
ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಯ ʼರಾಮಾಯಣʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ರಿಲೀಸ್ ಆದ ಎರಡನೇ ದಿನಕ್ಕೆ ವಿಶ್ವದಾದ್ಯಂತ 220 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ವಿಶ್ವದಾದ್ಯಂತ ಒಟ್ಟು 155 ಕೋಟಿ ಗಳಿಸಿತ್ತು.
ಸಕ್ನಿಲ್ಕ್ ವರದಿ ಪ್ರಕಾರ ʼರಾಮಾಯಣ ಭಾಗ ಒಂದು : ರೈಸ್ ಆಫ್ ಎ ಲೆಜೆಂಡ್ʼ 2ನೇ ದಿನವೂ ತನ್ನ ಓಟವನ್ನು ಮುಂದುವರಿಸಿದೆ. ಕೇವಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ 220 ಕೋಟಿ ಕಲೆಕ್ಷನ್ ಮಾಡಿದೆ. ವಿದೇಶಗಳಲ್ಲಿಯೇ ಅದು 35 ಕೋಟಿ ರೂಪಾಯಿ ಹಣ ಗಳಿಸಿದೆ. ಆ ಮೂಲಕ ಕೇವಲ ಎರಡೇ ದಿನದಲ್ಲಿ ವಿದೇಶಗಳಿಂದಲೇ 86.25 ಕೋಟಿ ಹಣ ಸಂಗ್ರಹಿಸಿದೆ. ಆ ಮೂಲಕ ರಾಮಾಯಣವು ಅಂತಾರಾಷ್ಟ್ರೀಯ ಸಿನಿಮಾ ಮಾರುಕಟ್ಟೆಯಲ್ಲಿ ಭರ್ಜರಿ ಚಾಪು ಮೂಡಿಸಿದೆ. ಇತ್ತೀಚೆಗಿನ ಉಳಿದೆಲ್ಲ ಸಿನಿಮಾಗಳಿಗೆ ಹೋಲಿಸಿದರೆ ರಾಮಾಯಣ ಸಿನಿಮಾದ ಗಳಿಕೆ ಜೋರಾಗಿದೆ.
ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಸಿನಿಮಾ ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಮೊದಲ ದಿನ 116 ಕೋಟಿ ರೂಪಾಯಿ ಗಳಿಸಿದ್ದರೆ ಎರಡನೇ ದಿನ ಒಟ್ಟು 120 ಕೋಟಿ ರೂಪಾಯಿ ಗಳಿಸಿತ್ತು. ಎರಡು ದಿನದಲ್ಲಿ ಅನಿಮಲ್ ಒಟ್ಟು 236 ಕೋಟಿ ರೂಪಾಯಿ ಗಳಿಸಿತ್ತು.
ರಾಜಮೌಳಿ ಅವರ RRR ಸಿನಿಮಾ ರಿಲೀಸ್ ಆದ ಎರಡು ದಿನದಲ್ಲಿ 350 ಕೋಟಿ ರೂಪಾಯಿ, ಬಾಹುಬಲಿ 385 -390 ಕೋಟಿ, ಕೆಜಿಎಫ್ ಚಾಪ್ಟರ್ 290-300 ಕೋಟಿ, ಕಲ್ಕಿ 2898 ಎಡಿ 280-290 ಕೋಟಿ ರೂಪಾಯಿ ಗಳಿಸಿದ್ದವು. ಇನ್ನು, ಜವಾನ್ ಚಿತ್ರವು 240 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಪಠಾಣ್ ಬಿಡುಗಡೆಯಾದ ಎರಡೇ ದಿನದಲ್ಲಿ 219 ಕೋಟಿ ರೂಪಾಯಿ ಗಳಿಸಿತ್ತು.
ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ಭಗವಾನ್ ರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ಯಶ್ ನಟಿಸಿದ್ದಾರೆ. ಕಥೆಯು ಋಷಿ ವಿಶ್ವಾಮಿತ್ರರ ಜೊತೆ ರಾಮನ ತರಬೇತಿ, ಮಿಥಿಲಾದಲ್ಲಿ ಶಿವನ ಬಿಲ್ಲು ಮುರಿದ ನಂತರ ಸೀತಾ (ಸಾಯಿ ಪಲ್ಲವಿ) ಅವರೊಂದಿಗಿನ ವಿವಾಹ ಮತ್ತು ಅಯೋಧ್ಯೆಯಿಂದ ಅವನ 14 ವರ್ಷಗಳ ವನವಾಸದ ಬಗ್ಗೆ ಕಥೆ ಹೇಳುತ್ತದೆ. ರಾಮ, ಸೀತೆ ಮತ್ತು ಲಕ್ಷ್ಮಣ ಕಾಡಿನಲ್ಲಿ ನೆಲೆಸುತ್ತಿದ್ದಂತೆ ರಾವಣನ ಸಹೋದರಿ ಶೂರ್ಪನಖಿಯೊಂದಿಗಿನ ಮುಖಾಮುಖಿಯು ಸೀತೆಯ ಅಪಹರಣಕ್ಕೆ ಕಾರಣವಾಗುವ ಘಟನೆಗಳ ಸರಮಾಲೆಯನ್ನೂ ತಿಳಿಸುತ್ತದೆ.
ಇನ್ನು ರಾಮಾಯಣದ ಎರಡನೇ ಭಾಗವು 2028 ರ ದೀಪಾವಳಿಗೆ ಬರಲಿದೆ. 2027 ರ ಬಿಡುಗಡೆಗೆ ನಿಗದಿಯಾಗಿದ್ದ ಚಿತ್ರದ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹಾಕಲಾಗಿದೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಮೊದಲ ಭಾಗ ಚೆನ್ನಾಗಿ ಓಡಿದರೆ ಮೂರನೇ ಭಾಗವನ್ನೂ ಮಾಡುವ ಬಗ್ಗೆ ಪರೋಕ್ಷವಾಗಿ ಚಿತ್ರತಂಡ ಸುಳಿವು ನೀಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.