Toxic Countdown Day 06: ಟಾಕ್ಸಿಕ್ ಕೌಂಟ್‌ಡೌನ್ 06.. ಇಂಗ್ಲಿಷ್ ಟ್ರೇಲರ್ ಬಿಡುಗಡೆಗೆ ಬಳಿಕ ಯಶ್ ಸಿನಿಮಾದ ಕ್ರೇಜ್ ಹೇಗಿದೆ? ಈ ಸ್ಟೋರಿ ನೋಡಿ!

Published : Aug 20, 2026, 12:53 PM IST
Yash Toxic

ಸಾರಾಂಶ

ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದಾರೆ.

Yash Toxic Release Date-Rocking Star Yash-Toxic Movie Countdown 06: ಯಶ್‌ ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್‌ಡೌನ್ 06; ಇಂಗ್ಲಿಷ್ ಟ್ರೇಲರ್ ಬಿಡುಗಡೆ ಬಳಿಕ ಟಾಕ್ಸಿಕ್ ಕ್ರೇಜ್ ವಿದೇಶದಲ್ಲಿ ಹೇಗಿದೆ?

ಸದ್ಯದಲ್ಲೇ 'ಪ್ಯಾನ್ ವರ್ಲ್ಡ್ ಸ್ಟಾರ್' ಆಗಲಿರುವ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಹವಾ ಇಡೀ ಜಗತ್ತನ್ನೇ ವ್ಯಾಪಿಸಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್‌ಡೌನ್ ನಡೆಯುತ್ತಿದೆ. ಇನ್ನೇನು, ರಾಕಿ ಭಾಯ್ ಟಾಕ್ಸಿಕ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕೇವಲ 06 ದಿನಗಳಷ್ಟೇ ಬಾಕಿ ಇದೆ. ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿಮಾ ಪ್ರೇಮಿಗಳು ಟಾಕ್ಸಿಕ್ ಬಿಡುಗಡೆಯನ್ನು ಒಂದು ರಾಷ್ಟ್ರೀಯ ಹಬ್ಬದಂತೆ ಆಚರಿಸಲಿದ್ದಾರೆ. ಕರ್ನಾಟಕ, ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಟಾಕ್ಸಿಕ್ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಕೂಡ ಡಬ್ ಆಗಿ ಬಿಡುಗಡೆ ಆಗಲಿದೆ. ಹಾಲಿವುಡ್ ಸೇರಿದಂತೆ, ಜಗತ್ತಿನ ಖ್ಯಾತ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಮೂಡಿ ಬಂದಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಈ ಮೂಲಕ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ ಹಾಲಿವುಡ್ ಸಿನಿಮಾದಂತೆ ರಿಲೀಸ್ ಆಗಲಿದೆ. ಜಗತ್ತಿನಾದ್ಯಂತ 12000 ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ತೆರೆಕಾಣಲಿದೆ.

ನಮಿತ್ ಮಲ್ಹೋತ್ರಾ ಹಾಗೂ ಯಶ್ ಜಂಟಿ ನಿರ್ಮಾಣದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಕೂಡ ಈ ಬಜೆಟ್‌ನಲ್ಲಿ ಸೇರಿಕೊಂಡಿದೆ. ಅಪಾರ ನಿರೀಕ್ಷೆ ಸೃಷ್ಟಿಯಾಗಿರುವ ಈ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಸಿನಿಮಾ ಬಾಕ್ಸ್‌ ಆಫೀಸ್ ಪಂಡಿತರ ಹೇಳುತ್ತಿದ್ದಾರೆ. ನಟ ಯಶ್ ಅವರು ತಮ್ಮ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಬರೋಬ್ಬರಿ 4.5 ವರ್ಷಗಳಷ್ಟಿ ಸಮಯವನ್ನು ಮೀಸಲಾಗಿಟ್ಟು, ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಮೂಲಕ 'ಪ್ಯಾನ್ ವರ್ಲ್ಡ್' ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇನ್ನೇನು ಟಾಕ್ಸಿಕ್ ಕೇವಲ 06 ದಿನಗಳ ಬಳಿಕ ತೆರೆಯ ಮೇಲೆ ರಾರಾಜಿಸಲಿದೆ. ಹಾಗೇ, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಅಂದರೆ 08 ನವೆಂಬರ್ 2026ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ.

ನಿನ್ನೆ ಟಾಕ್ಸಿಕ್ ಸಿನಿಮಾ ಟ್ರೇಲರ್‌ನ ಇಂಗ್ಲಿಷ್ ವರ್ಷನ್ ಬಿಡುಗಡೆ ಆಗಿದ್ದು, ಸಖತ್ ಕ್ರೇಜ್ ಸೃಷ್ಟಿಸಿದೆ. ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 06 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಬಹಳಷ್ಟು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್‌ಡೌನ್ ಚಾಲ್ತಿಯಲ್ಲಿದೆ. ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ 'ಆಪ್‌ ಕಿ ಅದಾಲತ್‌'ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಮಾರ್ಮಿಕ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 06ರ ಕೌಂಟ್‌ಡೌನ್‌ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 05. ಪ್ರತಿದಿನದ ಅಪ್‌ಡೇಟ್‌ಗಾಗಿ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Vinay Gowda: ಸರ್ಕಲ್ ಗೆ ಎಷ್ಟು ಸೈಡ್ಸ್ ? ಉತ್ತರ ನೀಡಿ ಟ್ರೋಲರ್ಸ್ ಬಾಯಿಗೆ ಆಹಾರವಾದ ವಿನಯ್ ಗೌಡ
ಜೈದೇವ್ ರಹಸ್ಯ ಬಯಲಿಗೆಳೆಯಲು 'ಮಧುರ' ವ್ಯೂಹ ರಚಿಸಿದ IPS ಮಲ್ಲಿ; ಜಾಣೆಯಾದ ಭೂಮಿಕಾ