ರಾಮಾಯಣ ಚಿತ್ರಕ್ಕಾಗಿ ಯಶ್ ಸಂಭಾವನೆ ಕೇಳಿದ್ರೆ ಅಚ್ಚರಿ ಗ್ಯಾರಂಟಿ..! ಸಂಪೂರ್ಣ ಸಂಭಾವನೆ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದೇಣಿಗೆ ಕೊಟ್ಟ ಈ ನಟ

Published : Nov 02, 2026, 02:52 PM IST
Ramayana Movie

ಸಾರಾಂಶ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ತಾರಾಗಣದ ಸಂಭಾವನೆ ವಿವರಗಳು ಬಹಿರಂಗವಾಗಿವೆ. ರಣಬೀರ್ ಕಪೂರ್ ಅತಿ ಹೆಚ್ಚು ಸಂಭಾವನೆ ಪಡೆದರೆ, ಯಶ್ ಲಾಭದ ಪಾಲು ಪಡೆಯಲಿದ್ದಾರೆ. ವಿವೇಕ್ ಒಬೆರಾಯ್ ತಮ್ಮ ಸಂಭಾವನೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ದಾನ ಮಾಡಿದ್ದಾರೆ.

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ನಿರ್ದೇಶಕ ನಿತೇಶ್‌ ತಿವಾರಿ ಅವರ ‘ರಾಮಾಯಣ’ ಭಾರೀ ತಾರಾಗಣ ಹಾಗೂ ಅದ್ಧೂರಿ ನಿರ್ಮಾಣದ ಮೂಲಕ ಗಮನ ಸೆಳೆಯುತ್ತಿದೆ. ಭಾರತೀಯ ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್‌ ಚಿತ್ರಗಳಲ್ಲಿ ಒಂದಾಗುವ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ಬಾಲಿವುಡ್‌ ಮತ್ತು ದಕ್ಷಿಣ ಭಾರತದ ಹಲವು ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ಇದೀಗ ಚಿತ್ರದ ತಾರಾಗಣಕ್ಕೆ ನೀಡಲಾಗಿರುವ ಸಂಭಾವನೆಯ ಕುರಿತ ವರದಿಗಳು ಕುತೂಹಲ ಮೂಡಿಸಿವೆ.

ಸಿನೆಎಐಎಕ್ಸ್‌ (CineAIx) ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಮಾಹಿತಿಯ ಪ್ರಕಾರ, ಚಿತ್ರದ ಪ್ರಮುಖ ಕಲಾವಿದರು ಪಡೆದಿದ್ದಾರೆ ಎನ್ನಲಾದ ಸಂಭಾವನೆಯ ವಿವರ ಇಲ್ಲಿದೆ.

1. ರಣಬೀರ್‌ ಕಪೂರ್‌

‘ರಾಮಾಯಣ’ ಚಿತ್ರದಲ್ಲಿ ಭಗವಾನ್‌ ಶ್ರೀರಾಮನ ಪಾತ್ರದಲ್ಲಿ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಬರೋಬ್ಬರಿ ₹75 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಚಿತ್ರದ ತಾರಾಗಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ರಣಬೀರ್‌ ಪಾತ್ರರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

2. ಯಶ್‌

ಪ್ಯಾನ್‌ ಇಂಡಿಯಾ ಸ್ಟಾರ್‌ ಯಶ್‌ ಈ ಸಿನಿಮಾದಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ, ಈ ಪಾತ್ರಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿಲ್ಲ ಎನ್ನಲಾಗಿದೆ. ಚಿತ್ರದ ಸಹನಿರ್ಮಾಪಕರಲ್ಲಿ ಒಬ್ಬರಾಗಿರುವ ಯಶ್‌, ನಮಿತ್‌ ಮಲ್ಹೋತ್ರಾ ಅವರೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಹೀಗಾಗಿ, ಚಿತ್ರದ ಬಾಕ್ಸ್‌ ಆಫೀಸ್‌ ಗಳಿಕೆಯಿಂದ ಬರುವ ಲಾಭದಲ್ಲಿ ನಿರ್ದಿಷ್ಟ ಪಾಲನ್ನು ಪಡೆಯಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

3. ಸಾಯಿ ಪಲ್ಲವಿ

ನಿತೇಶ್‌ ತಿವಾರಿ ಅವರ ಎರಡು ಭಾಗಗಳ ‘ರಾಮಾಯಣ’ ಚಿತ್ರದಲ್ಲಿ ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ₹6 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಸಾಯಿ ಪಲ್ಲವಿ ಮುಂಚೂಣಿಯಲ್ಲಿದ್ದಾರೆ.

4. ರವಿ ದುಬೆ

ಜನಪ್ರಿಯ ಕಿರುತೆರೆ ನಟ ರವಿ ದುಬೆ ಚಿತ್ರದಲ್ಲಿ ಶ್ರೀರಾಮನ ಸಹೋದರ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ₹3 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

5. ಸನ್ನಿ ಡಿಯೋಲ್‌

ಬಾಲಿವುಡ್‌ನ ಆ್ಯಕ್ಷನ್‌ ಸ್ಟಾರ್‌ ಸನ್ನಿ ಡಿಯೋಲ್‌ ‘ರಾಮಾಯಣ’ ಚಿತ್ರದಲ್ಲಿ ಹನುಮಂತನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ₹20 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

6. ರಕುಲ್‌ ಪ್ರೀತ್‌ ಸಿಂಗ್‌

ನಟಿ ರಕುಲ್‌ ಪ್ರೀತ್‌ ಸಿಂಗ್‌ ಚಿತ್ರದಲ್ಲಿ ಶೂರ್ಪನಖಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ₹1.50 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

7. ವಿವೇಕ್‌ ಒಬೆರಾಯ್‌

ನಟ ವಿವೇಕ್‌ ಒಬೆರಾಯ್‌ ಚಿತ್ರದಲ್ಲಿ ಶೂರ್ಪನಖಿಯ ಪತಿ ವಿದ್ಯುಜ್ಜೀವನ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಈ ಪಾತ್ರಕ್ಕಾಗಿ ಅವರು ಸಂಭಾವನೆ ಪಡೆಯದೆ, ತಮಗೆ ನೀಡಬೇಕಿದ್ದ ಹಣವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ದೇಣಿಗೆ ನೀಡುವಂತೆ ನಿರ್ಮಾಪಕರಲ್ಲಿ ಮನವಿ ಮಾಡಿದ್ದಾರೆ ಎಂಬ ಮಾಹಿತಿ ವರದಿಯಲ್ಲಿದೆ.

8. ಲಾರಾ ದತ್ತಾ

ನಟಿ ಲಾರಾ ದತ್ತಾ ‘ರಾಮಾಯಣ’ ಚಿತ್ರದಲ್ಲಿ ರಾಣಿ ಕೈಕೇಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ಕೇವಲ ₹25 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಚಿತ್ರದ ತಾರಾಗಣದಲ್ಲಿ ಅತಿ ಕಡಿಮೆ ಸಂಭಾವನೆ ಪಡೆದ ಕಲಾವಿದೆ ಎಂಬ ಚರ್ಚೆಗೂ ಅವರು ಕಾರಣರಾಗಿದ್ದಾರೆ.

ಒಟ್ಟಿನಲ್ಲಿ, ‘ರಾಮಾಯಣ’ ಚಿತ್ರದ ತಾರಾಗಣದ ಸಂಭಾವನೆ ಕುರಿತ ಈ ಅಂಕಿಅಂಶಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಆದರೆ, ಈ ಮೊತ್ತಗಳ ಬಗ್ಗೆ ಚಿತ್ರತಂಡ ಅಥವಾ ಕಲಾವಿದರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ ಎನ್ನುವುದು ನಿಮ್ಮ ನೆನಪಲ್ಲಿರಲಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

₹450 ಕೋಟಿ ಭರ್ಜರಿ ಗಳಿಕೆಯ ಬೆನ್ನಲ್ಲೇ ಹನುಮಾನ್ ಅಂಶ್‌ ತಂಡದಲ್ಲಿ ಬಿರುಕು: ಸಿನಿಮಾ ಹಕ್ಕುಗಳಿಗಾಗಿ ಶುರುವಾಯ್ತು ಯುದ್ಧ!
ನೀತಾ ಅಂಬಾನಿ ಕಾರ್ಯಕ್ರಮದ ಸ್ಪೆಷಲ್ ಅಟ್ರಾಕ್ಷನ್ ಈ ಸುಂದರಿ: ಈಕೆ ಸ್ಟಾರ್ ಕ್ರಿಕೆಟರ್ ಮಾಜಿ ಪತ್ನಿ!