
ರಾಮಾನಂದ ಸಾಗರ್ ಅವರ 'ರಾಮಾಯಣ' ಸೀರಿಯಲ್‌ನಲ್ಲಿ ಸೀತೆಯ ಪಾತ್ರ ಮಾಡಿ ಮನೆಮಾತಾದ ನಟಿ ದೀಪಿಕಾ ಚಿಖ್ಲಿಯಾ, ಇತ್ತೀಚೆಗೆ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹೊಸ ಸ್ಟೈಲ್‌ಗೆ ಅಭಿಮಾನಿಗಳು ಏನಂದ್ರು? ಯಾಕೆ ಈ ಫೋಟೋಗಳು ಇಷ್ಟೊಂದು ವೈರಲ್ ಆಗ್ತಿವೆ? ಇಲ್ಲಿದೆ ಡೀಟೇಲ್ಸ್.
ರಾಮಾನಂದ ಸಾಗರ್ ಅವರ ಸೂಪರ್ ಹಿಟ್ ಟಿವಿ ಸೀರಿಯಲ್ 'ರಾಮಾಯಣ'ದಲ್ಲಿ ಸೀತೆಯ ಪಾತ್ರ ಮಾಡಿ ಮನೆಮಾತಾದ ನಟಿ ದೀಪಿಕಾ ಚಿಖ್ಲಿಯಾ, ಇವತ್ತಿಗೂ ಜನರ ಮನಸ್ಸಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಅವರ ಕೆಲವು ಹೊಸ ಫೋಟೋಗಳು ಈಗ ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಅವರು ಮಾಡರ್ನ್ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಅವರ ಈ ಲುಕ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.
ಜನ ಅವರ ಫೋಟೋಗಳಿಗೆ ಭರ್ಜರಿ ಕಾಮೆಂಟ್ಸ್ ಮಾಡ್ತಿದ್ದಾರೆ. ಹಲವರು ಅವರ ಸೌಂದರ್ಯ, ಸರಳತೆಯನ್ನು ಹೊಗಳಿದ್ದಾರೆ. ಇಷ್ಟು ವರ್ಷಗಳ ಹಿಂದೆ ಹೇಗಿದ್ದರೋ, ಈಗಲೂ ಅಷ್ಟೇ ಚಂದ ಕಾಣ್ತಾರೆ ಅಂತ ಕೆಲವರು ಹೇಳಿದ್ದಾರೆ. ಕೆಲವು ಅಭಿಮಾನಿಗಳಂತೂ 'ನಿಮಗೆ ಸದಾ ಜಯವಾಗಲಿ' ಅಂತ ಕಾಮೆಂಟ್ ಮಾಡಿದ್ದಾರೆ. ದೀಪಿಕಾ ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವಯಸ್ಸು ಕೇವಲ ಒಂದು ನಂಬರ್ ಅಷ್ಟೇ ಅಂತ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಹೇಗಿದೆ ದೀಪಿಕಾ ಚಿಖ್ಲಿಯಾ ಹೊಸ ಲುಕ್?
ದೀಪಿಕಾ ಚಿಖ್ಲಿಯಾ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡಾಗ ಜೀನ್ಸ್ ಮತ್ತು ಬಿಳಿ ಶರ್ಟ್ ಧರಿಸಿದ್ದರು. ಕೂದಲನ್ನು ಫ್ರೀಯಾಗಿ ಬಿಟ್ಟು, ಕಪ್ಪು ಕನ್ನಡಕ ಹಾಕಿದ್ದರು. ಅವರ ಲುಕ್ ಫಾರ್ಮಲ್ ಆಗಿದ್ದರೂ, ಅವರನ್ನು ನೋಡಿದ ತಕ್ಷಣ ಅಭಿಮಾನಿಗಳು ಸೀತಾಮಾತೆಯಾಗಿ ನೆನಪಿಸಿಕೊಂಡರು. ಹಲವರು ಕೈಮುಗಿದು ಅವರಿಗೆ ನಮಸ್ಕರಿಸಿದರು. ನಟಿ ಕೂಡ ಹಲವರ ಯೋಗಕ್ಷೇಮ ವಿಚಾರಿಸಿ 'ಜೈ ಶ್ರೀ ರಾಮ್' ಎಂದರು. ದೀಪಿಕಾ ಅವರ ಈ ವಿಡಿಯೋ ವೈರಲ್ ಆಗಿದ್ದು, ಒಬ್ಬರು 'ಇವರನ್ನು ನೋಡಿದ ತಕ್ಷಣ ಸೀತಾಮಾತೆಯ ಸರಳತೆ ನೆನಪಾಗುತ್ತೆ' ಎಂದು ಬರೆದಿದ್ದಾರೆ.
ಇನ್ನೊಬ್ಬರು, 'ರಾಮಾಯಣದಲ್ಲಿ ಸೀತಾಮಾತೆಯ ಪಾತ್ರವನ್ನು ಎಷ್ಟು ಚೆನ್ನಾಗಿ ಮಾಡಿದ್ದಾರೆ ಅಂದ್ರೆ, ನಿಜವಾಗಿಯೂ ಅವರೇ ಸೀತಾಮಾತೆ ಅನಿಸುತ್ತೆ' ಎಂದಿದ್ದಾರೆ. ರಾಜ್ ಕುಮಾರ್ ಎಂಬ ಬಳಕೆದಾರರು, 'ದೀಪಿಕಾ ಮ್ಯಾಮ್ ನಿಜವಾಗಿಯೂ ಸೀತಾಮಾತೆಯಂತೆ ಕಾಣುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಕುನಾಲ್ ಎಂಬುವವರು, 'ರಾಮಾಯಣದಲ್ಲಿ ನೀವು ಮಾಡಿದ ಸೀತಾಮಾತೆಯ ಪಾತ್ರಕ್ಕೆ ಈ ಜಗತ್ತು ಸದಾ ನಿಮ್ಮಗೆ ಆಭಾರಿಯಾಗಿರುತ್ತೆ' ಎಂದು ಬರೆದಿದ್ದಾರೆ. ಜೈಪಾಲ್ ವಿರಾಟ್ ಎಂಬ ಬಳಕೆದಾರರು, 'ನಾವು ಇವತ್ತಿಗೂ ನಿಮ್ಮನ್ನು ಸೀತಾಮಾತೆಯ ದೃಷ್ಟಿಯಿಂದಲೇ ನೋಡುತ್ತೇವೆ' ಎಂದಿದ್ದಾರೆ. ಇದೇ ರೀತಿ ಹಲವು ಬಳಕೆದಾರರು ಕಾಮೆಂಟ್‌ಗಳಲ್ಲಿ ಹಾರ್ಟ್ ಮತ್ತು ಕೈಮುಗಿಯುವ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
ದೀಪಿಕಾ ಚಿಖ್ಲಿಯಾ ತಮ್ಮ ಕೆರಿಯರ್‌ನಲ್ಲಿ ಹಲವು ಸಿನಿಮಾಗಳು ಮತ್ತು ಟಿವಿ ಸೀರಿಯಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು 'ರಾಮಾಯಣ' ಸೀರಿಯಲ್‌ನ ಸೀತೆ ಪಾತ್ರ. ಇವತ್ತಿಗೂ ಅಭಿಮಾನಿಗಳು ಅವರನ್ನು ಇದೇ ಪಾತ್ರದಿಂದ ನೆನಪಿಸಿಕೊಳ್ಳುತ್ತಾರೆ. ಕೆಲವು ಸಮಯದ ಹಿಂದೆ ಸಿದ್ಧಾರ್ಥ್ ಕಣ್ಣನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ದೀಪಿಕಾ ಒಂದು ಘಟನೆ ಹಂಚಿಕೊಂಡಿದ್ದರು. ಒಮ್ಮೆ ಅವರಿಗೆ ಒಂದು ಟಿವಿ ಸೀರಿಯಲ್‌ನಲ್ಲಿ ಕೌಸಲ್ಯೆಯ ಪಾತ್ರಕ್ಕೆ ಆಫರ್ ಬಂದಿತ್ತಂತೆ. ಆದರೆ, ಅವರ ಸಹೋದರ ಆ ಪಾತ್ರವನ್ನು ಮಾಡಬೇಡ ಎಂದು ಸಲಹೆ ನೀಡಿದ್ದರಂತೆ. 'ನಿನ್ನ ಗುರುತು ಸೀತೆಯಾಗಿ ಉಳಿದಿದೆ, ಅದನ್ನು ಕಳೆದುಕೊಳ್ಳಬೇಡ' ಎಂದು ಅವರ ಸಹೋದರ ಹೇಳಿದ್ದರಂತೆ. ಕಳೆದ 35 ವರ್ಷಗಳಿಂದ ತಾನು ಸೀತೆಯಾಗಿ ಬದುಕುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದು ದೀಪಿಕಾ ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.