿಟ್ಟ ಬಿಗ್ ಬಾಸ್ ಸ್ಟಾರ್
Toxic Countdown Day 06: ಟಾಕ್ಸಿಕ್ ಕೌಂಟ್‌ಡೌನ್ 06.. ಇಂಗ್ಲಿಷ್ ಟ್ರೇಲರ್ ಬಿಡುಗಡೆಗೆ ಬಳಿಕ ಯಶ್ ಸಿನಿಮಾದ ಕ್ರೇಜ್ ಹೇಗಿದೆ? ಈ ಸ್ಟೋರಿ ನೋಡಿ!